Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಮೂಲಕ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯದ ಮೂಲಕ ಕಾಲುವೆಗಳಿಗೆ ನೀರನ್ನು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಲಾಗಿದ್ದು, ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಈ ನೀರನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ನೀರು ಸರಬರಾಜು ಮಾಡುವ ವೇಳೆಯಲ್ಲಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ. ಜನರಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಿತವಾಗಿ ನೀರು ಬಳಸಲು ಗ್ರಾಮ ಮಟ್ಟದಲ್ಲಿ, ವಾರ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಿ ಎಂದು ಅವರು ಹೇಳಿದರು.ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಲಕಾಲಕ್ಕೆ ಕೆರೆಗೆ ಬೇಟಿ ನೀಡಿ ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.ಬರ ಪರಿಸ್ಥಿತಿ ಮತ್ತು ಲೋಕಸಭಾ ಸಾರ್ವತ್ರಿಕ ಚುನಾವಣೆ ಸಮಯವಾಗಿರುವುದರಿಂದ ಸಂಬಂಧಿಸಿದ ಗ್ರಾಮ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಯಾ ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯವಾಗಿ…
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರದಲ್ಲಿ ಮಾರ್ಚ 30 ರಂದು ಉಚಿತ ಫೈಬ್ರೋಸ್ಕ್ಯಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.ಆಸ್ಪತ್ರೆಯ ಟ್ರಾಮಾ ಕಟ್ಟಡದ ನೆಲಮಹಡಿಯಲ್ಲಿ ಮಾರ್ಚ 30 ರಂದು ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಈ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದ್ದು, ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಮತ್ತು ಡಯಟೀಸಿಯನ್ ತಜ್ಞರಿಂದ ಉಚಿತ ಸಮಾಲೋಚನೆ ಮತ್ತು ಸಲಹೆ ನಡೆಯಲಿದೆ.ಫೈಬ್ರೋಸ್ಕ್ಯಾನ್ ಸರಳವಾದ ಮತ್ತು ನೋವು ರಹಿತ ತಪಾಸಣೆ ವಿಧಾನವಾಗಿದ್ದು, ಯಕೃತ್ತಿನ(ಲೀವರ್) ಆರೋಗ್ಯವನ್ನು ನಿಖರವಾಗಿ ಪತ್ತೆ ಹಚ್ಚಲು ಬಳಕೆಯಾಗುವ ಆರೋಗ್ಯ ತಪಾಸಣೆ ಪದ್ದತಿಯಾಗಿದೆ. ಈ ತಪಾಸಣೆಯಿಂದ ಪಿತ್ತ ಜನಕಾಂಗದ ಕೊಬ್ಬಿನ ಕಾಯಿಲೆ, ಲೀವರ್ ಸಿರೋಸಿಸ್, ಲೀವರ್ ಕ್ಯಾನ್ಸರ್, ಮದ್ಯಪಾನಯುಕ್ತ ಪಿತ್ತಜನಕಾಂಗ ಕಾಯಿಲೆ, ಬೊಜ್ಜು ಮತ್ತು ಇತರೆ ಲೀವರ್ ಸಮಸ್ಯಗಳು, ದೀರ್ಘ ಕಾಲದ ಕಾಮಾಲೆ(ಹೆಪಟೈಟಿಸ್) ಬಿ ಮತ್ತು ಸಿ ಪತ್ತೆಮಾಡಬಹುದಾಗಿದೆ.60 ಜನರಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶ ಇದ್ದು, ನೋಂದಣಿಗಾಗಿ 9591682224 ಮತ್ತು 6366786003…
ವಿಜಯಪುರ: ಅನುಭಾವ ಸಾಹಿತ್ಯ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯದ ಕುರಿತು ವಿಶೇಷ ಅಧ್ಯಯನ ಮಾಡಿದ ಹಿರಿಯ ಸಂಶೋಧಕರಾದ ಗುರುಲಿಂಗ ಕಾಪಸೆ ಕನ್ನಡದ ಆಸ್ತಿ ಆಗಿದ್ದರೆಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಅವರು ಹೇಳಿದರು.ನಗರದ ಜಿಲ್ಲಾ ಯುವ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ ಡಾ . ಗುರುಲಿಂಗ ಕಾಪಸೆ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗುರುಲಿಂಗ ಕಾಪಸೆ ಅವರು ಜಿಲ್ಲೆಯ ಇಂಡಿ ತಾಲ್ಲೂಕಿನ ಬಿ ಕೆ ಲೋಣಿ ಗ್ರಾಮದಲ್ಲಿ ಜನಿಸಿ, ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿ ವಿಶ್ವ ವಿದ್ಯಾಲಯದದ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಸಂಶೋಧನಾ ಕ್ಷೇತ್ರಕ್ಕೆ ಹತ್ತಾರು ಅಮೂಲ್ಯ ಗ್ರಂಥಗಳನ್ನು ನೀಡಿದ್ದಾರೆಂದು ಹೇಳಿದರುಚಡಚಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಗೇರಿ ಅವರು ಮಾತನಾಡಿ, ಗುರುಲಿಂಗ ಕಾಪಸೆ ಅವರು ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿಯಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ…
ಮಂಡ್ಯದಿಂದ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್ ಬಾಬು, ಹಾಸನದಿಂದ ಪ್ರಜ್ವಲ್ ಸ್ಪರ್ಧೆ | ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಠನೆ ಹಾಸನ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ತಮ್ಮ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ಮಂಡ್ಯ ಕ್ಷೇತ್ರದ ಬಗ್ಗೆ ಪಕ್ಷ ಗಂಭೀರವಾಗಿದ್ದು, ಜೆಡಿಎಸ್ ಕಾರ್ಯಕರ್ತರು ಚೆನ್ನೈನಲ್ಲಿ ಎಚ್.ಡಿ.ಕುಮಾರಸ್ವಾಮಿ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ, ಪಕ್ಷ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಮಂಡ್ಯದಿಂದ ಸ್ಪರ್ಧಿಸುವಂತೆ ಒತ್ತಡ ಹೇರಿದ್ದಾರೆ ಎಂದರು.ಇತ್ತೀಚೆಗೆ ಸಭೆ ಸೇರಿದ್ದ ಕೋರ್ ಕಮಿಟಿ ಕೂಡ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.ಕೋಲಾರದಿಂದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.ನಂತರ ಕೋಲಾರದಲ್ಲಿ ಎಸ್‌ಸಿ-ಎಸ್‌ಟಿ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಜೆಡಿಎಸ್ ಮತ್ತು ಬಿಜೆಪಿ ನಾಯಕರು…
ಯಡ್ರಾಮಿ: ಇಂಡೋನೇಷಿಯಾ ಕೌನ್ಸಲೇಟ್ ಸಹಯೋಗದಲ್ಲಿ ವಿಶ್ವವಾಣಿ ದಿನಪತ್ರಿಕೆಯು ಪ್ರತಿ ವರ್ಷ ಕೊಡಮಾಡುವ ಅಂತಾರಾಷ್ಟ್ರೀಯ ಪ್ರತಿಷ್ಠಿತ “ಗ್ಲೋಬಲ್ ಅಚೀವರ್ಸ್ ಅವಾರ್ಡ್” ಪ್ರಶಸ್ತಿಗಾಗಿ ಸಾಹಿತಿ, ಸಂಶೋಧಕ, ಚಿತ್ರಕಲಾವಿದ ಡಿ.ಎನ್. ಅಕ್ಕಿ ಅವರನ್ನು ಆಯ್ಕೆ ಮಾಡಿದೆ.ವಿವಿಧ ಕ್ಷೇತ್ರಗಳಲ್ಲಿಯ ಅಪೂರ್ವ ಸಾಧಕರನ್ನು ಗುರುತಿಸಿರುವ ಈ ಸಂಸ್ಥೆಗಳು ಇಂಡೋನೇಷಿಯಾದ “ಬಾಲಿ”ಯಲ್ಲಿ ಮಾ. 30ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿವೆ. ಆ ದೇಶದ ಪ್ರತಿಷ್ಠಿತ ಗಣ್ಯರು ಪಾಲ್ಗೊಳ್ಳಲಿದ್ದು, ಭಾರತ- ಇಂಡೋನೇಷಿಯಾ ಕಲಾವಿದರಿಂದ ಕಲಾ ಪ್ರದರ್ಶವೂ ಆಯೋಜಿಸಲಾಗಿದೆ.ಡಿ.ಎನ್. ಅಕ್ಕಿ ಅವರು ಚಿತ್ರಕಲೆಯ ನಿವೃತ್ತ ಶಿಕ್ಷಕರು. ಮೂಲತಃ ಯಾದಗಿರಿನ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಸಗರನಾಡಿನ ಶಾಸನಗಳ ಸಂಶೋಧನೆ, ವ್ಯಕ್ತಿಚಿತ್ರಗಳು, ಜೈನ ಸಾಹಿತ್ಯ, ಜಾನಪದೀಯ ಸಾಹಿತ್ಯ, ರೇಡಿಯೋ ನಾಟಕಗಳು-ಚಿಂತನೆಗಳು ಹೀಗೆ ವಿವಿಧ ವಲಯಗಳಲ್ಲಿ 19ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಸೇರಿದಂತೆ 36ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಜೈನ ಅಧ್ಯಯನ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇರಿದಂತೆ ಪ್ರತಿಷ್ಠಿತ…
ಸಿಂದಗಿ ಮತಕ್ಷೇತ್ರದಲ್ಲಿ ಒಟ್ಟು ೨,೪೦,೪೪೪, ಮತದಾರರು | ಸ.ಚುನಾವಣಾಧಿಕಾರಿ ವಿನಯ ಪಾಟೀಲ ಮಾಹಿತಿ ಸಿಂದಗಿ: ೧,೨೩,೩೧೩ ಪುರುಷ ಮತದಾರರು, ೧,೧೭,೧೦೦ ಮಹಿಳಾ ಮತದಾರರು, ೧೩೮೧ ವಯಸ್ಕರು ಹಾಗೂ ೨೯ ತೃತೀಯ ಲಿಂಗಿಗಳನ್ನೊಳಗೊಂಡಂತೆ ಒಟ್ಟು ಅಂದಾಜು ೨,೪೦,೪೪೪, ಮತದಾರರು ಇದ್ದಾರೆ ಎಂದು ಸಹಾಯಕ ಚುನಾವಣಾ ಅಧಿಕಾರಿ ವಿನಯ್ ಪಾಟೀಲ್ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಪ್ರಿಲ್ ೧೨ರಿಂದ೧೯ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಏ.೨೦ರಂದು ನಾಮಪತ್ರಗಳ ಪರಿಶೀಲನೆ, ಏ.೨೨ರಂದು ನಾಮಪತ್ರಗಳ ಹಿಂಪಡೆಯುವಿಕೆ ನಡೆಯಲಿದ್ದು, ಮೇ.೭ರಂದು ಅಭ್ಯರ್ಥಿಗಳ ಭವಿಷ್ಯವು ಮತದಾನ ಪೆಟ್ಟಿಗೆಯಲ್ಲಿ ಭದ್ರವಾಗಲಿದ್ದು, ಅಭ್ಯರ್ಥಿಗಳ ಭವಿಷ್ಯ ಜೂ.೪ ರಂದು ನಿರ್ಧಾರವಾಗಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಹೇಳಿದರು.ಅಂಗವಿಕಲರಿಗಾಗಿ ವಿಶೇಷ ವೀಲ್ ಚೇರ್‌ಗಳ ವ್ಯವಸ್ಥೆ ಕೂಡಾ ಮಾಡಲಾಗುವುದು. ಮತದಾನ ಕೇಂದ್ರಗಳಿಗೆ ಸರಾಗವಾಗಿ ಹೋಗಲು ರ‍್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಮರ್ಪಕ ವಿದ್ಯುತ್ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಹಾಗೆಯೇ ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ಕೂಡ ವ್ಯವಸ್ಥೆ…
ಸಿಂದಗಿ: ತಾಲೂಕಿನ ಖೈನೂರ ಗ್ರಾಮದ ಶ್ರೀಮಂತ ಪಾಟೀಲ ಅವರನ್ನು ಬಿಜೆಪಿ ಮಂಡಲದ ಯುವ ಮೋರ್ಚಾ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮಂಡಲದ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಆದೇಶಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಮಂತ ಪಾಟೀಲ, ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಪಕ್ಷದ ಏಳಿಗೆಗಾಗಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಉತ್ಸುಕನಾಗಿದ್ದೇನೆ. ಹಾಗೂ ಲೋಕಸಭಾ ಚುನಾವಣೆ ಮತ್ತು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ನಮ್ಮ ಸಿಂದಗಿ ಮಂಡಲದೊಂದಿಗೆ ಸದಾ ಕಾರ್ಯ ನಿರ್ವಹಿಸಲು ಮುಂದೆ ಬರುತ್ತೇನೆ ಎಂದಿದ್ದಾರೆ.
ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಉತ್ತೀರ್ಣ | ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆ ಸಿಂದಗಿ: ಪಟ್ಟಣದ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಪಾಸಾಗಿ ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಆರ್.ಡಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.ಜನೇವರಿಯಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಆರ್.ಡಿ.ಕುಲಕರ್ಣಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಕೋಚಿಂಗ್ ಕ್ಲಾಸ್‌ನ ೨೦೦ ವಿದ್ಯಾರ್ಥಿಗಳಲ್ಲಿ ಸುಮಾರು ೧೮೫ವಿದ್ಯಾರ್ಥಿಗಳು ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದು, ೭೮ ವಿದ್ಯಾರ್ಥಿಗಳು ೨೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕುಮಾರ ಶ್ರೇಯಸ ಮನಹಳ್ಳಿ ೩೦೦ ಅಂಕಗಳಿಗೆ ೨೬೮, ರಿಯಾಜ ನದಾಫ್ ೨೬೧, ವಿಕಾಸ ಬಗಲಿ ೨೫೯, ಪ್ರೀತಮ ಬಿರಾದಾರ ೨೫೫, ಕಿರಣರೆಡ್ಡಿ ಕೊಲ್ಲೂರ ೨೫೪, ಶಿವಕುಮಾರ ಸಜ್ಜನ ೨೫೩, ಶಶಾಂಕ ಬಿರಾದಾರ ೨೫೨, ರಾಹುಲ ತಾವರಖೇಡ ೨೫೦ ಮತ್ತು ಆಂಗ್ಲ…
ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಉತ್ತೀರ್ಣ | ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆ ಸಿಂದಗಿ: ಪಟ್ಟಣದ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಪಾಸಾಗಿ ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಆರ್.ಡಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.ಜನೇವರಿಯಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಆರ್.ಡಿ.ಕುಲಕರ್ಣಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಕೋಚಿಂಗ್ ಕ್ಲಾಸ್‌ನ ೨೦೦ ವಿದ್ಯಾರ್ಥಿಗಳಲ್ಲಿ ಸುಮಾರು ೧೮೫ವಿದ್ಯಾರ್ಥಿಗಳು ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದು, ೭೮ ವಿದ್ಯಾರ್ಥಿಗಳು ೨೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕುಮಾರ ಶ್ರೇಯಸ ಮನಹಳ್ಳಿ ೩೦೦ ಅಂಕಗಳಿಗೆ ೨೬೮, ರಿಯಾಜ ನದಾಫ್ ೨೬೧, ವಿಕಾಸ ಬಗಲಿ ೨೫೯, ಪ್ರೀತಮ ಬಿರಾದಾರ ೨೫೫, ಕಿರಣರೆಡ್ಡಿ ಕೊಲ್ಲೂರ ೨೫೪, ಶಿವಕುಮಾರ ಸಜ್ಜನ ೨೫೩, ಶಶಾಂಕ ಬಿರಾದಾರ ೨೫೨, ರಾಹುಲ ತಾವರಖೇಡ ೨೫೦ ಮತ್ತು ಆಂಗ್ಲ…
ನಲ್ಲಿಗಳಿಂದ ಪೋಲಾಗುತ್ತಿರುವ ನೀರು | ಕಂಡು ಕಾಣದಂತಿರುವ ಅಧಿಕಾರಿಗಳು | ಸಾರ್ವಜನಿಕರ ಆಕ್ರೋಶ *- ರಶ್ಮಿ ನೂಲಾನವರ* ಸಿಂದಗಿ: ರಾಜ್ಯದಲ್ಲಿ ಈಗಾಗಲೇ ಬರಗಾಲದ ಛಾಯೆ ಆವರಿಸಿದೆ. ಹಲವು ಕಡೆಗಳಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಆದರೆ ಸಿಂದಗಿ ಪಟ್ಟಣದ ಪುರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ನಳ ಬಿಟ್ಟಾಗೊಮ್ಮೆ ನೀರು ಚರಂಡಿ ಮತ್ತು ರಸ್ತೆಯ ಪಾಲಾಗುತ್ತಿದೆ. ಹೌದು. ಪಟ್ಟಣದ ಬಂದಾಳ ರಸ್ತೆಯಲ್ಲಿ ಫೈಪ್‌ಗಳು ಒಡೆದು ಹೋಗಿದ್ದರೂ ಪುರಸಭೆ ಇದುವರೆಗೆ ದುರಸ್ತಿ ಮಾಡುವ ಕೆಲಸ ಮಾಡಿಲ್ಲ. ಇದರಿಂದ ನೀರು ರಸ್ತೆಯಲ್ಲಿ ಪೋಲಾಗುತ್ತಿದೆ.ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಉಢಾಪೆ ಉತ್ತರ ನೀಡುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಇದು ಕೇವಲ ಬಂದಾಳ ರಸ್ತೆಯ ಕಥೆಯಷ್ಟೇ ಅಲ್ಲ. ಪಟ್ಟಣದ ಹಲವು ಓಣಿಗಳಲ್ಲಿ ಇದೇ ದುಸ್ಥಿತಿಯಿದೆ. ಈ ಬಗ್ಗೆ ಪುರಸಭೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳುವುದಿರಲಿ ಚರ್ಚೆ ಕೂಡ ಮಾಡುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ವರ್ಷ ವರುಣನ ಕಠೋರತನ…
