ಸಿಂದಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ಯಾಪ್ತಿಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾಗಿ ಸಿಂದಗಿಯ ಹಿರಿಯ ಸಾಹಿತಿ, ಕಥೆಗಾರ, ನಿವೃತ್ತ ಪ್ರಾಚಾರ್ಯ ಡಾ. ಚನ್ನಪ್ಪ ಕಟ್ಟಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಜಾನಪದ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಪಡಶೆಟ್ಟಿ ಅವರನ್ನು ಮಾಜಿ ಎಂಎಲ್ಸಿ ಅರುಣ ಶಹಾಪುರ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಅರುಣ ಶಹಾಪುರ, ಸಿಂದಗಿಗೆ ನಿಮ್ಮಿಂದ ಒಂದು ದೊಡ್ಡ ಹೆಸರು ಬಂದಿದೆ. ನಿಮ್ಮ ನೇತೃತ್ವದಲ್ಲಿ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿದ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ಸರಕಾರ ಈ ಬಾರಿ ಒಂದು ಹೊಸ ಜವಾಬ್ದಾರಿ ನೀಡಿದೆ. ನಾನು ಮತ್ತು ನನ್ನ ೭ಜನ ಸದಸ್ಯರು ಸೇರಿಕೊಂಡು ೩ವರ್ಷಗಳ ಅವಧಿಯೊಳಗೆ ಪ್ರಾಧಿಕಾರದ ಕಾರ್ಯಗಳು ಎಲ್ಲಿಗೆ ಬಂದು ನಿಂತಿವೆ ಮುಂದೇನು ಮಾಡಬೇಕು ಎಂದು ಯೋಚಿಸುವೆವು ಎಂದರು.
ಈ ವೇಳೆ ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಜಾನಪದ ಸಂಸ್ಕೃತಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿಯನ್ನು ನನಗೆ ನೀಡಿದ್ದು ನನ್ನ ವಿದ್ಯಾ ಗುರುಗಳಾದ ದಿ. ಡಾ.ಎಂ.ಎಂ.ಕಲಬುರ್ಗಿ ಹಾಗೂ ಲಿಂ. ಡಾ.ವಿ.ವಿ ಸಾಲಿಮಠ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದು ಹೇಳಿದರು.
ಈ ವೇಳೆ ಭೀಮಾಶಂಕರ ತಾರಾಪುರ, ಶಿವಾನಂದ ರೋಡಗಿ, ಆರ್.ಎಚ್.ಬಿರಾದಾರ, ರಾಜೂ ಬಿರಾದಾರ, ಅರವಿಂದ ತೇಲಿ, ಸಜ್ಜನ, ಮಲ್ಲಿಕಾರ್ಜುನ ಪಡಶೆಟ್ಟಿ, ಸುಭಾಸ ಅರಳಗುಂಡಗಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

