ವಿಜಯಪುರ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಲಿಕಾರ್ಥಿಗಳು ಈ ದಿನ ಗೊಗಲ್ ಗುರುವಿಗೆ ಶರಣಾಗಿರುವುದು ನಿಜಕ್ಕೂ ವಿಪರ್ಯಾಸ ಎಂದು ಸಹ ಶಿಕ್ಷಕ ಅಶೋಕ ಹಂಚಲಿ ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಎಸ್ ಎಸ್ ವಿ ಪಿ ಟಿ ಟ್ರಸ್ಟ್ ನ ಬಿಇಡಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಸ್ವಾಗತ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗುರು ಶಿಷ್ಯರ ಮೊದಲಿನಂತೆ ಈಗಿರದೆ ಸಂಪೂರ್ಣವಾಗಿ ಬದಲಾಗಿದೆ. ಗುರುಗಳು ಬಹಳ ಪ್ರೀತಿಯಿಂದ ವಿದ್ಯೆಯನ್ನು ಕಲಿಕಾರ್ಥಿಗಳಿಗೆ ಧಾರೆಯೆರೆಯುತ್ತಿದ್ದರು. ಅದರಂತೆ ಅವರು ಸ್ವೀಕರಿಸುತ್ತಿದ್ದರು. ಆದರೆ ಆದುನಿಕ ಯುಗದಲ್ಲಿ ವಿದ್ಯೆ ಸಂಪೂರ್ಣವಾಗಿ ಬದಲಾಗಿದೆ.
ಕಲಿಕೆಯಲ್ಲಿ ಪರಸ್ಪರ ತರಗತಿಗೆ ಹಾಜರಾಗಿ ಕಲಿಯುವುದು ಅತಿ ಅವಶ್ಯಕವಾಗಿದೆ. ಆದ್ದರಿಂದ ಬಿಇಡಿ ಶಿಕ್ಷಣ ಪಡೆಯುತ್ತಿರುವಾಗ ನಿರಂತರ ಅಧ್ಯಯನ, ಕೌಶಲ್ಯಗಳು ನಮ್ಮಲ್ಲಿ ಕರಗತ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳು ದೇಶವನ್ನು ಕಟ್ಟುವ ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗದೀಶ್. ಬಿ ಮಾತನಾಡಿ, ಮಾಡುವ ಕಾರ್ಯ ಯಾವುದೇ ಇರಲಿ ಶ್ರದ್ದೆ, ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು, ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅದನ್ನು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಗತ್ತಿನಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ ಅದರಂತೆ ಪ್ರಶಿಕ್ಷಣಾರ್ಥಿಗಳು ಮುಂದಿನ ಜೀವನಮಟ್ಟವನ್ನು ಸುಧಾರಿಸಲು ನಿಮ್ಮ ವೃತ್ತಿ ಕೌಶಲ್ಯಗಳನ್ನು ಮತ್ತು ಸಂವಹನ ಕೌಶಲ್ಯ ಇಮ್ಮಡಿಗೊಳಿಸಿಕೊಳ್ಳಬೇಕು.
ಭಾವಿ ಶಿಕ್ಷಕರಾಗಿರುವ ನೀವು ಮುಂದಿನ ಪ್ರತಿಭಾವಂತ, ನಿಷ್ಠೆ, ಕೌಶಲ್ಯಯುತ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಚನ್ನಬಸವ ಸ್ವಾಮೀಜಿ ಆಶಿರ್ವಚನ ನೀಡಿದರು.
ಎಸ್ ಎಸ್ ವಿ ಪಿ ಟಿ ಟ್ರಸ್ಟ್ ನ ಆಡಳಿತ ಅಧಿಕಾರಿಗ ಉಮೇಶ ಹಡಪದ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ವಿ.ಎಸ್.ಗೋಠೆ, ಆರ್.ಸಿ.ಪವಾರ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಬಸವರಾಜ ಪತ್ತಾರ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

