ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಇಲ್ಲಿನ ಆರಾದ್ಯದೇವ ಶ್ರೀ ಮಲ್ಲಯ್ಯ ದೇವಸ್ಥಾನ ಕಟ್ಟಡ ಮರು ನಿರ್ಮಾಣ ಕಾರ್ಯದ ಪ್ರಾರಂಭೋತ್ಸವ ಏ.೯ ರಂದು ಜರುಗಲಿದೆ. ಈ ನಿಮಿತ್ಯ ಏ.೧ ರಿಂದ ೯ರ ವರೆಗೆ ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜರುಗಲಿರುವ ಪ್ರವಚನ ಕಾರ್ಯಕ್ರಮವನ್ನು ಯಶಶ್ವಿಗೊಳಿಸಲು ಗ್ರಾಮಸ್ಥರು ನಿರ್ಧರಿಸಿದರು.
ಗ್ರಾಮದ ಶ್ರೀ ಮಲ್ಲಯ್ಯ ಮಂದಿರದ ಆವರಣದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆಲ ಗಣ್ಯರು ಮಾತನಾಡಿ, ನಿರಂತರ ೯ ದಿನಗಳ ಪ್ರವಚನ ಕಾರ್ಯಕ್ರಮವನ್ನು ಚಡಚಣ ತಾಲೂಕಿನ ತದ್ದೇವಾಡಿಯ ಶ್ರೀ ಮಹಾಂತಯ್ಯ ಶಾಸ್ತಿçಗಳು ನಿತ್ಯ ಸಂಜೆ ೭.೩೦ ರಿಂದ ೮.೩೦ರ ವರೆಗೆ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ಬೇಸಿಗೆಯ ಈ ದಿನಗಳಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಇತ್ತ ರೈತರು ಸುಗ್ಗಿ ಕಾಲದ ಕೃಷಿ ಕೆಲಸಗಳನ್ನು ಮುಗಿಸಿಕೊಂಡು ಕೊಂಚ ಬಿಡುವಿನ ವೇಳೆಯಲ್ಲಿ ಇದ್ದಾರೆ. ಮತ್ತೊಂದೆಡೆ ಗ್ರಾಮದ ಶಿಕ್ಷಕರು ಈಗ ವಿಶ್ರಾಂತಿಯ ಗಳಿಗೆಯಲ್ಲಿದ್ದಾರೆ. ಸಮಯೋಚಿತ ಈ ಕಾರ್ಯಕ್ರಮದಿಂದ ಸರ್ವರಿಗೂ ಪ್ರಯೋಜನವಾಗಲಿದೆ. ಶಾಲಾ ಮಕ್ಕಳಿಗೂ ನಿತ್ಯ ಉತ್ತಮ ಸಂಸ್ಕಾರ ದೊರಲಿದೆ ಆದ್ದರಿಂದ ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸೋಣ ಎಂದು ಅಗತ್ಯವಾದ ನೆಲ ಹಾಸು, ಸೌಂಡ ಸಿಸ್ಟಂ, ವಿದ್ಯುತ್ ದೀಪ, ಕುಡಿಯುವ ನೀರು, ನಿತ್ಯ ಅನ್ನ ಪ್ರಸಾದ, ಹೂ ಮಾಲೆಯ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಗಂಗಾಧರ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಶೋಕಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ವಾಲಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲಕಣ್ಣಾ ಗುಬ್ಯಾಡ, ನಿವೃತ್ತ ಶಿಕ್ಷಕ ವಿ.ಎಂ. ಕರಾಳೆ, ಈರಣ್ಣ ಅಹಿರಸಂಗ, ಮಹಾದೇವ ಕಾಸಾರ, ಸಂಗನಬಸವ ಬಿರಾದಾರ, ಡಿ.ಎ. ಮುಜಗೊಂಡ, ರಾಜಶೇಖರ ನಿಂಬರಗಿ, ಮಹೇಶ ಸಂಭಾಜಿ, ರಾಜಶೇಖರ ಪಾಟೀಲ, ಕಲ್ಲನಗೌಡ ಬಿರಾದಾರ, ಬಸವರಾಜ ಹೊಸಮನಿ, ಅಪ್ಪಾಶ ಮೈದರಗಿ, ಉಮೇಶ ಬಿರಾದಾರ, ಚನ್ನಬಸು ಮುಜಗೊಂಡ, ಮಲ್ಲೇಶಿ ಕರಾಳೆ, ಸದಾಶಿವ ಬೊಳಗೊಂಡ, ಶಂಕರಗೌಡ ಬಿರಾದಾರ, ಈರಣ್ಣ ಮುಜಗೊಂಡ, ರಮೇಶ ಅಹಿರಸಂಗ, ನಿಲಿನ್ ಕಿರಣಗಿ, ಅಕ್ಷಯ ಮುಜಗೊಂಡ, ಬಸವರಾಜ ಲಾಳಸೇರಿ, ಕುಲಂಕಾರ ಬಿರಾದಾರ, ಸುರೇಶ ಬಿದರಕೋಟಿ, ಈರಣ್ಣ ಬಿರಾದಾರ ಹಾಗೂ ಸತೀಶ ಕರಾಳೆ ಸೇರಿದಂತೆ ಗ್ರಾಮದ ಹಲವು ಭಕ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

