ಅಫಜಲಪುರ: ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಜನ ಜಾನುವಾರುಗಳಿಗೆ ಜೀವನದಿಯಾಗಿರುವ ಭೀಮಾ ನದಿಗೆ ಮಹಾರಾಷ್ಟçದ ಉಜನಿ ಜಲಾಶಯದಿಂದ ನಮ್ಮ ಪಾಲಿನ ನೀರು ಬಿಡುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೋಂಡಿರುವ ಜೆಡಿಎಸ್ ಮುಖಂಡ ಹೋರಾಟಗಾರ ಶಿವಕುಮಾರ ನಾಟಿಕಾರ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ನಮಗೆ ಅವರ ಆರೋಗ್ಯವು ಬಹಳ ಮುಖ್ಯ ಎಂದು ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಕಳವಳ ವ್ಯಕ್ತ ಪಡಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿ ಮಾತನಾಡುತ್ತಾ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ ತಮ್ಮಲ್ಲಿನ ಜಲಾಶಯಗಳನ್ನು ಭರ್ತಿ ಮಾಡಿಕೋಂಡು ಹೆಚ್ಚಾದ ನೀರನ್ನು ಭೀಮಾ ನದಿಗೆ ಹರಿಬಿಡುವ ಮಹಾರಾಷ್ಟçದವರು ಬಚಾವತ್ ಆಯೋಗದ ತಿರ್ಪಿನ ಪ್ರಕಾನ ಇಂತಹ ಕಷ್ಟದ ಸಮಯದಲ್ಲಿ ನಮ್ಮ ಹಕ್ಕಿನ ನೀರನ್ನು ಸಹ ಬಿಡಬೇಕಾಗುತ್ತದೆ. ಇಡೀ ನದಿ ಒಣಗಿ ಹೋಗಿದ್ದರು ಕೂಡ ಹನಿ ನೀರು ಬಿಡದಿರುವುದು ಸರಿಯಲ್ಲ. ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಜಲಸಂಪನ್ಮೂಲ ಸಚಿವರೊಂದಿಗೆ ಮಾತನಾಡಿಸಿ ಮಹಾರಾಷ್ಟ್ರ ಸರ್ಕಾರದಿಂದ ನೀರು ಹರಿಸುವಂತೆ ಒತ್ತಾಯ ಮಾಡಲಾಗುತ್ತದೆ ಎಂದ ಅವರು ಶಿವಕುಮಾರ ನಾಟಿಕಾರ ಅವರು ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡವರಾಗಿದ್ದಾರೆ. ಅವರ ಹೋರಾಟಗಳಿಗೆ ನಮ್ಮ ಬೆಂಬಲವು ಇದೆ. ಆದರೆ ಅವರ ಆರೋಗ್ಯವು ಅಷ್ಟೇ ಮಹತ್ವದ್ದಾಗಿದೆ. ಹೀಗಾಗಿ ವೈದ್ಯರು ಅವರ ಆರೋಗ್ಯದ ಮೇಲೆ ವಿಶೇಷ ನೀಗಾ ಇಡಿ ಎಂದು ಸೂಚಿಸಿದರು.
ಮುಖಂಡ ಲಚ್ಚಪ್ಪ ಜಮಾದಾರ ಮಾತನಾಡುತ್ತಾ ವಿಧಾನಸಭೆಯಲ್ಲಿ ಎಲ್ಲರೂ ಕೇವಲ ಕಾವೇರಿ ನದಿಯ ಬಗ್ಗೆ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಮ್ಮ ಭಾಗದಲ್ಲೂ ನದಿಗಳಿವೆ, ಈ ಭಾಗದಲ್ಲೂ ಜನ ಬದುಕುತ್ತಾರೆನ್ನುವುದನ್ನೇ ಮರೆತಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಲ್ಲಾ ಸರ್ಕಾರಗಳಿಂದಲೂ ಅನ್ಯಾಯವಾಗಿದೆ. ಉಜನಿ ಜಲಾಶಯದ ನಮ್ಮ ಪಾಲಿನ ನೀರು ಪಡೆಯುವಲ್ಲಿ ನಮ್ಮ ಭಾಗದ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಇದು ನಿಜಕ್ಕೂ ನಮ್ಮ ದುರಂತ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪಪ್ಪು ಪಟೇಲ, ಅವ್ವಣ್ಣ ಮ್ಯಾಕೇರಿ, ರಮೇಶ ಹೂಗಾರ, ಶರಣು ಪದಕಿ, ಶಾಮರಾವ ಪಾಟೀಲ, ಚಿದಾನಂದ ಮಠ, ಅಶೋಕ ಬಗಲಿ, ಶೇಖರಗೌಡ ಪಾಟೀಲ್ ಆನೂರ, ಭೀಮರಾವ ಕಲಶೆಟ್ಟಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

