ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರದಲ್ಲಿ ಮಾರ್ಚ 30 ರಂದು ಉಚಿತ ಫೈಬ್ರೋಸ್ಕ್ಯಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಆಸ್ಪತ್ರೆಯ ಟ್ರಾಮಾ ಕಟ್ಟಡದ ನೆಲಮಹಡಿಯಲ್ಲಿ ಮಾರ್ಚ 30 ರಂದು ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಈ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದ್ದು, ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಮತ್ತು ಡಯಟೀಸಿಯನ್ ತಜ್ಞರಿಂದ ಉಚಿತ ಸಮಾಲೋಚನೆ ಮತ್ತು ಸಲಹೆ ನಡೆಯಲಿದೆ.
ಫೈಬ್ರೋಸ್ಕ್ಯಾನ್ ಸರಳವಾದ ಮತ್ತು ನೋವು ರಹಿತ ತಪಾಸಣೆ ವಿಧಾನವಾಗಿದ್ದು, ಯಕೃತ್ತಿನ(ಲೀವರ್) ಆರೋಗ್ಯವನ್ನು ನಿಖರವಾಗಿ ಪತ್ತೆ ಹಚ್ಚಲು ಬಳಕೆಯಾಗುವ ಆರೋಗ್ಯ ತಪಾಸಣೆ ಪದ್ದತಿಯಾಗಿದೆ. ಈ ತಪಾಸಣೆಯಿಂದ ಪಿತ್ತ ಜನಕಾಂಗದ ಕೊಬ್ಬಿನ ಕಾಯಿಲೆ, ಲೀವರ್ ಸಿರೋಸಿಸ್, ಲೀವರ್ ಕ್ಯಾನ್ಸರ್, ಮದ್ಯಪಾನಯುಕ್ತ ಪಿತ್ತಜನಕಾಂಗ ಕಾಯಿಲೆ, ಬೊಜ್ಜು ಮತ್ತು ಇತರೆ ಲೀವರ್ ಸಮಸ್ಯಗಳು, ದೀರ್ಘ ಕಾಲದ ಕಾಮಾಲೆ(ಹೆಪಟೈಟಿಸ್) ಬಿ ಮತ್ತು ಸಿ ಪತ್ತೆಮಾಡಬಹುದಾಗಿದೆ.
60 ಜನರಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶ ಇದ್ದು, ನೋಂದಣಿಗಾಗಿ 9591682224 ಮತ್ತು 6366786003 ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
