ಸಿಂದಗಿ: ಪಟ್ಟಣದ ಊರಿನ ಹಿರಿಯ ಮಠದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ೪೪ ನೇ ಪುಣ್ಯ ಸ್ಮರಣೆಯ ನಿಮಿತ್ಯ ಶ್ರೀಗಳ ರಜತಮೂರ್ತಿಯ ಮೆರವಣಿಗೆ ಬುಧವಾರ ಪಟ್ಟಣದ ವಿವಿಧ ಬಡಾವಣೆಯ ಮೂಲಕ ವಾದ್ಯ ವೈಭವದೊಂದಿಗೆ ಸಂಚರಿಸಿತು.
ಬುಧವಾರ ಬೆಳಗ್ಗೆ ೯ ಗಂಟೆಗೆ ಪಲ್ಲಕ್ಕಿಯಲ್ಲಿ ವಿರಾಜಮಾನವಾದ ಶ್ರೀಗಳ ರಜತ ಮೂರ್ತಿಗೆ ಊರನ ಹಿರಿಯ ಮಠದ ಶ್ರೀ ಶಿವಾನಂದ ಶಿವಾಚಾರ್ಯರು ಪೂಜೆಯನ್ನು ನೆರವೇರಿಸಿ ಮೆರವಣಿಗೆಗೆ ಚಾಲನೆಯನ್ನು ನೀಡಿ ಮಾತನಾಡಿ, ಲಿಂ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಬಡವರಲ್ಲಿ ಭಗವಂತನನ್ನು ಕಂಡಂತವರು. ಅವರ ಬದುಕಿನುದ್ದಕ್ಕೂ ಬಡ ಮಕ್ಕಳಿಗಾಗಿ ಸೇವೆಗೈದ ಸನ್ಯಾಸಿ. ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಅನೇಕ ಕಡೆಗಳಲ್ಲಿ ಸಂಸ್ಕೃತ ಪಾಠ ಶಾಲೆಗಳನ್ನು ತೆರೆದು ಅನೇಕ ಸ್ವಾಮಿಗಳಿಗೆ ಬೆಳಕಾದವರು ಎಂದರು. ಮೆರವಣಿಗೆಯುದ್ದಕ್ಕೂ ಸುಮಂಗಲೆಯರು ಆರತಿ ಹಿಡಿದು ಸಾಗಿದರು. ಮೆರವಣಿಗೆಯ ಮಾರ್ಗ ಮಧ್ಯದಲ್ಲಿ ಅನೇಕ ಭಕ್ತರು ತಂಪು ಪಾನಿಯಗಳನ್ನು ನೀಡಿ ಸೇವೆಗೈದರು. ಶ್ರೀಮಠದಿಂದ ಪ್ರಾರಂಭಗೊಂಡ ಶ್ರೀಗಳ ಮೆರವಣಿಗೆ ಹಳೆ ಬಜಾರ, ಅರಳಗುಂಡಗಿಯವರ ಓಣಿ, ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆ, ಶ್ರೀ ಸ್ವಾಮಿ ವಿವೇಕಾನಂದ ವೃತ್ತ, ಸಾರಂಗಮಠದ ಮಾರ್ಗವಾಗಿ, ಶ್ರೀ ನೀಲಗಂಗಾ ದೇವಸ್ಥಾನದ ಮೂಲಕ ಶ್ರೀಮಠಕ್ಕೆ ತೆರಳಿತು.
ಮೆರವಣಿಗೆಯುದ್ದಕ್ಕೂ ದಯಾನಂದಗೌಡ ಬಿರಾದಾರ, ಅಶೋಕ ವಾರದ ಸೇರಿ ಅನೇಕ ಶ್ರೀಮಠದ ಭಕ್ತರು ನೀರು, ಮಜ್ಜಿಗೆ, ಕಬ್ಬಿನ ಹಾಲು ಭಕ್ತರಿಗೆ ನೀಡಿದರು.
ಮೆರವಣಿಗೆಯಲ್ಲಿ ಕಲಬುರಗಿಯ ರೋಜಾ ಹಿರೇಮಠದ ಶ್ರೀಕೆಂಚಬಸವ ಶಿವಾಚಾರ್ಯರು, ರಟಕಲ್ ಶ್ರೀರೇವಣಸಿದ್ದ ಶಿವಾಚಾರ್ಯರು, ಸಂಶಿಯ ವಿರಕ್ತಮಠದ ಶ್ರೀಚೆನ್ನಬಸವ ದೇವರು, ಗದಗ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಶ್ರೀಶಿವಪ್ರಸಾದ ದೇವರು, ಶಿವಪ್ಪಗೌಡ ಬಿರಾದಾರ, ಡಾ.ಎಂ.ಎಂ.ಪಡಶೆಟ್ಟಿ, ಮಹಾದೇವಪ್ಪ ಮುಂಡೇವಾಡಗಿ, ಅಶೋಕ ವಾರದ, ಸೋಮನಗೌಡ ಬಿರಾದಾರ, ದಯಾನಂದ ಬಿರಾದಾರ, ಶಾಂತೂ ಹಿರೇಮಠ, ಶಿವಾನಂದ ದುರ್ಗಿ, ಅನೀಲಗೌಡ ಬಿರಾದಾರ, ಸಂಗಮೇಶ ಕುಂಬಾರ, ಬಾಬು ರೆಬಿನಾಳ, ಶಿವಪ್ಪ ಕುಂಬಾರ, ಸುನೀಲ ಪವಾಡಿ, ಶಶಿಕಾಂತ ಚಿಕ್ಕಯನಮಠ, ರಾಜಶೇಖರ ಜೋಗೂರ, ಅಶೋಕ ಕುಲಕರ್ಣಿ, ನೀಲಪ್ಪ ಬಳಗಾನೂರ, ಶಾಂತೇಶ ದುರ್ಗಿ, ಬಸಯ್ಯ ಗೋಲಗೇರಿಮಠ, ಕಿರಣ ಕೋರಿ, ರವಿ ಗವಸಾನಿ, ಶ್ರೀಶೈಲ ನಂದಿಕೋಲ, ಬಿ.ಎಸ್.ಗಾಳಿ, ಸತೀಶ ಹಿರೇಮಠ, ಕಿರಣ ಶಿವಶಿಂಪಗೇರ, ಅನೀಲ ಪಟ್ಟಣಶೆಟ್ಟಿ, ಮುತ್ತು ಪಟ್ಟಣಶೆಟ್ಟಿ, ಜಗದೀಶ ಪಾಟೀಲ, ಪ್ರಸನ್ನಕುಮಾರ ಜೋಗುರ, ಸಿದ್ದಲಿಂಗ ಕಿಣಗಿ, ಗದಗಯ್ಯ ನಂದಿಮಠ, ಭಾಗ್ಯಶ್ರೀ ನಂದಿಮಠ ಸೇರಿದಂತೆ ಶ್ರೀಮಠದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

