Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗೃಹಬಳಕೆ ಗ್ಯಾಸ್ ಮಿತವಾಗಿ ಬಳಸಿ :ಡಾ.ಆನಂದ ಕೆ.

ಕಿಡ್ನಿ ದಾನದಿಂದ ರೋಗಿಗಳಿಗೆ ಪುನರ್ಜನ್ಮ ನೀಡಬಹುದು :ಡಾ.ಅರುಣ

ಸಮಾಜದಲ್ಲಿ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚು :ಸುನಂದಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಅಗತ್ಯ
(ರಾಜ್ಯ ) ಜಿಲ್ಲೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಅಗತ್ಯ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿದರೆ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಕಾಂಗ್ರೆಸ್ಸಿನ ಯುವ ಮುಖಂಡ ತಾನಾಜಿ ನಾಗರಾಳ ಹೇಳಿದರು.
ತಾಲೂಕಿನ ಮಟ್ಟಿಹಾಳ ಕ್ರಾಸ್‌ನಲ್ಲಿ ನಡೆದ ಶ್ರೀ ಸದ್ಗುರು ಸದಾನಂದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಿ ನಡೆಸುವುದು ಸುಲಭದ ಕೆಲಸವಲ್ಲ. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಆಡಳಿತ ಮಂಡಳಿ ಕೊಲ್ಹಾರ ಮತ್ತು ಬಸವನ ಬಾಗೇವಾಡಿ ನಡುವಿನ ಪ್ರದೇಶದಲ್ಲಿ ಸುಂದರ ಸಂಸ್ಥೆಯನ್ನು ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವುದು ಸಂಸ್ಥೆಯ ಸಾಧನೆಯಾಗಿದೆ ಎಂದು ಹೇಳಿದರು.
ಶಿಕ್ಷಕ ಜಿ.ಐ ಗೊಡ್ಯಾಳ ಮಾತನಾಡಿ, ಶಿಕ್ಷಕ, ಬಾಲಕ ಹಾಗೂ ಪಾಲಕರು ಶಿಕ್ಷಣದ ಮೂರು ಪ್ರಮುಖ ಸ್ತಂಭಗಳು. ಈ ವ್ಯವಸ್ಥೆಯಲ್ಲಿ ಮಕ್ಕಳು ಸಮಗ್ರವಾಗಿ ಬೆಳೆಯುತ್ತಾರೆ. ಮಕ್ಕಳ ಭವಿಷ್ಯ ಉಜ್ವಲವಾಗಲು ಅವರನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುವುದು ಅಗತ್ಯ ಎಂದು ತಿಳಿಸಿದರು.
ಕೊಲ್ಹಾರ ಶೀಲವಂತ ಹಿರೇಮಠದ ಡಾ. ಕೈಲಾಸನಾಥ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ಸದ್ಗುರು ಸದಾನಂದ ಶಾಲೆ ಮುಂದಿನ ದಿನಗಳಲ್ಲಿ ಮಾಧ್ಯಮಿಕ, ಪ್ರೌಢ ಹಾಗೂ ಕಾಲೇಜು ಹಂತದವರೆಗೆ ಅಭಿವೃದ್ಧಿ ಹೊಂದಿ ಈ ಭಾಗದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನಾಡಿನ ಕಲೆ, ಸಂಸ್ಕೃತಿ ಮತ್ತು ದೇಶಭಕ್ತಿಯನ್ನು ಬಿಂಬಿಸುವ ನೃತ್ಯ ಹಾಗೂ ರೂಪಕಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಲಕ್ಷ್ಮಣ ಬಿರಾದಾರ, ಗುರುನಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಸಂತೋಷ ಗಣಾಚಾರಿ, ಹಣಮಂತಗೌಡ ಕುಬಕಡ್ಡಿ, ರಮೇಶ ನಡಗೇರಿ, ಪುಟ್ಟು ಪಾಟೀಲ, ಸಂಗು ಮಾಳೇದ, ಸೋಮು ಬಿರಾದಾರ, ಶ್ರೀಕಾಂತ ಗಣಿ, ಜಿ.ಆರ್. ಹೊಸಮನಿ, ಸಗರಪ್ಪ ಮುರನಾಳ, ಸಂಗಮೇಶ ಕುಬಕಡ್ಡಿ, ಜಗದೀಶ ಸಾಲಳ್ಳಿ, ಮಲ್ಲಿಕಾರ್ಜುನ ಬಿರಾದಾರ, ಶ್ರೀಶೈಲ ಸಗರಪ್ಪನವರ, ಕಾರ್ಯದರ್ಶಿ ಮಲ್ಲಿಕಾರ್ಜುನ ರುದ್ರಗಣಿ, ಮುಖ್ಯ ಶಿಕ್ಷಕ ರಾಜು ದಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗೃಹಬಳಕೆ ಗ್ಯಾಸ್ ಮಿತವಾಗಿ ಬಳಸಿ :ಡಾ.ಆನಂದ ಕೆ.

ಕಿಡ್ನಿ ದಾನದಿಂದ ರೋಗಿಗಳಿಗೆ ಪುನರ್ಜನ್ಮ ನೀಡಬಹುದು :ಡಾ.ಅರುಣ

ಸಮಾಜದಲ್ಲಿ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚು :ಸುನಂದಾ

ಹಿಂದುತ್ವ ರಾಷ್ಟ್ರೀಯತೆಯ ಸಂಕೇತ :ರವೀಂದ್ರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗೃಹಬಳಕೆ ಗ್ಯಾಸ್ ಮಿತವಾಗಿ ಬಳಸಿ :ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಕಿಡ್ನಿ ದಾನದಿಂದ ರೋಗಿಗಳಿಗೆ ಪುನರ್ಜನ್ಮ ನೀಡಬಹುದು :ಡಾ.ಅರುಣ
    In (ರಾಜ್ಯ ) ಜಿಲ್ಲೆ
  • ಸಮಾಜದಲ್ಲಿ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚು :ಸುನಂದಾ
    In (ರಾಜ್ಯ ) ಜಿಲ್ಲೆ
  • ಹಿಂದುತ್ವ ರಾಷ್ಟ್ರೀಯತೆಯ ಸಂಕೇತ :ರವೀಂದ್ರ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಶ್ರೀ ರೇವಣಸಿದ್ದೇಶ್ವರರ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ವಾಲ್ ಪೋಸ್ಟರ್‌ ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಅಡುಗೆಮನೆವರೆಗೂ ಬಂತು ಇರಾನ್ ಮೇಲಿನ ಯುದ್ಧದ ಸಂಕಷ್ಟ!
    In (ರಾಜ್ಯ ) ಜಿಲ್ಲೆ
  • ಪಡೇಕನೂರದಲ್ಲಿ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಅವಶ್ಯಕ :ರಾಜುಗೌಡ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.