ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಾರಂಪರಿಕ ಕಲೆಗಳ ಸಂರಕ್ಷಣೆಗೆ ಇಂತಹ ಕಾರ್ಯಕ್ರಮಗಳು ಅಗತ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಈ ಕಾರ್ಯಕ್ರಮವು ಟಿ.ಜಿ.ಹಿರೇಮಠ ಅವರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ನಗರದ ಸಾರಂಗಮಠದಲ್ಲಿ ಟಿ.ಜಿ.ಹಿರೇಮಠ ಸ್ಮೃತಿ ಸಮಾರೋಹದ ಅಂಗವಾಗಿ ಸ್ವರಾಂಜಲಿ ಶಾಸ್ತ್ರೀಯ ಗಾಯನ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮವು ಶಾಸ್ತ್ರೀಯ ಸಂಗೀತ ಗಾಯನದೊಂದಿಗೆ ಪ್ರಾರಂಭವಾಯಿತು. ಗಾಯಕ ಮಾನ್ವಿಯ ಬಸವರಾಜ ವಂದಲಿ ಅವರ ಸುಶ್ರಾವ್ಯ ಧ್ವನಿಯಲ್ಲಿ ಮೂಡಿಬಂದ ರಾಗಗಳು ಎಲ್ಲರ ಗಮನ ಸೆಳೆದವು.
ನಂತರ ನಡೆದ ಭರತನಾಟ್ಯ ಪ್ರದರ್ಶನದಲ್ಲಿ ರುಜುತಾ ಸೋಮನ್, ಪ್ರಾಚೀತಿ ಡಾಂಗೆ ತಂಡದವರು ಓಡಿಸಿ ನೃತ್ಯ, ಕಥಕ್, ಕಥಕನ್ ವೇಗದ ಹೆಜ್ಜೆಗಳು ಮತ್ತು ಹಸ್ತ ಮುದ್ರೆಗಳ ಮೂಲಕ ಭಾರತೀಯ ಕಲೆಗಳ ಶ್ರೀಮಂತಿಕೆಯನ್ನು ಪ್ರದರ್ಶಿಸಿದವು. ಅವರ ನೃತ್ಯದಲ್ಲಿ ತಾಂತ್ರಿಕ ನಿಖರತೆ ಮತ್ತು ಭಾವಪೂರ್ಣ ಅಭಿನಯ ಎದ್ದು ಕಾಣುತ್ತಿತ್ತು. ಭರತನಾಟ್ಯ, ಕಥಕ್, ಓಡಿಸಿನೃತ್ಯ ಮತ್ತು ಶಾಸ್ತ್ರೀಯ ಸಂಗೀತದ ಮೂಲಕ ಅಲ್ಲಿದ್ದ ಸಭೀಕರನ್ನು ಮಂತ್ರ ಮುಗ್ಧಗೊಳಿಸಿದರು.
ಸಾರಂಗಮಠದಲ್ಲಿ ಟಿ.ಜಿ.ಹಿರೇಮಠ ಸ್ಮೃತಿ ಸಮಾರೋಹದ ಅಂಗವಾಗಿ ಸ್ವರಾಂಜಲಿ ಶಾಸ್ತಿçÃಯ ಗಾಯನ ನೃತ್ಯ ಕಾರ್ಯಕ್ರಮವು ಕಲಾ ಪ್ರೇಮಿಗಳಿಗೆ ಅಪೂರ್ವ ರಸದೌತಣ ನೀಡಿದರು.
ಈ ಸಂದರ್ಭದಲ್ಲಿ ಬಿ.ಎಂ.ಸುರಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಶರಣಬಸವ ಜೋಗೂರ, ಡಾ.ರವಿ ಗೋಲಾ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಸ್ವರಾಂಜಲಿ ಕಾರ್ಯಕ್ರಮದ ಆಯೋಜಕರಾದ ಅರವಿಂದ ಹಿರೇಮಠ, ಶಿವಾನಂದ ಹಿರೇಮಠ, ವಿಶ್ವನಾಥ ಹಿರೇಮಠ, ವಿಜಯ ಹಿರೇಮಠ, ಲಲಿತಾ ಹಿರೇಮಠ, ಇಂದುಮತಿ ಹಿರೇಮಠ, ಮುಕ್ತಾ ಹಿರೇಮಠ, ಮಿನಾಲಿ ಹಿರೇಮಠ, ಗಣೇಶ ವಂದನೆ, ಗಂಗಾಧರ ಜೋಗೂರ, ಅಶೋಕ ವಾರದ, ಡಾ.ಎಂ.ಎಂ.ಪಡಶೆಟ್ಟಿ, ಶಿವಾನಂದ ಗೌಸಾನಿ, ಡಿ.ಎಂ.ಸರಶೆಟ್ಟಿ, ವ್ಹಿ.ಡಿ.ವಸ್ತçದ ಸೇರಿದಂತೆ ಕಲಾ ಆಸಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿ ಕಲಾವಿದರನ್ನು ಹುರಿದುಂಬಿಸಿದರು.

