Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಲೋಕಸಭಾ ಚುನಾವಣೆ ಕುರಿತು ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಸಾಹೇಬಗೌಡ ಬಿರಾದಾರ ವಹಿಸಿ ಮಾತನಾಡುತ್ತಾ, ಪ್ರಸ್ತುತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಜ್ಯ ಸರಕಾರ ಕೊಟ್ಟ ೫ ಗ್ಯಾರಂಟಿ ಯೋಜನೆಗಳ ಕುರಿತು ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯಗಳನ್ನು ಜಾರಿಗೆ ತರುವ ಬಗ್ಗೆ ಗ್ರಾಮೀಣ ಪ್ರದೇಶದ ಎಲ್ಲ ಮಹಿಳೆಯರಿಗೆ, ಯುವಕರಲ್ಲಿ, ರೈತರಲ್ಲಿ ಜಾಗೃತಿಯನ್ನು ಮೂಡಿಸಿ ಕೇಂದ್ರ ಬಿಜೆಪಿ ಸರಕಾರದ ವೈಪಲ್ಯಗಳನ್ನು ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರೊ.ಎಚ್.ಆರ್. (ರಾಜು) ಆಲಗೂರ ರವರ ಗೆಲುವಿಗೆ ಹಿಂದುಳಿದ ವರ್ಗಗಳ ವತಿಯಿಂದ ಶ್ರಮಿಸಬೇಕೆಂದು ಕರೆ ನೀಡಿದರು.ಸದರಿ ಸಭೆಯಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಉಪ್ಪಾರ, ಸತೀಶ ಅಡವಿ, ಕಾರ್ಯದರ್ಶಿ ಶ್ರೀಶೈಲ ವಾಲಿಕಾರ, ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಅಶೋಕ ಜೈನಾಪೂರ,…
ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರ ೧೧೭ನೇ ಜನ್ಮದಿನ ಆಚರಿಸಲಾಯಿತು.ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಬಾಷ ಕಾಲೇಬಾಗ ರವರು ಡಾ.ಬಾಬು ಜಗಜೀವನರಾಮ ಅವರು ಈ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ದಲಿತ ಕುಟುಂಬದಲ್ಲಿ ಜನಿಸಿ ಛಲದಿಂದ ಉನ್ನತ ವ್ಯಾಸಂಗ ಪೂರೈಸಿದರು. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಮತ್ತು ನೆಹರೂ ಅವರ ನಿಕಟವರ್ತಿಗಳಾಗಿ ದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ಯಂತ ಮೇಧಾವಿಯಾಗಿದ್ದ ಡಾ.ಬಾಬು ಜಗಜೀವನರಾಮ ರವರು ದೀನ, ದಲಿತರು ಹಾಗೂ ಕಾರ್ಮಿಕ ವರ್ಗದವರ ಒಳಿತಿಗಾಗಿ ಹೋರಾಡಿದರು. ಸ್ವಾತಂತ್ರ್ಯಾನಂತರದ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿ ದೇಶದ ಮೊಟ್ಟಮೊದಲ ಉಪಪ್ರಧಾನಿ ಹುದ್ದೆಗೇರಿದ ಖ್ಯಾತಿ ಡಾ.ಬಾಬು ಜಗಜೀವನರಾಮ ಅವರದು. ದೇಶವು ತೀವ್ರ ಬರಗಾಲಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ ಸಂದರ್ಭದಲ್ಲಿ ಆಹಾರ…
Udayarashmi kannada daily newspaper Udayarashmi kannada daily newspaper
ಕೊಲ್ಹಾರ: ಪ್ರತಿವರ್ಷದಂತೆ ಈ ವರ್ಷವೂ ಕೊಲ್ಹಾರದ ವೀರಭದ್ರೇಶ್ವರ ಪಾದಯಾತ್ರಾ ಕಮೀಟಿ ವತಿಯಿಂದ ೩೦ನೇ ವರ್ಷದ ಸತತ ಪಾದಯಾತ್ರೆಯು ಗುರುವಾರ ಗಣಪತಿ ಗೋಕಾಂವಿ ಇವರ ಮನೆಯಲ್ಲಿ ನಡೆದ ವೀರಭದ್ರೇಶ್ವರ ಭಾವಚಿತ್ರದ ಪೂಜಾ ಕಾರ್ಯಕ್ರಮದೊಂದಿಗೆ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂದಿನ ಊರುಗಳಿಗೆ ತೆರಳಿದರು.ಹಿರೇಮಠದ ಮುರುಘೇಂದ್ರ ಮಹಾಸ್ವಾಮಿಗಳ ಅಮೃತವಾಣಿಯ ವೇದಮಂತ್ರ ಪಠಣದೊಂದಿಗೆ ಪೂಜೆಯನ್ನು ನೆರವೇರಿಸಿದರು. ಮುತೈದೆಯರು ಆರತಿ ಬೆಳಗಿದ ನಂತರ ಒಡಪಿನ ಮೂಲಕ ದೇವರ ನಾಮಸ್ಮರಣೆಯ ಕಾರ್ಯಕ್ರಮ ಜರುಗಿತು. ಪಾದಯಾತ್ರೆಯು ಹೊಳೆಹಂಗರಗಿ, ಬೆಳ್ಳುಬ್ಬಿ, ದೇವರ ಗೆಣ್ಣೂರ, ಬಬಲಾದಿ, ಮುಂಡಗನೂರ, ಜಮಖಂಡಿ, ಆಸಂಗಿ, ತೇರದಾಳ, ಸಸಾಲಟ್ಟಿ, ಹಾರುಗೇರಿ, ಅಲಕನೂರ, ಚಿಂಚಲಿ, ಇಂಗಳಗಿ, ಮಾಂಜರಿ ಗ್ರಾಮಗಳ ಮೂಲಕ ಉತ್ತರ ಕರ್ನಾಟಕದ ಪ್ರಸಿದ್ದ ಯಾತ್ರಾ ಸ್ಥಳ ಶ್ರೀಶೈಲ ಜಗದ್ಗುರುಗಳ ಹಿರೇಮಠವಾದ ಯಡೂರು ಪುಣ್ಯಕ್ಷೇತ್ರಕ್ಕೆ ದಿನಾಂಕ ೦೮ ರಂದು ಸೋಮವಾರ ದಿವಸ ತಲುಪುವರು.ಈ ಸಂದರ್ಬದಲ್ಲಿ ಪಟ್ಟಣದಲ್ಲಿ ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ರೇವಣಸಿದ್ದಪ್ಪ ಮೇಲಗಿರಿ ಕುಟುಂಬದವರಿಗೆ ಪಾದಯಾತ್ರಾ ಸಮೀತಿ ವತಿಯಿಂದ ೧೦,೦೦೦/- ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸಲಾಯಿತು.…
ಬಸವನಬಾಗೇವಾಡಿ: ಬಿಜೆಪಿ ಪಕ್ಷವು ಲಂಬಾಣಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸಿ ಲಂಬಾಣಿ ಜನಾಂಗದವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಸ್ಥಾನ ನೀಡಿದೆ. ಬಂಜಾರಾ ಸಮುದಾಯದ ಅಭಿವೃದ್ದಿಗಾಗಿ ಬಿಜೆಪಿ ಪಕ್ಷವು ನಿಗಮ ಸ್ಥಾಪಿಸಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅವುಗಳ ಅಭಿವೃದ್ಧಿಗೆ ಪಣತೊಟ್ಟಿದೆ. ಹಿಂದುಳಿದ, ಬಡ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿಜೀ ಅವರ ಸೇವೆ ಅಮೂಲ್ಯವಾಗಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಲಂಬಾಣಿ ಜನಾಂಗವು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ನರೇಂದ್ರ ಮೋದಿಜೀ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕು. ತಮ್ಮ ಸಮಾಜದ ಅಭಿವೃದ್ದಿಗಾಗಿ ಶ್ರಮಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ತಾಲೂಕು ಬಿಜೆಪಿ ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ ಕಲಗೊಂಡ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕು ಸ್ವೀಪ ಸಮಿತಿ ಹಾಗೂ ಪುರಸಭೆ ಸಹಯೋಗದಲ್ಲಿ ಗುರುವಾರ ಮತದಾನ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಿದ ನಂತರ ಬಸ್ ನಿಲ್ದಾಣದವರೆಗೂ ಜಾಗೃತಿ ಜಾಥಾ ನಡೆಸಿದ ನಂತರ ಪುನಃ ಬಸವೇಶ್ವರ ವೃತ್ತಕ್ಕೆ ಜಾಥಾ ಆಗಮಿಸಿತು. ಜಾಥಾದಲ್ಲಿ ಮತದಾನ ಜಾಗೃತಿ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಹಬ್ಬವಾಗಿ ಚುನಾವಣೆಯಲ್ಲಿ ನಿಮ್ಮ ನಾಯಕನನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಬೇಕು. ಪ್ರಜ್ಞಾವಂತರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಬೇಕು. ಈ ಸಲ ಹೆಚ್ಚು ಪ್ರತಿಶತ ಮತದಾನವಾಗಲು ಪ್ರತಿಯೊಬ್ಬರೂ ಮತದಾನ ತಪ್ಪದೇ ಮಾಡಬೇಕೆಂದರು.ತಾಲೂಕು ಪಂಚಾಯಿತಿ ಪ್ರಭಾರಿ ಇಓ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಪ್ರಕಾಶ ದೇಸಾಯಿ ಮಾತನಾಡಿದರು.ಮತದಾನ…
ದೇವರಹಿಪ್ಪರಗಿ: ಲಚ್ಯಾಣ ಗ್ರಾಮದ ಕೊಳವೆಭಾವಿಯಲ್ಲಿ ಬುಧವಾರ ಬಿದ್ದು ಪವಾಡ ಸದೃಶವಾಗಿ ಬದುಕಿ ಬಂದ ಬಾಲಕ ಸಾತ್ವಿಕನಿಗಾಗಿ ಮುಳಸಾವಳಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಿಡಿಗಾಯಿ ಒಡೆದು ಭಕ್ತಿ ಸಮರ್ಪಿಸಲಾಯಿತು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಕಂಬಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೇರಿದ ಗ್ರಾಮಸ್ಥರು ಮಗುವಿನ ಬದುಕಿಗಾಗಿ ಶ್ರಮಿಸಿದ ರಕ್ಷಣಾ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಸರ್ವರಿಗೂ ಕೃತಜ್ಞತೆ ಅರ್ಪಿಸಿ, ಸಿಡಿಗಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮದ ಶರಣಗೌಡ ಬಿರಾದಾರ ಮಾತನಾಡಿ, ಕೊಳವೆಭಾವಿಯಲ್ಲಿ ಬಿದ್ದ ಯಾವ ಮಗು ಬದುಕಿದ ನಿದರ್ಶನಗಳಿಲ್ಲ. ಆದರೆ ಲಚ್ಯಾಣ ಸಿದ್ದಲಿಂಗ ಮಹಾರಾಜರ ಕೃಪೆಯಿಂದ ಈ ಮಗು ಯಾವುದೇ ತೊಂದರೆಯಿಲ್ಲದೇ ಬದುಕಿ ಪುನರ್ಜನ್ಮ ಪಡೆದಿರುವುದು ಅತ್ಯಂತ ಸಂತೋಷದ ವಿಷಯ ಎಂದರು.ಅರ್ಜುನ ವಾಲೀಕಾರ ಮಾತನಾಡಿ, ಬೊರೆವೆಲ್ ಪ್ರಕರಣಗಳು ನಮಗೆ ಪಾಠವಾಗಬೇಕು. ಕೂಡಲೇ ಗ್ರಾಮದ ವ್ಯಾಪ್ತಿಯಲ್ಲಿ ನೀರು ಬರದೇ ಇದ್ದ ಹಾಳಾದ ಬೊರೆವೆಲ್‌ಗಳನ್ನು ಮುಚ್ಚೋಣ ಎಂದರು.ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಪಿಕೆಪಿಎಸ್ ನಿರ್ದೇಶಕ ಕಲ್ಲಪ್ಪ ಮೂಲಿಮನಿ, ಸುಭಾಸ್ ಹೊಸಮನಿ, ಸಿದ್ದು ಹದರಿ, ವಿರುಪಾಕ್ಷಿ ರೋಡಗಿ, ಸುರೇಶ ಉಕುಮನಾಳ, ಷಣ್ಮುಖ…
ದೇವರಹಿಪ್ಪರಗಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತಕ್ಷೇತ್ರದ ಅಲ್ಪಸಂಖ್ಯಾತರ ಮತಗಳಿಂದಲೇ ಆಯ್ಕೆಯಾಗಿ ಈಗ ಬಿಜೆಪಿ ಪರ ಪ್ರಚಾರಕ್ಕೆ ಇಳಿದಿರುವ ಶಾಸಕ ರಾಜುಗೌಡ ಪಾಟೀಲ ಕೂಡಲೇ ಅಲ್ಪಸಂಖ್ಯಾತ ಸಮುದಾಯದ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡ್ಡಮನಿ ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವಿರುದ್ಧ ಅಲ್ಪಸಂಖ್ಯಾತರ ಮತಪಡೆದು ಈಗ ನಿನ್ನೇಯಷ್ಟೇ ವಿಜಯಪುರದಲ್ಲಿ ಜರುಗಿದ ಬಿಜೆಪಿ-ಜೆಡಿಎಸ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ನಾನು ಮೂಲತ ಬಿಜೆಪಿ ಪಕ್ಷದವನೇ ಎಂದು ಹೇಳಿಕೆ ನೀಡುವುದರ ಜೊತೆಗೆ ಬಿಜೆಪಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ, ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಅವರು ಮಾಡಿದ ಮೋಸವಲ್ಲವೇ? ಶಾಸಕರಾಗಿ ಆಯ್ಕೆ ಆಗುವಾಗ ಅಲ್ಪಸಂಖ್ಯಾತರು ಹಾಗೂ ಅವರ ಮತಗಳು ಬೇಕಾದವು. ಈಗ ತಮ್ಮ ಪಕ್ಷದವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ತರುವಾಯ ಬಿಜೆಪಿ ಪರ ವಾಲಿದ್ದಾರೆ. ಅವರಿಗೆ ಅಲ್ಪಸಂಖ್ಯಾತರ ಕುರಿತು ನಿಜವಾಗಿಯೂ ಕಾಳಜಿ ಇದ್ದಲ್ಲಿ ತಮ್ಮ ಪಕ್ಷದ…
ಸಿಂದಗಿ: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೇ ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ. ಇದರಿಂದ ದೇಶದ ಅಭಿವೃದ್ದಿ ಸಾಧ್ಯ ಎಂದು ತಾಪಂ ನರೇಗಾ ಸಂಯೋಜಕ ಭೀಮರಾಯ ಚೌಧರಿ ಹೇಳಿದರು.ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಗಿ ಗ್ರಾಮದ ಸರಕಾರಿ ಹಳ್ಳದಲ್ಲಿ ಹೊಳೆತ್ತುವ ಕಾಂಗಾರಿ ಸ್ಥಳದಲ್ಲಿ ತಾಪಂ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.ಇದೇ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿ ಲಕ್ಷ್ಮಿ ಮಾದರ, ನರೇಗಾ ಕಾಯಕಕ್ಕೆ ಆಗಮಿಸಿದ ಶಾಂಭವಿ ಕೊಟರಗಸ್ತಿ ಸೇರಿದಂತೆ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
ಸಿಂದಗಿ: ಪ್ರಸ್ತುತ ವರ್ಷವೂ ಬರಗಾಲ ಪೀಡಿತವಾಗಿದ್ದು, ಮಾನವ ಸಂಕುಲಕ್ಕೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮಾನವನು ಯಾವುದೇ ವಿಧಾನ ಅಥವಾ ಪರ್ಯಾಯ ಕಾರ್ಯದ ಮೂಲಕ ನೀರನ್ನು ಪಡೆದುಕೊಳ್ಳಬಹುದು ಎಂದು ಉಪನ್ಯಾಸಕ ಡಿ.ಎಸ್.ಮಠಪತಿ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಾವಿದ್ಯಾಲಯದ ಆವರಣದಲ್ಲಿರುವ ಉದ್ಯಾನವನದಲ್ಲಿ ಅರವಟಿಗೆಗಳನ್ನು ಅಳವಡಿಸಿ ಮಾತನಾಡಿದ ಅವರು, ವಿಪರ್ಯಾಸ ಎನ್ನುವಂತೆ ಪಕ್ಷಿ ಸಂಕುಲದ ಅಳಿವು-ಉಳಿವಿನ ಸಮಸ್ಯೆಯನ್ನು ಕಾಣುವ ಈ ವೇಳೆಯಲ್ಲಿ ನಾವು ಬದುಕುವದರೊಂದಿಗೆ ನಮ್ಮ ಮಧ್ಯದಲ್ಲಿ ಹಾರಾಡುವ ಪಕ್ಷಿಗಳಿಗೆ ನಮ್ಮಿಂದ ಸಾಧ್ಯವಾದಷ್ಟು ರಕ್ಷಣೆ ಮಾಡುವದರ ಜೊತೆಗೆ ಅವುಗಳಿಗೆ ದಾಹ ತಿರಿಸುವ ಕೆಲಸದಲ್ಲಿ ಸ್ವಲ್ಪ ಮಟ್ಟಿಗಾದರೂ ನಮ್ಮ ಸುತ್ತಲೂ ಇರುವ ಪ್ರದೇಶದಲ್ಲಿ ಒಂದು ಪಾತ್ರೆಯನ್ನೊ, ಇನ್ನಾವುದೋ ವಸ್ತುವಿನಲ್ಲಿ ನೀರನ್ನು ಸಂಗ್ರಹಿಸಿ ಅವುಗಳ ರಕ್ಷಣೆಯನ್ನು ಮಾಡೋಣ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಜಗದೇವಿ ನಂದಿಕೋಲ, ಉಪನ್ಯಾಸಕರಾದ ಡಿ.ಎಸ್.ಮಠಪತಿ ಹಾಗೂ ಎನ್.ಬಿ.ಪೂಜಾರಿ, ಸುಧಾಕರ ಚವ್ಹಾಣ, ಚನ್ನಬಸವರಾಜ ಕತ್ತಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.
