ಮುದ್ದೇಬಿಹಾಳ: ಪವಿತ್ರವಾದ ರಂಜಾನ್ ಮಾಸದಲ್ಲಿ ಮಾಡಿದ ದಾನ ಇತರ ದಿನಗಳಲ್ಲಿ ಮಾಡಿದ ದಾನಕ್ಕಿಂತ ಹೆಚ್ಚಿನ ಫಲವನ್ನು ಕೊಡುತ್ತದೆ ಎಂದು ಬಾಗವಾನ ಬ್ಯಾಂಕ್ ನ ನಿಕಟಪೂರ್ವ ಅಧ್ಯಕ್ಷ ಎಚ್.ಆರ್.ಬಾಗವಾನ ಹೇಳಿದರು.
ಪಟ್ಟಣದ ಬಾಗವಾನ ಬ್ಯಾಂಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ, ಬಡವರಿಗೆ ದಾನ ಮಾಡುವ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ದಿನದ ದುಡಿಮೆಯಲ್ಲಿ ಸ್ವಲ್ಪವಾದರೂ ದಾನ ಮಾಡುವವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಇಮಾಮ ಮೌಲಾನಾ ಆಪ್ತಾಬ ಮಾತನಾಡಿ, ಬಾಗವಾನ ಜಮಾಅತ ನವರು ಈ ಬಾರಿ ವಿಶೇಷವಾಗಿ ಬಡವರ ಮನೆ ಬಾಗಿಲಿಗೆ ಕಿಟ್ ವಿತರಣೆ ಮಾಡಿ ದಾನ ಸ್ವೀಕರಿಸುವವರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ನೋಡಿಕೊಂಡಿರುವದು ವಿಶೇಷವಾಗಿದೆ ಎಂದರು.
ಬ್ಯಾಂಕ ಅಧ್ಯಕ್ಷ ಎಚ್.ಬಿ.ಸಾಲಿಮನಿ, ಸಂಘದ ಅಧ್ಯಕ್ಷ ಸುಲೇಮಾನ ಮಮದಾಪೂರ, ಉಪಾಧ್ಯಕ್ಷ ಎ.ಎ.ಹಳ್ಳೂರ, ಕಾರ್ಯದರ್ಶಿ ಎನ್.ಆರ್.ಮಮದಾಪೂರ, ಖಜಾಂಚಿ ಜಾಫರ ಬಾಗವಾನ, ಇಮಾಮ ಮೌಲಾನಾ ಹುಸೇನ ಉಮರಿ, ಎನ್.ಆರ.ಮಮದಾಪೂರ, ಡಿ.ಎಮ್ ಚೌಧರಿ, ಎಮ್.ಆರ್.ಕಲಾದಗಿ, ಡಿ.ಡಿ.ಬಾಗವಾನ, ಎನ್.ಡಿ.ಬಾಗವಾನ, ಎ.ಕೆ.ಮಕ್ತೆದಾರ, ಎನ್.ಡಿ.ಹುಂಚಾಳ, ಯು.ಕೆ.ಮಕ್ತೆದಾರ, ಎ.ಎನ್.ಹಳ್ಳೂರ, ಅಲ್ತಾಪ ಬಾಗವಾನ, ಶಪಿ ಬಾಗವಾನ, ಸಯ್ಯದ ಹಳ್ಳೂರ, ಜಾಫರ ಮುಜಾವರ, ಉಸ್ಮಾನ ಬಾಗವಾನ, ಅಬ್ದುಲ್ಲಾ ಚೌಧರಿ, ಮುಸ್ತಫಾ ಬಾಗವಾನ, ಅಲ್ಲಾಬಕ್ಷ ಇಟಗಿ, ಮಜೀದ ಬಾಗವಾನ, ಆಶೀಫ ಹಳ್ಳೂರ, ರಷೀದ ಚೌಧರಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

