ಮುದ್ದೇಬಿಹಾಳ: ಕಾನೂನಿನಲ್ಲಿ ಗಂಡಿನಷ್ಟೇ ಹೆಣ್ಣಿಗೂ ಸಮಾನವಾಗಿ ಪ್ರಾಧಾನ್ಯತೆ ನೀಡಿದ್ದರ ಪರಿಣಾಮ ಇಂದು ಮಹಿಳೆ ಕುಟುಂಬ ನಿರ್ವಹಣೆಯ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾಳೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಕೆಲ ಅನಿಷ್ಠ ಪದ್ಧತಿಗಳ ಆಚರಣೆಗಳಿಂದಾಗಿ ಹೆಣ್ಣು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದು ಕಟ್ಟು ನಿಟ್ಟಾದ ಕಾನೂನುಗಳು ಜಾರಿಯಾಗಿರುವದರಿಂದ ಎಲ್ಲ ರಂಗದಲ್ಲೂ ಮಹಿಳೆಗೆ- ಭಾಗಿಯಾಗುವ ಅವಕಾಶ ಇದೆ. ಭಾಗಿಯಾಗಲು ಮುಖ್ಯವಾಗಿ ಶಿಕ್ಷಣದ ಅವಶ್ಯಕತೆ ಇದೆ. ಹಾಗಾಗಿ ಯಾರೊಬ್ಬರೂ ತಮ್ಮ ಹೆಣ್ಣು ಮಗುವಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಮಹಿಳೆ ಯಾವುದೇ ಸಾಧನೆ ಮಾಡಲು ಒಬ್ಬ ಗಂಡಿನ ಪ್ರೋತ್ಸಾಹ ಅತೀ ಅವಶ್ಯ. ತಂದೆ, ಗಂಡ, ಅಣ್ಣ-ತಮ್ಮಂದಿರ ಸ್ಥಾನದಲ್ಲಿರುವವರು ಹೆಣ್ಣನ್ನು ತುಚ್ಛ ಭಾವನೆಯಿಂದ ಕಾಣದೇ ಅವಳ ಸಾಧನೆಗೆ ಅವಕಾಶ ನೀಡಿದಲ್ಲಿ ದೇಶದ ಪ್ರಗತಿ ಸಾಧ್ಯ ಎಂದರು.
ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ಮಹಿಳಾ ಹಕ್ಕುಗಳ ಕಾಯ್ದೆಯ ಕುರಿತು ವಿಶೇಶ ಉಪನ್ಯಾಸ ನೀಡಿದರು. ಕ್ರೈಂ ಪಿಎಸ್‌ಐ ಎಸ್.ಆರ್.ನಾಯಕ, ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವರ, ನ್ಯಾಯವಾದಿ ಜಯಾ ಸಾಲಿಮಠ, ನ್ಯಾಯಾಲಯದ ಸಿಬ್ಬಂದಿ ಮಂಜುಳಾ ಕಟ್ಟಿಮನಿ ಮಾತನಾಡಿದರು.
ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಹಿ.ಶ್ರೇ.ನ್ಯಾಯಾಲಯದ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ್, ಗ್ರೇಡ್-೨ ತಹಶೀಲ್ದಾರ ಎಸ್.ಎಸ್.ಕಟ್ಟಿ, ನ್ಯಾಯಾಲಯದ ಸಿಬ್ಬಂದಿಗಳಾದ ಎಸ್.ಎಸ್.ಚಕ್ರಮನಿ, ಸುರೇಶ ಬಳಗಾನೂರ, ಎಂ.ಎಫ್.ಜೇವರಗಿ, ಎ.ಆರ್.ಮುಜಾವರ, ವಿಜು ಶಿವಣಗಿ, ಜ್ಯೋತಿ ಹಕಾರಿ, ನರ್ಮದಾ ಮರೋಳ, ಅಮೀದಾ ನದಾಫ್, ಎಂ.ಎಸ್.ಸಾಲಿಮಠ, ಪಿ.ಎಲ.ಗಾಯಕವಾಡ, ಮಧು ಧರ್ಮಗಿರಿ, ಮಂಜುಳಾ ಗಾಡದ, ಮೀನಾಕ್ಷಿ ದೊಡಮನಿ, ಕಾವೇರಿ ರಾಠೋಡ, ಮಹಾಂತೇಶ ಹಚರೆಡ್ಡಿ, ಗೀತಾ ರಾಂಪೂರ, ಚನ್ನಮ್ಮ ಬಾಗೇವಾಡಿ, ನೀಲಮ್ಮ ಬಡಿಗೇರ, ಶೃತಿ ಜಾಯಿ, ಸುಷ್ಮಾ ಬಾಣಿ, ಇಸಾಕ ಒಂಟಿ ನ್ಯಾಯವಾದಿಗಳಾದ ಬಿ.ಆರ್.ನಾಡಗೌಡರ, ಜೆ.ಎ.ಚಿನಿವಾರ, ಎಂ.ಎಚ್.ಕ್ವಾರಿ, ಚೇತನ ಶಿವಶಿಂಪಿ, ಎಚ್.ಜಿ.ನಾಗೋಡ ರೇಣುಕಾ ಪಾಟೀಲ, ಹಸೀನಾ ಅನಂತಪೂರ, ಶ್ರೀದೇವಿ ರಾಜೂರ, ರಶ್ಮೀ ಕುಲಕರ್ಣಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಹೆಣ್ಣು ಮಗುವಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ :ನ್ಯಾ.ಲಕ್ಷ್ಮೀ
Related Posts
Add A Comment

