Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜೂನ್ 16 ಮತ್ತು 17 ರಂದು ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ.ಧಾರವಾಡದಲ್ಲಿರುಬ ನಿಡೆಕ್ ಇಂಡಿಯಾ ಪ್ರೈ. ಲಿ.‌ ಕಂಪನಿ ತರಬೇತುದಾರ(Production Trainee) ಮತ್ತು ಅಪ್ರಂಟಿಸ್ ತರಬೇತಿಗಾಗಿ ಈ‌ ಕ್ಯಾಂಪಸ್ ಸಂದರ್ಶನ ನಡೆಸಲಿದೆ.ಐಟಿಐನ‌ ನಾನಾ ಟ್ರೇಡುಗಳಲ್ಲಿ ಪಾಸಾದ ಮತ್ತು ದ್ವಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ 18 ರಿಂದ 25 ವರ್ಷದೊಳಗಿನ ತರಬೇತುದಾರರಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಜಿಲ್ಲೆಯ ನಾನಾ ಐಟಿಐ ಕಾಲೇಜಿನ ತರಬೇತಿದಾರರು ಈ ಆವರಣ ಸಂದರ್ಶನದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರದ ಪ್ರಭಾರ ಪ್ರಾಚಾರ್ಯ ಎಸ್. ಜೆ. ಕರಿಗಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880716694 ಮತ್ತು 9916853605 ಸಂಪರ್ಕಿಸಬಹುದಾಗಿದೆ.

Read More

ವಿಜಯಪುರದಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ನಡೆದರೆ ೫೦ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನೀತಿನ್ ನಬೀನ್ ಹೇಳಿಕೆಯೇ ಎಸ್‌ಐಆರ್ ಕರಾಳತೆಗೆ ಒಂದು ದೊಡ್ಡ ನಿದರ್ಶನವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಹೇಳಿದರು.ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶನಿವಾರ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿಲುವು ವ್ಯಕ್ತಪಡಿಸಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈ ರೀತಿ ಹೇಳಿಕೆ ನೀಡಿದ್ದಾರೆ, ಆ ಮೂಲಕ ಎಸ್‌ಐಆರ್ ಎನ್ನುವುದು ಬಿಜೆಪಿ ಅನುಕೂಲಕರ ಎಂದು ಅವರೇ ಹೇಳಿದ್ದಾರೆ, ಈಗಲಾದರೂ ವಾಸ್ತವಿಕತೆಯನ್ನು ಚುನಾವಣಾ ಆಯೋಗ ಅರಿಯಬೇಕಿದೆ, ಈ ಬಗ್ಗೆ ಬಹಿರಂಗ ಸವಾಲಿಗೆ ಅನೇಕ ಬಾರಿ ಆಹ್ವಾನಿಸಿದರೂ ಸಹ ಚುನಾವಣಾ ಆಯೋಗ ಸವಾಲು ಏಕೆ ಸ್ವೀಕರಿಸುತ್ತಿಲ್ಲ ಎಂದರು.ಅಲ್ಪಸಂಖ್ಯಾತ ಮುಖಂಡ ಮೊಹ್ಮದ್‌ರಫೀಕ್ ಟಪಾಲ್ ಮಾತನಾಡಿ, ಪಶ್ಚಿಮ ಬಂಗಾಳದ ನಿಕಟಪೂರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿಯೇ ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಿರುವುದು…

Read More

ವಿಜಯಪುರದಲ್ಲಿ ಬಸವಾದಿ ಚಿಂತಕ ಬಸನಗೌಡ ಹರನಾಳ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ಸಹ ಕನೇರಿ ಶ್ರೀಗಳು ಬಸವಾದಿ ಶರಣರನ್ನು ನಿಂದಿಸುವ, ವಚನಗಳ ಸಾರವನ್ನು ಅಪಾರ್ಥ ಮಾಡುವ ಹಾಗೂ ಬಸವಾದಿ ಅನುಯಾಯಿಗಳನ್ನು ಬಸವ ತಾಲಿಬಾನಿ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆಯನ್ನು ಮಾಡುತ್ತಿದ್ದಾರೆ ಎಂದು ಬಸವಾದಿ ಚಿಂತಕ ಬಸನಗೌಡ ಹರನಾಳ ಅಸಮಾಧಾನ ಹೊರಹಾಕಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಯಾಗಿ ಬಸವಾದಿ ಚಿಂತಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ, ಬಸವಾದಿ ಶರಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕೋರ್ಟ್ ಸಹ ಸ್ವಾಮೀಜಿಗಳಿಗೆ ಛಿಮಾರಿ ಹಾಕಿದೆ, ಆದರೂ ಸಹ ಶರಣರ ವಚನ ತಿರುಚುವುದು, ಬಸವಾದಿ ಶರಣರನ್ನು ಬೈಯುತ್ತಿದ್ದಾರೆ.ಬಸವ ತಾಲಿಬಾನಿ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಲೇ ಇದ್ದಾರೆ, ನಿಂದನೆ ಮಾಡುವುದು ಸಲ್ಲದ ಕೆಲಸ, ಮಾಡುತ್ತಿರುವ ಉದ್ದೇಶ ಸರಿಯಿಲ್ಲ, ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಬಸವಣ್ಣನಿಗೆ ವಿರೋಧಿ ನಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಎಲ್ಲ ಜಿಲ್ಲೆಗಳಲ್ಲಿ ಕನೇರಿ ಶ್ರೀಗಳ ವಿರುದ್ದ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮದ ಶ್ರೀಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಸಂಸದರ ನಿಧಿಯಿಂದ ರಂಗಮಂಟಪ ನಿರ್ಮಾಣಕ್ಕೆ ಅನುದಾನ ಒದಗಿಸಲು ಆಗ್ರಹಿಸಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಪಡಗಾನೂರ ಗ್ರಾಮಸ್ಥರು ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸಂಸದರನ್ನು ಭೇಟಿ ಮಾಡಿದ ಗ್ರಾಮಸ್ಥರು ರಂಗಮಂಟಪ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಾನಪದ ಕಲಾವಿದ ಗುರುನಾಥ ಮುರುಡಿ ಮಾತನಾಡಿ, ತಾಲ್ಲೂಕಿನ ಪಡಗಾನೂರ ಗ್ರಾಮದ ಶ್ರೀಸೋಮೇಶ್ವರ ದೇವಸ್ಥಾನ ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಕಟ್ಟಡವಾಗಿದೆ. ಇಲ್ಲಿ ಪ್ರತಿ ವರ್ಷ ಯುಗಾದಿಯ ನಂತರ ಏಕಾದಶಿಯಂದು ಜಾತ್ರಾ ಮಹೋತ್ಸವ ಜರುಗುತ್ತದೆ. ಈ ಜಾತ್ರೆಯ ಅಂಗವಾಗಿ ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಈ ಎಲ್ಲ ಕಾರ್ಯಕ್ರಮಗಳಿಗೆ ಸೂಕ್ತವಾದ ರಂಗಮಂಟಪ ಇಲ್ಲದೆ ಇರುವುದರಿಂದ ಸಾಕಷ್ಟು ಬಾರಿ ತೊಂದರೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳ ಯಶಸ್ವಿಗಾಗಿ ರಂಗಮಂಟಪ ಅವಶ್ಯಕತೆಯಿದೆ. ಜೊತೆಗೆ ದೇವಸ್ಥಾನ ಆವರಣದಲ್ಲಿ ಹೆಚ್ಚುವರಿ ಜಾಗೆ ಇರುವುದರಿಂದ ಇಲ್ಲಿ ರಂಗಮಂಟಪ ನಿರ್ಮಾಣ ಮಾಡಬಹುದಾಗಿದೆ. ಆದ್ದರಿಂದ ಸಂಸದರ ನಿಧಿಯಿಂದ ಅನುದಾನ ಒದಗಿಸಿ ರಂಗಮಂಟಪ ನಿರ್ಮಾಣಕ್ಕೆ…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಹೆನ್ರಿ ಡುನಾಂಟ್ ಅವರು, “ನೀವು ಬೇರೊಬ್ಬರಿಗೆ ಜೀವವನ್ನು ನೀಡಲು ಸಾಧ್ಯವಿಲ್ಲ, ಆದರೆ ಅವರ ಜೀವವನ್ನು ಉಳಿಸಲು ಖಂಡಿತವಾಗಿಯೂ ಸಾಧ್ಯವಿದೆ” ಎಂದು ಹೇಳಿದ್ದಾರೆ. ಅಂದರೆ ವ್ಯಕ್ತಿ ತನ್ನ ನೋವು ತಾನು ಅರಿಯಬಹುದು. ಆದರೆ ಇತರರ ನೋವನ್ನು ಅರಿಯುವ ಸಾಮರ್ಥ್ಯ ಪಡೆದರೆ ಅದುವೇ ನಿಜವಾದ ಮಾನವೀಯತೆಯ ಲಕ್ಷಣ” ಎಂದು ಹೇಳಿದ್ದಾರೆ. ಜೀವಕ್ಕೆ ಸ್ಪಂದಿಸು ಮನುಜ, ರಕ್ತದಾನ ಮಾಡು. ಒಂದು ಹನಿ ನೀರು ಕೊಟ್ಟರೆ ಜೀವ ಉಳಿಸಬಹುದು. ಆದರೆ ಒಂದು ಹನಿ ರಕ್ತದಾನ ಮಾಡಿದರೆ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ವ್ಯಕ್ತಿಯ ಜೀವನವನ್ನು ಬೆಳಗಿಸಬಹುದು. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯದಿಂದಿರಲು ಶುದ್ಧ ರಕ್ತವು ಅತಿ ಅವಶ್ಯಕ. ಅದಕ್ಕಾಗಿ ಯುವಕರು ಅಪಘಾತಗಳಂತಹ ಘಟನೆಗಳಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿರುವ ಜೀವಿಗಳಿಗೆ ರಕ್ತದಾನ ಮಾಡಿ ಮರು ಜೀವ ನೀಡಬೇಕು. ಜೀವನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧನೆ ಮಾಡಬೇಕು. ಅದರಲ್ಲಿ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹಲೋ ಅವನಿ,ಮುಗಿಲೆತ್ತರಕ್ಕೆ ನಿಂತಿದ್ದ ಕಾಲೇಜಿನ ಕಟ್ಟಡದ ಮುಂದೆ ಎಲ್ಲೆಲ್ಲೂ ವಿದ್ಯಾರ್ಥಿಗಳ ಸಡಗರದ ಓಡಾಟ. ಅಂದು ಕೊನೆ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ವಾರ್ಷಿಕೋತ್ಸವದ ಆಚರಣೆ ಇತ್ತು. ಹಬ್ಬದ ವಾತಾವರಣದಲ್ಲಿ ನೂರಾರು ಹುಡುಗಿಯರ ನಡುವೆ ತಿದ್ದಿ ತೀಡಿದ ಬೊಂಬೆಯಂತಿರುವ ನೀನು ಚಂದದ ಮುಗುಳ್ನಗೆ ಹೊತ್ತು ಓಡಾಡುತ್ತಿದ್ದೆ. ನಿನ್ನ ಕಂಡು ಪಡ್ಡೆ ಹುಡುಗರ ಕಣ್ಣುಗಳು ಅರಳಿದವು. ಆದರೆ ಛೇಡಿಸುವ ಸಾಹಸ ಯಾರೂ ಮಾಡಲಿಲ್ಲ. ಹುಡುಗಿಯರು ಸಹ ಕಣ್ಮಿಟುಕಿಸದೇ ನೋಡತೊಡಗಿದ್ದರು. ಉಳಿದ ಹುಡುಗಿಯರ ನಡುವೆ ನೀನು ವಿಭಿನ್ನವಾಗಿ ಎದ್ದು ಕಾಣುತ್ತಿದ್ದೆ. ಬೆರಳಣಿಕೆಯಷ್ಟು ಪ್ರತಿಭಾವಂತ ಹುಡುಗಿಯರಲ್ಲಿ ಮಿಂಚುತ್ತಿದ್ದೆ. ನಿನ್ನ ಭಾಷಣ ಕಲೆ ಪ್ರಬಂಧ ಬರಹ ಕಾವ್ಯಗಾಯನದ ಪ್ರಶಸ್ತಿಗಳು ಎಲ್ಲರ ಚಿತ್ತವನ್ನು ಹಿಡಿದಿಟ್ಟುಕೊಂಡವು. ಅದಲ್ಲದೇ ಕಾರ್ಯಕ್ರಮದ ಕೊನೆಯಲ್ಲಿ ನಿನ್ನ ಮುಡಿಗೇರಿದ ಬೆಸ್ಟ್ ಸ್ಟುಡೆಂಟ್ ಅವಾರ್ಡ್ ನಿನ್ನ ಖುಷಿಯ ಮೇರೆಯನ್ನು ಮೀರಿಸಿತ್ತು.ದಿನಪತ್ರಿಕೆಗಳಲ್ಲಿ ಮ್ಯಾಗಜಿನ್‌ಗಳಲ್ಲಿ ನೀ ಬರೆಯುತ್ತಿದ್ದ ಕವಿತೆಗಳು ಓದುಗರ ಮನ ಗೆದ್ದಿದ್ದವು. ಆ ದಿನ ನಡೆದ ಅಂತರ್ ಕಾಲೇಜು ಸ್ಪರ್ಧೆಗಳಿಗೆ…

Read More

ಜೂನ್ ೧೭ ರಿಂದ ೧೯ ರವರೆಗೆ ವಿಜಯಪುರ ಜಿಲ್ಲೆಯ ಕೋಟಾದಲ್ಲಿ ಹಜರತ ಹಾಜಿಮಸ್ತಾನ ಜಾತ್ರೆ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಇಡೀ ಜಗತ್ತಿಗೆ ಅನೇಕತೆಯಲ್ಲಿ ಏಕತೆಯನ್ನು ಎತ್ತಿ ತೋರಿಸಿದ ರಾಷ್ಟ್ರ ನಮ್ಮದು. ಹಿಂದೂ, ಮುಸ್ಲಿಂ, ಬೌದ್ಧ, ಜೈನ್, ಪಾರಸಿ ಹೀಗೆ ವಿವಿಧ ಧರ್ಮೀಯರು ಭಾವೈಕ್ಯತೆಯಿಂದ ನೆಲೆಸಿರುವ ಭರತ ಭೂಮಿ ನಮ್ಮದು. ವಿಜಯಪುರ ಜಿಲ್ಲಾ ಕೇಂದ್ರ ಸ್ಥಾನದಿಂದ ೨೦ ಕಿ.ಮೀ. ಪಶ್ಚಿಮಕ್ಕೆ ಇರುವ ತಿಕೋಟಾ ಪಟ್ಟಣವಿದೆ. ಆಗಿನ ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ಕೇಂದ್ರ ಸ್ಥಾನವಾಗಿದ್ದ ಈ ಪಟ್ಟಣವು ಈಗ ತಾಲೂಕ ಕೇಂದ್ರವಾಗಿದೆ. ೧೬ ನೇಯ ಶತಮಾನದಲ್ಲಿ ನಿರ್ಮಾಣಗೊಂಡ ಎರಡನೇಯ ತಾಜಮಹಲ್ ಎಂದೇ ಕರೆಯಲಾಗುವ ಇಬ್ರಾಹಿಂ ರೋಜಾ ವಾಸ್ತುಶಿಲ್ಪಿ ಸಂದಲ್ ಮಲೀಕನ ಸಮಾಧಿ ಈ ನಗರದಲ್ಲಿರುವದು ಒಂದು ವಿಶೇಷ. ದೇಶದಲ್ಲಿಯೇ ಮೊಟ್ಟಮೊದಲ ಸರ್ಕಸ್ ಕಂಪನಿ ಪ್ರಾರಂಭಿಸಿದ ಗಣಪತರಾವ್ ಛತ್ರೆ, ಖ್ಯಾತ್ ಪ್ರವಚನಕಾರ ದಾನಪ್ಪ ಜತ್ತಿ ಹಾಗೂ ಜಾನಪದ ಕಲೆಗಳಲ್ಲೊಂದಾದ ಚೌಡಕಿ ಪದ ಗಾಯಕಿ ಗೌರವ್ವ…

Read More

ದೇಶ ರಕ್ಷಕರ ಪಡೆ ಸಂಚಾಲಿತ ಅನ್ನ ಸ್ನೇಹಿ ಸೇವಾ ಬಳಗದಿಂದ 100ನೇ ವಾರ ಪೂರೈಸಿದ ಹಸಿವು ಮುಕ್ತ ಸೇವೆ | ನೂರಾರು ನಿರ್ಗತಿಕರಿಗೆ ಅನ್ನದಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶ ರಕ್ಷಕರ ಪಡೆ ಸಂಚಾಲಿತ ಅನ್ನ ಸ್ನೇಹಿ ಸೇವಾ ಬಳಗ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ “ಹಸಿವು ಮುಕ್ತ ಸೇವಾ ಕಾರ್ಯಕ್ರಮ”ದ 100ನೇ ವಾರವನ್ನು ಶುಕ್ರವಾರ ಯಶಸ್ವಿಯಾಗಿ ಆಚರಿಸಲಾಯಿತು.ನಗರದ ವಿವಿಧ ಭಾಗಗಳಲ್ಲಿ ಬೇರೆ ಊರಿಗೆ ತೆರಳುವ ಪ್ರಯಾಣಿಕರು, ನಿರ್ಗತಿಕರು ಹಾಗೂ ಆಶ್ರಯಹೀನರಿಗೆ ಉಚಿತವಾಗಿ ಬಿಸಿ ಊಟ ವಿತರಿಸಲಾಯಿತು.ಈ ಉದಾತ್ತ ಅನ್ನದಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ಪ್ರಮುಖ ವೃತ್ತಗಳ ರಸ್ತೆ ಬದಿಯಲ್ಲಿ ವಾಸಿಸುವ ನೂರಾರು ಜನರನ್ನು ದೇಶ ರಕ್ಷಕರ ಪಡೆ ಸ್ವಯಂಸೇವಕರು ಖುದ್ದಾಗಿ ಭೇಟಿ ಮಾಡಿ ಗೌರವಪೂರ್ವಕವಾಗಿ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದರು.ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಖ್ಯಾತ ಮಧುಮೇಹ ತಜ್ಞ ಡಾ. ಬಾಬು ರಾಜೇಂದ್ರ ನಾಯಿಕ, ಮಹಾನಗರ…

Read More

ಶಿರಹಟ್ಟಿ ಯುಕೆಪಿ ಪುನರ್ವಸತಿ ಕೇಂದ್ರದ ಸ್ಥಳದಲ್ಲಿ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ನೋಟಿಸ್ ನೀಡದೆ ತೆರವುಗೊಳಿಸಲು ಮುಂದಾದ ಅಧಿಕಾರಿಗಳ ಕ್ರಮಕ್ಕೆ ವಿರೋಧ | ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿ ಶಿರಹಟ್ಟಿ ಗ್ರಾಮದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದ ಸ್ವಾಧೀನದಲ್ಲಿರುವ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಾಗೂ ಶಿರಹಟ್ಟಿ ಗ್ರಾಮಸ್ಥರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಬಹುಜನ ಸಮಾಜ ಪಕ್ಷಕ ಬೆಳಗಾವಿ ವಲಯ ಉಸ್ತುವಾರಿ ಹಾಗೂ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಮಾತನಾಡಿ, ಆರ್, ಸಿ, ನಂ.1 ರ ನಿವಾಸಿಗಳು ಕಳೆದ 40 ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಮನೆ ಕಟ್ಟಿಕೊಂಡು ಮಕ್ಕಳನ್ನು ಬೆಳೆಸಿ ಮತದಾರರ ಪಟ್ಟಿ ರೇಷನ್ ಕಾರ್ಡ್ ವಿದ್ಯುತ್ ಬಿಲ್ ಎಲ್ಲವನ್ನೂ ಇಲ್ಲಿಯೇ ಹೊಂದಿದ್ದಾರೆ. ಇಷ್ಟೆಲ್ಲ…

Read More