ವಿಜಯಪುರ ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನ | ಧ್ವಜಾರೋಹಣ | ಸರ್ವಾಧ್ಯಕ್ಷರ ಮೆರವಣಿಗೆ | ಪುಸ್ತಕ ಮಳಿಗೆ ಉದ್ಘಾಟನೆ
ವಿಜಯಪುರ: ಜಿಲ್ಲೆಯ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಈ ನೆಲದ ಭಾಷೆ ಪ್ರೀತಿಸಬೇಕು. ಎಂದು ಶಿಕ್ಷಣ ತಜ್ಞ ವಿಶ್ರಾಂತ ಪ್ರಾಚಾರ್ಯ ಪ್ರೊ ಎನ್ ಜಿ ಕೆರೂರ ಅಭಿಪ್ರಾಯ ವ್ಯಕ್ತಪಡಿಸಿದರು
ಶನಿವಾರ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಣ ಹಾಗೂ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ವಿನೂತನ ಗೋಷ್ಠಿಗಳನ್ಮು ಹಮ್ಮಿಕೊಳ್ಳುವದರ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಹೊಸತನ ತಂದುಕೊಟ್ಟಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿ, ಇಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮಕ್ಕೆ ಕನ್ನಡದ ಕಂಪನ್ನು ಪಸರಿಸಿದ ಕೀರ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ. ಜಿಲ್ಲೆಯಲ್ಲಿ ಹೊಸ ಕನ್ನಡ ಭವನವನ್ನು ನಿಮಿ೯ಸಿ ಅಲ್ಲಿ ಚಟುವಟಿಕೆಗಳು ಜರುಗಲಿ ನಮ್ಮೆಲ್ಲರ ಬೆಂಬಲ ನೀಡುತ್ತೆವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತದ್ದೇವಾಡಿ ಹಿರೇಮಠ ಸಂಸ್ಥಾನದ ಮಹಾಂತೇಶ ಹಿರೇಮಠ ಮಾತನಾಡಿ ಜಿಲ್ಲೆ ಕನ್ನಡ ಸಾಹಿತ್ಯದ ತಾಯಿಬೇರು ಇದ್ದಂತೆ. ವಿಶ್ವ ಸಾಹಿತ್ಯಕ್ಕೆ ನಮ್ಮ ಸಾಹಿತಿಗಳ ಕೊಡುಗೆ ಅನುಪಮ. ಅಂಥವರ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಿವ ಸಮ್ಮೇಳನದ ಕಾಯ೯ ಶ್ಲಾಘನೀಯ. ಎಂದರು.
ಸೋಮಲಿಂಗೇಶ್ವರ ಸ್ವಾಮೀಜಿ.
ಯೋಗೇಶ್ವರಿ ಮಾತಾಜಿ, ಕನಾ೯ಟಕ ಕಾಯ೯ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ. ಎರಡನೇಯ ಮಹಿಳಾ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿದರು.
ಡಾ:ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸಿಂಪೀರ ವಾಲಿಕಾರ ಆಶಯನುಡಿ ವ್ಯಕ್ತಪಡಿಸಿದರು.
ಡಾ. ಭುವನೇಶ್ವರಿ ಮೇಲಿನಮಠ ಡಾ: ಸಿದ್ದಣ್ಣ ಉತ್ನಾಳ. ಎಮ್ ಸಿ ಮುಲ್ಲಾ. ಅಭಿಷೇಕ ಚಕ್ರವರ್ತಿ.
ವೇದಿಕೆಯ ಮೇಲಿದ್ದರು.
ರಾಜಶೇಖರ ಕಂಬಾರ
ಡಾ ಮಾಧವ ಗುಡಿ. ಬೀರಪ್ಪ ಪೂಜಾರಿ. ಸುಭಾಷ ಕನ್ನೂರ. ಸಿದ್ದಣ್ಣ ಮಾನೆ ರೇವಣಸಿದ್ದಪ್ಪ ಕೊಪ್ಪದ. ಶಿವಾನಂದ ಡೋಣೂರ.
ಬಿ ಎಮ್ ಪಾಟೀಲ. ಮಹಮ್ಮದಗೌಸ ಹವಾಲ್ದಾರ. ಸುಖದೇವಿ ಅಲಬಾಳಮಠ. ಕೆ ಎಪ್ ಅಂಕಲಗಿ ಅನ್ನಪೂರ್ಣ ಬೆಳ್ಳೆನವರ.
ಶಿಲ್ಪಾ ಹಂಜಿ. ವಿದ್ಯಾ ಕಲ್ಯಾಣಶೇಟ್ಟಿ. ಎಮ್ ಬಿ ಕಟ್ಟಿಮನಿ. ಅಲಿಸಾಬ ಕಡಕೆ. ವಿಜಯಲಕ್ಷ್ಮಿ ಹಳಕಟ್ಟಿ. ಪ್ರವೀಣ ಡೋಣೂರ ಬಸವರಾಜ ರೆಬಿನಾಳ. ಮುಂತಾದ ಸಾಹಿತಿಗಳು ಉಪಸ್ಥಿತರಿದ್ದರು.

