Author: editor.udayarashmi@gmail.com

ವಿಜಯಪುರ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಲಿಕಾರ್ಥಿಗಳು ಈ ದಿನ ಗೊಗಲ್ ಗುರುವಿಗೆ ಶರಣಾಗಿರುವುದು ನಿಜಕ್ಕೂ ವಿಪರ್ಯಾಸ ಎಂದು ಸಹ ಶಿಕ್ಷಕ ಅಶೋಕ ಹಂಚಲಿ ಹೇಳಿದರು.ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಎಸ್ ಎಸ್ ವಿ ಪಿ ಟಿ ಟ್ರಸ್ಟ್ ನ ಬಿಇಡಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಸ್ವಾಗತ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಗುರು ಶಿಷ್ಯರ ಮೊದಲಿನಂತೆ ಈಗಿರದೆ ಸಂಪೂರ್ಣವಾಗಿ ಬದಲಾಗಿದೆ. ಗುರುಗಳು ಬಹಳ ಪ್ರೀತಿಯಿಂದ ವಿದ್ಯೆಯನ್ನು ಕಲಿಕಾರ್ಥಿಗಳಿಗೆ ಧಾರೆಯೆರೆಯುತ್ತಿದ್ದರು. ಅದರಂತೆ ಅವರು ಸ್ವೀಕರಿಸುತ್ತಿದ್ದರು. ಆದರೆ ಆದುನಿಕ ಯುಗದಲ್ಲಿ ವಿದ್ಯೆ ಸಂಪೂರ್ಣವಾಗಿ ಬದಲಾಗಿದೆ.ಕಲಿಕೆಯಲ್ಲಿ ಪರಸ್ಪರ ತರಗತಿಗೆ ಹಾಜರಾಗಿ ಕಲಿಯುವುದು ಅತಿ ಅವಶ್ಯಕವಾಗಿದೆ. ಆದ್ದರಿಂದ ಬಿಇಡಿ ಶಿಕ್ಷಣ ಪಡೆಯುತ್ತಿರುವಾಗ ನಿರಂತರ ಅಧ್ಯಯನ, ಕೌಶಲ್ಯಗಳು ನಮ್ಮಲ್ಲಿ ಕರಗತ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.ಪ್ರಶಿಕ್ಷಣಾರ್ಥಿಗಳು ದೇಶವನ್ನು ಕಟ್ಟುವ ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗದೀಶ್. ಬಿ ಮಾತನಾಡಿ, ಮಾಡುವ ಕಾರ್ಯ…

Read More

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಉಜನಿ ಜಲಾಶಯದಿಂದ ಭೀಮಾ ನದಿಗೆ ಹಾಗೂ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ತೀವ್ರ ಬರ ಎದುರಿಸುತ್ತಿರುವ ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದರ ಭಾಗವಾಗಿಯೇ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು ಈಗಿರುವ ಪ್ರಮಾಣದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಆಗುವುದಿಲ್ಲ. ಹಾಗಾಗಿ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 TMC ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ 1 TMC ನೀರು ಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

Read More

ಬಿಜೆಪಿ ಲೋಕಸಭಾ ಚುನಾವಣಾ ಮಾಧ್ಯಮ ಕೇಂದ್ರದ ಉದ್ಘಾಟಿಸಿದ ಬಿ.ವೈ.ವಿಜಯೇಂದ್ರ ಆರೋಪ ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದರು.ಮತ್ತೊಮ್ಮೆ ಮೋದಿ ಸರಕಾರ ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಆಶಯವಲ್ಲ, ಇದು ರಾಜ್ಯದ ಮತ್ತು ದೇಶದ ಜವಾಬ್ದಾರಿಯುತ ನಾಗರಿಕ ಮತದಾರರ ನಿರ್ಧಾರ ಎಂದರು.ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಕಾರ್ಯವೈಖರಿ, ಆಡಳಿತ ವೈಖರಿ, ಕೇಂದ್ರದ ಮೋದಿ ನೇತೃತ್ವದ ಜನಪರ ಯೋಜನೆಗಳ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದರು.ಇದು ಮೊತ್ತಮೊದಲ ಬಾರಿಗೆ ಹೀಗಾಗಿದೆ. ದೇಶದ ಜನತೆ ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರ ಮತ್ತು ಬಿಜೆಪಿ ಕೇಂದ್ರ ಸರಕಾರದ ಯೋಜನೆಗಳು ಮನೆಮನೆಗೆ ತಲುಪಿದೆ…

Read More

ಕೇಂದ್ರ ಸರಕಾರ ಇನ್ನೂ ಬಿಡುಗಡೆ ಮಾಡದ ಬರ ಪರಿಹಾರ | ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ! ಬೆಂಗಳೂರು: ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಮೇಲಿಂದ ಮೇಲೆ ಮನವಿ ಮಾಡಿದರೂ ಹಣ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಐದು ತಿಂಗಳ ಕಾಲ ಕಾದರೂ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.ಸುಪ್ರೀಂ ಕೋರ್ಟ್​ ವಾರದ ರಜೆ ಮುಗಿದ ಬಳಿಕ ಅರ್ಜಿಯನ್ನು…

Read More

ಮುದ್ದೇಬಿಹಾಳ: ಕಾನೂನಿನಲ್ಲಿ ಗಂಡಿನಷ್ಟೇ ಹೆಣ್ಣಿಗೂ ಸಮಾನವಾಗಿ ಪ್ರಾಧಾನ್ಯತೆ ನೀಡಿದ್ದರ ಪರಿಣಾಮ ಇಂದು ಮಹಿಳೆ ಕುಟುಂಬ ನಿರ್ವಹಣೆಯ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾಳೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಅಭಿಪ್ರಾಯಪಟ್ಟರು.ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಕೆಲ ಅನಿಷ್ಠ ಪದ್ಧತಿಗಳ ಆಚರಣೆಗಳಿಂದಾಗಿ ಹೆಣ್ಣು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದು ಕಟ್ಟು ನಿಟ್ಟಾದ ಕಾನೂನುಗಳು ಜಾರಿಯಾಗಿರುವದರಿಂದ ಎಲ್ಲ ರಂಗದಲ್ಲೂ ಮಹಿಳೆಗೆ- ಭಾಗಿಯಾಗುವ ಅವಕಾಶ ಇದೆ. ಭಾಗಿಯಾಗಲು ಮುಖ್ಯವಾಗಿ ಶಿಕ್ಷಣದ ಅವಶ್ಯಕತೆ ಇದೆ. ಹಾಗಾಗಿ ಯಾರೊಬ್ಬರೂ ತಮ್ಮ ಹೆಣ್ಣು ಮಗುವಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಮಹಿಳೆ ಯಾವುದೇ ಸಾಧನೆ ಮಾಡಲು ಒಬ್ಬ ಗಂಡಿನ…

Read More

ಮುದ್ದೇಬಿಹಾಳ: ಹೋಳಿ ಹಬ್ಬದ ನೆಪದಲ್ಲಿ ಹಣಕ್ಕೆ ಪೀಡಿಸುವದು, ಇತರರಿಗೆ ತೊಂದರೆ ಕೊಡುವದು ಕಂಡುಬಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಪಿಎಸ್‌ಐ ಸಂಜೀವ ತಿಪರೆಡ್ಡಿ ಎಚ್ಚರಿಸಿದರು.ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಹೋಳಿ ಹಬ್ಬವನ್ನು ಗುರಿಯಾಗಿಸಿಕೊಂಡು ರಸ್ತೆಯಲ್ಲಿ ನಿಂತು ಹಣಕ್ಕೆ ಪೀಡಿಸುವ, ಕೊಡದಿದ್ದರೆ ಬಣ್ಣ ಎರಚುವ ಬೆದರಿಕೆ ಹಾಕುವ ಬಗ್ಗೆ ಕೇಳಿ ಬಂದಿದೆ. ಇದನ್ನೆಲ್ಲವನ್ನು ಬಿಟ್ಟು ಶಾಂತಿಯಿಂದ ಹಬ್ಬವನ್ನು ಆಚರಿಸಬೇಕು. ಮಾ.೨೫ ಮತ್ತು ೨೬ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿರುವದರಿಂದ ವಿದ್ಯಾರ್ಥಿಗಳಿಗೆ ಮತ್ತು ಅವರೊಡನೆ ಹೋಗುತ್ತಿರುವ ಪಾಲಕರಿಗೆ ತೊಂದರೆ ನೀಡಕೂಡದು. ಮಧ್ಯದದಂಗಡಿಯವರು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಇದನ್ನ ಮೀರಿ ನಡೆದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಯುವ ಕಾಂಗ್ರೇಸ್ ಅಧ್ಯಕ್ಷರಫೀಕ ಶಿರೋಳ ಮತ್ತೀತರರು ಮಾತನಾಡಿ, ನಮ್ಮೂರು ಹೋಳಿ ಹಬ್ಬಕ್ಕೆ ಹೆಸರು ವಾಸಿಯಾಗಿದೆ. ಯಾವುದೇ ಗಲಾಟೆಗಳಾದ ಉಧಾಹರಣೆಗಳಿಲ್ಲ. ಮುಂದೆಯೂ ನಡೆಯದಂತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ…

Read More

ವಿಜಯಪುರ ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನ | ಧ್ವಜಾರೋಹಣ | ಸರ್ವಾಧ್ಯಕ್ಷರ ಮೆರವಣಿಗೆ | ಪುಸ್ತಕ ಮಳಿಗೆ ಉದ್ಘಾಟನೆ ವಿಜಯಪುರ: ಜಿಲ್ಲೆಯ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಈ ನೆಲದ ಭಾಷೆ ಪ್ರೀತಿಸಬೇಕು. ಎಂದು ಶಿಕ್ಷಣ ತಜ್ಞ ವಿಶ್ರಾಂತ ಪ್ರಾಚಾರ್ಯ ಪ್ರೊ ಎನ್ ಜಿ ಕೆರೂರ ಅಭಿಪ್ರಾಯ ವ್ಯಕ್ತಪಡಿಸಿದರುಶನಿವಾರ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಣ ಹಾಗೂ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ವಿನೂತನ ಗೋಷ್ಠಿಗಳನ್ಮು ಹಮ್ಮಿಕೊಳ್ಳುವದರ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಹೊಸತನ ತಂದುಕೊಟ್ಟಿದೆ ಎಂದರು.ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿ, ಇಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮಕ್ಕೆ ಕನ್ನಡದ ಕಂಪನ್ನು ಪಸರಿಸಿದ ಕೀರ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ. ಜಿಲ್ಲೆಯಲ್ಲಿ ಹೊಸ ಕನ್ನಡ ಭವನವನ್ನು ನಿಮಿ೯ಸಿ ಅಲ್ಲಿ ಚಟುವಟಿಕೆಗಳು ಜರುಗಲಿ ನಮ್ಮೆಲ್ಲರ ಬೆಂಬಲ ನೀಡುತ್ತೆವೆ…

Read More

ಮುದ್ದೇಬಿಹಾಳ: ಪವಿತ್ರವಾದ ರಂಜಾನ್ ಮಾಸದಲ್ಲಿ ಮಾಡಿದ ದಾನ ಇತರ ದಿನಗಳಲ್ಲಿ ಮಾಡಿದ ದಾನಕ್ಕಿಂತ ಹೆಚ್ಚಿನ ಫಲವನ್ನು ಕೊಡುತ್ತದೆ ಎಂದು ಬಾಗವಾನ ಬ್ಯಾಂಕ್ ನ ನಿಕಟಪೂರ್ವ ಅಧ್ಯಕ್ಷ ಎಚ್.ಆರ್.ಬಾಗವಾನ ಹೇಳಿದರು.ಪಟ್ಟಣದ ಬಾಗವಾನ ಬ್ಯಾಂಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ, ಬಡವರಿಗೆ ದಾನ ಮಾಡುವ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ದಿನದ ದುಡಿಮೆಯಲ್ಲಿ ಸ್ವಲ್ಪವಾದರೂ ದಾನ ಮಾಡುವವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.ಇಮಾಮ ಮೌಲಾನಾ ಆಪ್ತಾಬ ಮಾತನಾಡಿ, ಬಾಗವಾನ ಜಮಾಅತ ನವರು ಈ ಬಾರಿ ವಿಶೇಷವಾಗಿ ಬಡವರ ಮನೆ ಬಾಗಿಲಿಗೆ ಕಿಟ್ ವಿತರಣೆ ಮಾಡಿ ದಾನ ಸ್ವೀಕರಿಸುವವರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ನೋಡಿಕೊಂಡಿರುವದು ವಿಶೇಷವಾಗಿದೆ ಎಂದರು.ಬ್ಯಾಂಕ ಅಧ್ಯಕ್ಷ ಎಚ್.ಬಿ.ಸಾಲಿಮನಿ, ಸಂಘದ ಅಧ್ಯಕ್ಷ ಸುಲೇಮಾನ ಮಮದಾಪೂರ, ಉಪಾಧ್ಯಕ್ಷ ಎ.ಎ.ಹಳ್ಳೂರ, ಕಾರ್ಯದರ್ಶಿ ಎನ್.ಆರ್.ಮಮದಾಪೂರ, ಖಜಾಂಚಿ ಜಾಫರ ಬಾಗವಾನ, ಇಮಾಮ ಮೌಲಾನಾ ಹುಸೇನ ಉಮರಿ, ಎನ್.ಆರ.ಮಮದಾಪೂರ, ಡಿ.ಎಮ್ ಚೌಧರಿ, ಎಮ್.ಆರ್.ಕಲಾದಗಿ, ಡಿ.ಡಿ.ಬಾಗವಾನ, ಎನ್.ಡಿ.ಬಾಗವಾನ, ಎ.ಕೆ.ಮಕ್ತೆದಾರ, ಎನ್.ಡಿ.ಹುಂಚಾಳ, ಯು.ಕೆ.ಮಕ್ತೆದಾರ, ಎ.ಎನ್.ಹಳ್ಳೂರ, ಅಲ್ತಾಪ ಬಾಗವಾನ, ಶಪಿ…

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ನಾಡಿನಲ್ಲಿ ಹೋಳಿ ಹಬ್ಬಕ್ಕೆ ಅದರದೇ ವಿಶೇಷ ಸ್ಥಾನವಿದೆ. ಪಟ್ಟಣದಲ್ಲಿ ಮಾ.೨೪ ರಂದು ಭಾನುವಾರ ಹೋಳಿ ಹುಣ್ಣಿಮೆ ಆಚರಿಸುತ್ತಿರುವುದರಿಂದ ಸಂಜೆ ಪಟ್ಟಣದ ವಿವಿಧೆಡೆಗಳಲ್ಲಿ ಸಂಜೆ ಕಾಮದಹನ ನಡೆಯಲಿದೆ.ಕಾಮದಹನ ಮಾಡಲು ವಿವಿಧ ಗಲ್ಲಿಯವರು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಗತ್ಯ ತಯಾರಿಯಲ್ಲಿದ್ದಾರೆ. ನಾಳೆ ಸಂಜೆಯೊಳಗೆ ಕಾಮದಹನ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ ವಿವಿಧ ರಂಗೋಲಿಗಳನ್ನು ಹಾಕಿದ ನಂತರ ಕಟ್ಟಿಗೆಗಳನ್ನು ಒಟ್ಟಿ ನಡುವೆ ಔಡಲಗಿಡವನ್ನು ಇಟ್ಟು ಕಾಮದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಹಿಡಿದ ನಂತರ ಕಾಮದಹನ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಕಾಮದಹನ ಮಾಡಿದ ಮರುದಿನ ಎಲ್ಲೆಡೆ ಬಣ್ಣದಾಟವನ್ನು ಆಡುವುದು ರೂಢಿಯಲ್ಲಿದೆ. ಮಾ.೨೫ ರಂದು ಪಟ್ಟಣದಲ್ಲಿ ಬಣ್ಣದೋಕುಳಿ ನಡೆಯಲಿದೆ. ಕೆಲವೆಡೆ ಮಾ.26 ರಂದು ಬಣ್ಣದಾಟವಿದೆ ತಿಳಿದುಬಂದಿದೆ.ಪಟ್ಟಣದಲ್ಲಿ ಶಿವರಾತ್ರಿ ಮುಗಿದ ನಂತರ ಹೋಳಿ ಹಬ್ಬದ ಹಲಗೆ ನಿನಾದ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಚಿಕ್ಕಮಕ್ಕಳು ಹಲಗೆ ಬಾರಿಸುತ್ತಾ ಸಂತಸ ಪಡುತ್ತಿದ್ದಾರೆ. ಈಗಾಗಲೇ ಪ್ರಾಥಮಿಕ ಹಂತದ ಮಕ್ಕಳ ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಹಲಗೆ…

Read More

ಬಸವನಬಾಗೇವಾಡಿ: ಪಟ್ಟಣದ ಯುವಮುಖಂಡ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ೨೦೨೪ರ ಕರ್ನಾಟಕ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ಘೋಷಿಸಿದೆ.ಮಾ.೨೪ ರಂದು ಬೆಂಗಳೂರಿನ ನೆಲಮಂಗಲದ ಎಂವಿಎಂ ಕನ್ವೆನ್ಷನ್ ಹಾಲ್ನಲ್ಲಿ ಜರುಗುವ ರಾಜ್ಯಮಟ್ಟದ ೨ ನೇ ಪತ್ರಕರ್ತರ ಸಮ್ಮೇಳನದಲ್ಲಿ ಇವರಿಗೆ ಪ್ರಶಸ್ತಿ ಪತ್ರ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರು ತಿಳಿಸಿದ್ದಾರೆ.ಅಶೋಕ ಹಾರಿವಾಳ ಅವರು ಕರವೇ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಕನ್ನಡ ನೆಲ-ಜಲ-ನುಡಿ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಜೊತೆಗೆ ಅನೇಕ ಸಾಮಾಜಿಕ ಹೋರಾಟದಲ್ಲಿ ಭಾಗವಹಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಅನ್ಯಾಯವಾಗಿರುವುದನ್ನು ಖಂಡಿಸಿ ನ್ಯಾಯ ಸಿಗುವಂತೆ ಮಾಡುವಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಹೋರಾಟವನ್ನು ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More