ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಾಲಿ ಶಾಸಕರು ಮೂರು ವರ್ಷದ ಅವಧಿಯಲ್ಲಿ ಮೂರು ಕಿಮೀ ಡಾಂಬರ ರಸ್ತೆ ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಏನೋ ಸಾಧನೆ ಮಾಡಿದ ಹಾಗೆ ಪ್ರಚಾರ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಪೋಸ್ಟ್ ಅಥವಾ ಏನಾದರೂ ಬರೆದರೆ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯಿಂದ ಬೆದರಿಸುವ ಕಾರ್ಯ ಮಾಡುತ್ತಾ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಕೀಲಿ ಕೈ ತರಹ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹರಿಹಾಯ್ದರು.
ಸಿಂದಗಿಯ ಜ್ಯೋತಿ ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲ ಕಾರ್ಯಕಾರಣಿ ಸಭೆ ಹಾಗೂ ಬಿಎಲ್‌ಎ-೨ ಸದಸ್ಯರ ಕಾರ್ಯಗಾರವನ್ನು ಮಾಜಿ ಶಾಸಕ ರಮೇಶ ಭೂಸನೂರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದಿಂದ ತುಂಬಿದೆ. ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷ ಅವನತಿ ದಾರಿ ಹಿಡಿಯಲಿದೆ. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತವಾಗಿದೆ ಎಂದು ಆರೋಪಿಸಿದರು.
ಈ ವೇಳೆ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿದರು.
೧೫೦ ವರ್ಷ ಪೂರ್ಣಗೊಂಡ ದಿಸೆಯಲ್ಲಿ ಕಾರ್ಯಕ್ರಮದಲ್ಲಿ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು.
ಅದೇ ರೀತಿ ಸಿಂದಗಿ ನಗರದ ಸರ್ವೇ ನಂ.೮೪೨ ಪ್ರಕಣದ ೮೪ ಕುಟಂಬಗಳಿಗಾದ ಅನ್ಯಾಯದ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಈರಣ್ಣ ರಾವೂರ, ಅಶೋಕ ಅಲ್ಲಾಪುರ, ಮಲ್ಲಿಕಾರ್ಜುನ ಜೋಗೂರ, ವಿವೇಕ ಡಬ್ಬಿ, ಸಿದ್ದು ಬುಳ್ಳಾ, ಪೀರು ಕೆರೂರ, ರಾಜಶೇಖರ ಪೂಜಾರಿ, ಅಶೋಕ ನಾರಾಯಣಪೂರ, ಪ್ರಶಾಂತ ಕದ್ದರಕಿ, ವಿಠ್ಠಲ ನಾಯ್ಕೋಡಿ, ನೀಲಮ್ಮ ಯಡ್ರಾಮಿ, ಶ್ರೀಮಂತ ನಾಗೂರ, ಗುರು ತಳವಾರ, ಸಿದ್ರಾಮ್ ಆನಗೊಂಡ, ಸೇರಿದಂತೆ ಮಂಡಲದ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಇತರರು ಇದ್ದರು.

