ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಉತ್ತೀರ್ಣ | ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆ
ಸಿಂದಗಿ: ಪಟ್ಟಣದ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಪಾಸಾಗಿ ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಆರ್.ಡಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಜನೇವರಿಯಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಆರ್.ಡಿ.ಕುಲಕರ್ಣಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಕೋಚಿಂಗ್ ಕ್ಲಾಸ್‌ನ ೨೦೦ ವಿದ್ಯಾರ್ಥಿಗಳಲ್ಲಿ ಸುಮಾರು ೧೮೫ವಿದ್ಯಾರ್ಥಿಗಳು ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದು, ೭೮ ವಿದ್ಯಾರ್ಥಿಗಳು ೨೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕುಮಾರ ಶ್ರೇಯಸ ಮನಹಳ್ಳಿ ೩೦೦ ಅಂಕಗಳಿಗೆ ೨೬೮, ರಿಯಾಜ ನದಾಫ್ ೨೬೧, ವಿಕಾಸ ಬಗಲಿ ೨೫೯, ಪ್ರೀತಮ ಬಿರಾದಾರ ೨೫೫, ಕಿರಣರೆಡ್ಡಿ ಕೊಲ್ಲೂರ ೨೫೪, ಶಿವಕುಮಾರ ಸಜ್ಜನ ೨೫೩, ಶಶಾಂಕ ಬಿರಾದಾರ ೨೫೨, ರಾಹುಲ ತಾವರಖೇಡ ೨೫೦ ಮತ್ತು ಆಂಗ್ಲ ಮಾಧ್ಯಮದಲ್ಲಿ ಸಂಗಮೇಶ ಹಂಜಿ ೨೫೧, ಸಮೃದ್ಧಿ ಇಂಗಳೆ ೨೪೩, ವಿಜಯಕುಮಾರ ೨೪೧, ಜೋಹಾ ಇರಮ್ ಬಂಥನಾಳ ೨೪೦, ಚೈತನ್ಯ ಮುತ್ತಣ್ಣನವರ ೨೩೪ ಅಂಕಗಳನ್ನು ಪಡೆದುಕೊಂಡು ಆರ್.ಡಿ. ಕುಲಕರ್ಣಿ ಕೋಚಿಂಗ್ ಸ್ಕೂಲ್‌ನ್ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕೋಚಿಂಗ್ ಸ್ಕೂಲ್‌ನ ಸಂಸ್ಥಾಪಕ ಆರ್.ಡಿ. ಕುಲಕರ್ಣಿ ನಿರ್ದೇಶಕ ಪಿ.ಡಿ. ಕುಲಕರ್ಣಿ, ವಿದ್ಯಾನಿಕೇತನ ಮತ್ತು ಪ್ರೇರಣಾ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಎಮ್.ಪಿ. ಬುಕ್ಕಾ ಮತ್ತು ಪ್ರೇರಣಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯೆ ಎಸ್.ಆಯ್.ಅಸ್ಕಿ, ಸತೀಶ ಕುಲಕರ್ಣಿ, ಎಮ್.ಎಮ್.ಜುಮನಾಳ, ದಾನಯ್ಯ ಹಿರೇಮಠ, ಅಲ್ತಾಪ ತಾಂಬೋಳಿ, ಕಿರಣ ಕುಲಕರ್ಣಿ ಸೇರಿದಂತೆ ಎರಡು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
