ಮುದ್ದೇಬಿಹಾಳ: ಹೋಳಿ ಹಬ್ಬದ ನೆಪದಲ್ಲಿ ಹಣಕ್ಕೆ ಪೀಡಿಸುವದು, ಇತರರಿಗೆ ತೊಂದರೆ ಕೊಡುವದು ಕಂಡುಬಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಪಿಎಸ್‌ಐ ಸಂಜೀವ ತಿಪರೆಡ್ಡಿ ಎಚ್ಚರಿಸಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಹೋಳಿ ಹಬ್ಬವನ್ನು ಗುರಿಯಾಗಿಸಿಕೊಂಡು ರಸ್ತೆಯಲ್ಲಿ ನಿಂತು ಹಣಕ್ಕೆ ಪೀಡಿಸುವ, ಕೊಡದಿದ್ದರೆ ಬಣ್ಣ ಎರಚುವ ಬೆದರಿಕೆ ಹಾಕುವ ಬಗ್ಗೆ ಕೇಳಿ ಬಂದಿದೆ. ಇದನ್ನೆಲ್ಲವನ್ನು ಬಿಟ್ಟು ಶಾಂತಿಯಿಂದ ಹಬ್ಬವನ್ನು ಆಚರಿಸಬೇಕು. ಮಾ.೨೫ ಮತ್ತು ೨೬ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿರುವದರಿಂದ ವಿದ್ಯಾರ್ಥಿಗಳಿಗೆ ಮತ್ತು ಅವರೊಡನೆ ಹೋಗುತ್ತಿರುವ ಪಾಲಕರಿಗೆ ತೊಂದರೆ ನೀಡಕೂಡದು. ಮಧ್ಯದದಂಗಡಿಯವರು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಇದನ್ನ ಮೀರಿ ನಡೆದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.
ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಯುವ ಕಾಂಗ್ರೇಸ್ ಅಧ್ಯಕ್ಷರಫೀಕ ಶಿರೋಳ ಮತ್ತೀತರರು ಮಾತನಾಡಿ, ನಮ್ಮೂರು ಹೋಳಿ ಹಬ್ಬಕ್ಕೆ ಹೆಸರು ವಾಸಿಯಾಗಿದೆ. ಯಾವುದೇ ಗಲಾಟೆಗಳಾದ ಉಧಾಹರಣೆಗಳಿಲ್ಲ. ಮುಂದೆಯೂ ನಡೆಯದಂತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ ಎಂದರು.
ಪುರಸಭೆ ಸದಸ್ಯ ರಿಯಾಜ ಢವಳಗಿ, ಪ್ರಮುಖರಾದ ಮಹಾಂತೇಶ ಹಡಪದ, ಸದಾಶಿವ ಮಠ, ಸಂಗಣ್ಣ ಮೇಲಿನಮನಿ, ಮಹಾಂತೇಶ ಬೂದಿಹಾಳಮಠ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

