Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ವೀಣಾಂತರಂಗ- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ವಿಮಾನವನ್ನು ಹಾರಿಸಬೇಕು ಎಂಬ ಏಕೈಕ ಮಹದಾಕಾಂಕ್ಷೆ ಹೊಂದಿದ ಮಹಿಳೆಯೊಬ್ಬಳು ಪುರುಷ ಪ್ರಧಾನ ಮಿಲಿಟರಿ ವಾಯುಪಡೆ ಯೋಧರ ಗುಂಪಿನಲ್ಲಿ ಒಬ್ಬಳಾಗಿ ಸಾವಿರಾರು ಗಂಟೆಗಳ ಕಾಲ ಯುದ್ಧ ವಿಮಾನವನ್ನು ಹಾರಿಸಿದ ಭಾರತದ ಮೊದಲ ಪೈಲೆಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ. ಕಾರ್ಗಿಲ್ ಯುದ್ಧದಲ್ಲಿ ಮದ್ದು ಗುಂಡುಗಳ ಸಿಡಿತದ ನಡುವೆ ವೈರಿಗಳಿಂದ ಗಾಯಗೊಂಡ 900ಕ್ಕೂ ಹೆಚ್ಚು ಭಾರತೀಯ ಯೋಧರನ್ನು ರಕ್ಷಿಸುವಲ್ಲಿ ನಿರತಳಾದ ವೀರ ವನಿತೆ, 40ಕ್ಕೂ ಹೆಚ್ಚು ಬಾರಿ ತನ್ನ ಚೀತ ವಿಮಾನವನ್ನು ತುರ್ತು ಪರಿಸ್ಥಿತಿಗಳಲ್ಲಿ ಹಾರಿಸುತ್ತಾ ಯುದ್ಧ ದಲ್ಲಿ ಭಾಗಿಯಾದ ವೀರರಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸುವಲ್ಲಿ, ಗಾಯಗೊಂಡವರನ್ನು ರಕ್ಷಿಸುವಲ್ಲಿ ಮತ್ತು ವೈರಿ ಪಡೆಯವರು ನೆಲೆ ಮಾಡಿರುವ ಜಾಗಗಳನ್ನು ಗುರುತಿಸುವಲ್ಲಿ ಭಾರತೀಯ ಭೂಸೇನೆಯ ಯೋಧರ ಬೆನ್ನೆಲುಬಾಗಿ ತನ್ನ ಸ್ನೇಹಿತೆ ಕೇರಳ ರಾಜ್ಯದ ಇನ್ನೋರ್ವ ಫ್ಲೈಟ್ ಆಫೀಸರ್ ವಿದ್ಯಾ ರಾಜನರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಕಾರ್ಗಿಲ್ ವನಿತೆ ಎಂಬ ಹೆಸರನ್ನು ಪಡೆದ ವ್ಯಕ್ತಿ ಗುಂಜನ್ ಸಕ್ಸೇನ. 1975ರಲ್ಲಿ ಜನಿಸಿದ…
ವಿಜಯಪುರ: ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಮಹಾಪೌರರಾಗಿ ಶ್ರೀಮತಿ ಮಹೇಜಬಿನ ಗಂ.ಅಬ್ದುಲರಜಾಕ ಹೊರ್ತಿ ಹಾಗೂ ಉಪ ಮಹಾಪೌರರಾಗಿ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಆಯ್ಕೆಯಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಧ್ಯಕ್ಷಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಬಿ.ಶೆಟ್ಟೆಣ್ಣವರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯಲ್ಲಿ ಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ಮಹೇಜಬಿನ ಗಂ.ಅಬ್ದುಲರಜಾಕ ಹೊರ್ತಿ ಅವರ ಪರವಾಗಿ ೨೨ ಸದಸ್ಯರ ಮತ ಚಲಾಯಿಸಿದ್ದರಿಂದ ಹಾಗೂ ಉಪಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.ನಿಗದಿಯಂತೆ ಮಂಗಳವಾರ ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ಮಹಾಪೌರ ಸ್ಥಾನಕ್ಕೆ ೨ ಅಭ್ಯರ್ಥಿಗಳಿಂದ ೫ ನಾಮಪತ್ರಗಳು ಸ್ವೀಕೃತವಾಗಿದ್ದವು. ಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ ೫ ನಾಮಪತ್ರ ಹಾಗೂ ಉಪಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ ೨ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಮದ್ಯಾಹ್ನ…
ಬಿಜೆಪಿಗೆ ತೀವ್ರ ಮುಖಭಂಗ | ಸಚಿವ ಎಂ.ಬಿ.ಪಾಟೀಲರ ಮೇಲುಗೈ | ಬಿಜೆಪಿ ಸದಸ್ಯರಿಂದ ಚುನಾವಣೆ ಬಹಿಷ್ಕಾರ ವಿಜಯಪುರ: ನಗರದಲ್ಲಿ ಮಂಗಳವಾರ ನಡೆದ ವಿಜಯಪುರ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಮೆಹಜಬೀನ್ ಹೊರ್ತಿ, ಉಪಮೇಯರ್ ಆಗಿ ದಿನೇಶ ಹಳ್ಳಿ ಆಯ್ಕೆಯಾಗಿದ್ದಾರೆ.ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮಹಾಪೌರ ಸ್ಥಾನಕ್ಕೆ ೩೪ನೇ ವಾರ್ಡಿನ ಸದಸ್ಯೆ ಮಾಹೇಜಬೀನ್ ಹೊರ್ತಿ ಹಾಗೂ ಬಿಜೆಪಿಯಿಂದ ೧೨ನೇ ವಾರ್ಡಿನ ಸದಸ್ಯೆ ರಶ್ಮಿ ಕೋರಿ ನಾಮಪತ್ರ ಸಲ್ಲಿಸಿದ್ದರು. ಇನ್ನು ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದ ಉಪ ಮಹಾಪೌರ ಸ್ಥಾನಕ್ಕೆ ೧೮ ನೇ ವಾರ್ಡಿನ ಸದಸ್ಯ ದಿನೇಶ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಯಾವೊಂದು…
28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಸ್ಪಷ್ಠನೆ ವಿಜಯಪುರ: ನಗರದಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ನಗರದಲ್ಲಿ ಮಂಗಳವಾರ ಆರಂಭವಾದ ನಾಲ್ಕು ದಿನಗಳ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್ 2023-24 ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಂ ಕಾಮಗಾರಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಅದಕ್ಕೆ ಅಗತ್ಯವಾಗಿರುವ ಹೆಚ್ಚಿನ ಅನುದಾನವನ್ನು ಸರಕಾರ ನೀಡಲಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಬೇಕಿರುವ ಅತ್ಯುತ್ತಮ ಹವಾಮಾನ ಮತ್ತು ಪೂರಕ ವಾತಾರವಣವಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟಗಳು ರೋಡ್ ಸೈಕ್ಲಿಂಗ್ ನಲ್ಲಿ ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ. ಇಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸ್ಥಾಪನೆಯಿಂದ ರೋಡ್ ಸೈಕ್ಲಿಂಗ್, ವೆಲೋಡ್ರಂ ಸೈಕ್ಲಿಂಗ್ ಮತ್ತು ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧಿಗಳಿಗೂ…
ಆಲಮಟ್ಟಿ: ಇಲ್ಲಿಯ ಕೃಷ್ಣಾ ನದಿ ಹಿನ್ನೀರಿನ ಪಾರ್ವತಿ ಕಟ್ಟಾ ಸೇತುವೆ (ಬೇನಾಳ ಬ್ರಿಜ್) ಮೇಲಿಂದ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜರುಗಿದೆ.ಮೃತಳು ಸಮೀಪದ ವಂದಾಲ ಗ್ರಾಮದ ದೀಪಾ ರಾಘವೇಂದ್ರ ವಡವಡಗಿ (34) ಎಂದು ತಿಳಿದುಬಂದಿದೆ. ಮೃತ ಮಹಿಳೆಗೆ ಪುತ್ರ, ಪುತ್ರಿ ಇದ್ದಾರೆ.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆಸ್ಪತ್ರೆಗಳ ಸಹಯೋಗದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಚಿಕ್ಕ ಮಕ್ಕಳ ತಜ್ಞ ಡಾ ಪರಶುರಾಮ ವಡ್ಡರ ಮಾತನಾಡಿ, ಗರ್ಭಿಣಿ ಮಹಿಳೆಯರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜೊತೆಗೆ ಪೌಷ್ಟಿಕ ಆಹಾರ ಹಾಗೂ ತರಕಾರಿ ಸೊಪ್ಪುಗಳನ್ನು ದಿನನಿತ್ಯ ಹೆಚ್ಚಾಗಿ ಸೇವಿಸಬೇಕು. ಇದರಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದು ಮತ್ತು ಸುರಕ್ಷಿತ ಹೆರಿಗೆಗೆ ಸಹಕಾರಿ ಆಗುವುದರ ಜೊತೆಗೆ ಪ್ರತಿಯೊಬ್ಬ ಗರ್ಭಿಣಿಯರು ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಎಚ್.ಐ.ವಿ ಸೋಂಕು ಇರುವುದು ಪತ್ತೆಯಾದರೆ ತಾಯಿಯಿಂದ ಮಗುವಿಗೆ ಎಚ್.ಐ.ವಿ ಹರಡುವುದನ್ನು ತಡೆಯಬಹುದು ಎಂದರು.ತಾಲೂಕ ಆಸ್ಪತ್ರೆಯ ಎ.ಆರ್.ಟಿ ಆಪ್ತ ಸಮಾಲೋಚಕಿ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ಗೌಡರ ಮಾತನಾಡಿದರು.ತಾಲೂಕ ಆಸ್ಪತ್ರೆಯ ಡಾ.ಮೊಹಮ್ಮದ್ ಆಸ್ಪಾಕ್ಅಹ್ಮದ ಜನರಲ್ ಸರ್ಜನ ಅಧ್ಯಕ್ಚತೆ ವಹಿಸಿದ್ದರು. ಡಾ.ಹಸನ ಬೀಳಗಿ, ಡಾ. ಆರ್.ಎಂ.ಇನಾಮದಾರ, ಹಿರಿಯ ಶುಶ್ರೂಷಣಾಧಿಕಾರಿ ಬಿ.ಎನ್.ಸಾರವಾಡ, ಎಸ್.ಬಿ.ಬೋಸ್ಲೆ, ಎಂ.ಬಿ.ಬಾಗವಾನ್, ಏನ್.ಎಸ್.ಹುಂಡೇಕರ್ಲ,…
ಚಡಚಣ: ಸ್ವಚ್ಛ ಭಾರತ್ ಮಿಷನ್ (ನಗರ) 1.0 ಯೋಜನೆಯಡಿ ಬಯಲು ಶೌಚಮುಕ್ತ ನಗರ ಪ್ರದೇಶಗಳಾಗಿ ಘೋಷಿಸಲಾಗಿರುತ್ತದೆ. ಇತ್ತೀಚೆಗೆ ದಿನೇ ದಿನೇ ನಗರ ವ್ಯಾಪ್ತಿಯು ಹೆಚ್ಚಾಗುತ್ತಿರುವದರಿಂದ ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ ನೈಮ್ರ್ಯಲೀಕರಣ, ಸ್ವಚ್ಛತೆ ಮತ್ತು ಶುಚಿತ್ವದ ಮೇಲೆ ಹೆಚ್ಚು ಗಮನಹರಿಸಿ ಸ್ವಚ್ಛ ಭಾರತ್ ಮಿಷನ್ (ನಗರ)2.0 ಯೋಜನೆಯಡಿ, ಚಡಚಣ ಪಟ್ಟಣ ಪಂಚಾಯತಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 90 ಸೀಟ್ ಶೌಚಾಲಯ ನಿರ್ಮಾಣ ಮಾಡಲು ಮಂಜೂರಿಯಾಗಿದ್ದು, ಸದರಿ ಶೌಚಾಲಯ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿರುತ್ತದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅರ್ಹ ಫಲಾನುಭವಿಗಳು ಜ.17 ಸಂಜೆ 5.30ರೊಳಗೆ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲು ತಿಳಿಸಿದ ಅವರು, ಅರ್ಜಿಗಳು ಪಟ್ಟಣ ಪಂಚಾಯತಿಯ ಆರೋಗ್ಯ ವಿಭಾಗದಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ .
ವಿಜಯಪುರ: ಹೊನ್ನಾವರದ ಕಾಸರಕೋಡ್ ಟೊಂಕದಲ್ಲಿ ಮೀನುಗಾರರಿಗೆ ಮತ್ತು ವಾಣಿಜ್ಯ ಬಂದರು ವಿರೋಧಿ ಹೋರಾಟಗಾರರಿಗೆ ಕೆಲವು ಅಪರಿಚಿತ ವ್ಯಕ್ತಿಗಳು ತಾವು ಭೂಗತ ಲೋಕದವರು, ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅವರ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮತ್ತು ರಸ್ತೆ ಕಾಮಗಾರಿಕೆಗೆ ಅಡ್ಡಿಪಡಿಸಿದರೆ ಪ್ರಾಣಬೆದರಿಕೆಯೊಡ್ಡಿ ಹೆದರಿಸಲು ಪ್ರಯತ್ನಿಸಿದ್ದು ಖಂಡನೀಯ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ ಡಾ.ಗೌತಮ್.ಆರ್.ಚೌಧರಿ ತಿಳಿಸಿದ್ದಾರೆ.ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇದೇ ವೇಳೆ ಮೀನುಗಾರಿಕೆ ಸಚಿವಮಂಕಾಳ ವೈದ್ಯ ಘಟನಾ ಸ್ಥಳದಲ್ಲಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.ಆದರೆ ಮೀನುಗಾರರ ಹಿತರಕ್ಷಣೆಗಾಗಿ ಯಾವುದೇ ಒತ್ತಡ ಹಾಗೂ ಶಿಫಾರಸುಗಳಿಗೆ ಮಣಿಯದೆ ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಹಾಗೂ ಮೀನುಗಾರಿಕೆ ಸಚಿವರಿಗೆ ಡಾ.ಗೌತಮ್.ಆರ್.ಚೌಧರಿ ಆಗ್ರಹಿಸಿದ್ದಾರೆ.
ವಿಜಯಪುರ: ಉತ್ತರ ಕರ್ನಾಟಕ ಕೃಷಿ, ಶಿಕ್ಷಣ, ಸಾರಿಗೆ,ರೈಲು, ಆಡಳಿತರಾಜಕೀಯ, ಆಧ್ಯಾತ್ಮಿಕ ಮಾಧ್ಯಮ, ಉದ್ಯಮ, ಚಲನಚಿತ್ರ ಹಲವಾರು ಕ್ಷೇತ್ರಗಳಲ್ಲಿ ಆಗಿರುವ ಅನ್ಯಾಯ, ತಾರತಮ್ಯ ಮತ್ತು ಮಲತಾಯಿ ಧೋರಣೆ ಪ್ರತಿಭಟಿಸಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಿ ಮಂಗಳವಾರ ಸಂಸದ ರಮೇಶ ಜಿಗಜಿಣಿಗಿ ಕಚೇರಿಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೊಲಶೆಟ್ಟಿ, ವಿಜಯಪುರ ಜಿಲ್ಲಾ ಅಧ್ಯಕ್ಷ ಕಾಮಣ್ಣ ಗಂಗನಹಳ್ಳಿ, ಮಾಧ್ಯಮ ಸಲಹೆಗಾರ ಬಸವರಾಜ ಕನಕವಾಡಿ, ದೇವಕಾಂತ ಬಿಜ್ಜರಗಿ, ನ್ಯಾಯವಾದಿ ದಾನೇಶ ಅವಟಿ, ಸೋಮು ಜಗದಾಳ, ಗುರುಪಾದ ಕಲಾದಗಿ, ಬಾಬು ಚನ್ನಪ್ಪ ಗೌಡ, ಮೊದಲಾದರಿದ್ದರು.
