ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಉಜ್ವಲಾ ಸಂಸ್ಥೆಯ ಮುಖ್ಯಸ್ಥೆ ಸುನಂದಾ ತೊಳಬಂದಿ ಹೇಳಿದರು. ನಗರದ ಕೃಷ್ಣ-ವಾದಿರಾಜ ಮಠದಲ್ಲಿ ಅಖಿಲ ಭಾರತ ಮಧ್ವ ಮಹಾ ಮಂಡಳ ಸಹಕಾರದೊಂದಿಗೆ ಹಮ್ಮಿಕೊಂಡ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ಹೆಮ್ಮೆಯಿಂದ ಹೇಳುವ ಕಾಲ ಇದು. ದಶ ದಿಕ್ಕುಗಳಲ್ಲಿಯೂ ಮಹಿಳೆಯರ ಸಾಧನೆ ಕುರಿತು ಚರ್ಚೆ ನಡೆಯುತ್ತಿರುವುದೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಅವರು ವಿವರಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಸಮೀತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಸುನಂದಾ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳ ಮೂಲಕ ಪ್ರತಿಭೆಗಳು ಹೊರಬರಬೇಕೆಂದು ಕರೆ ನೀಡಿದರು.
ಮಹಿಳೆಯರು ಸ್ವಯಂ ರಕ್ಷಣೆಗೆ ಕರಾಟೆಯಂತಹ ಸಾಧನೆಗಳನ್ನು ಅರಿಯಬೇಕೆಂದರು.
ಚಿತ್ತಾ ಗೋಟೇಕರ ಮಾತನಾಡಿ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಧೈರ್ಯದಿಂದ ಮುನ್ನಗ್ಗಬೇಕೆಂದು ಕರೆ ನೀಡಿದರು. ಅತಿಥಿಗಳಾಗಿ ರುಕ್ಮಿಣಿ ಗೋಪಾಲ ನಾಯಕ, ಡಾ. ಜಯಶ್ರೀ ರಾಮರಾವ ಮಂಗಲಗಿ ಭಾಗವಹಿಸಿ ಮಹಿಳಾ ಸಾಧಕರಿಗೆ ಫ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.
ಅನಿತಾ ಪದಕಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಮಾಧವಿ ಪ್ರಕಾಶ ಅಕ್ಕಲಕೋಟ, ಸ್ವರ್ಣಗೌರಿ ಅಶೋಕರಾವ್, ಸುನಿತಾ ಶ್ರೀಹರಿ ಗೊಳಸಂಗಿ ಗೀತಾ ಸೊನ್ನ ವಾರುಣಿ ವಾಸುದೇವ್ ಆಚಾರ್ಯ, ರಾಧಾ ಕೃಷ್ಣಾಜಿ ಕುಲಕರ್ಣಿ ಉಪಸ್ಥಿತರಿದ್ದರು. ಶಾರದಾ ರವಿ ಆಚಾರ್ಯ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಲಕ್ಷ್ಮಿ ಕುಲಕರ್ಣಿ ವಂದಿಸಿದರು.

