ಕೊಲ್ಹಾರ: ಪ್ರತಿವರ್ಷದಂತೆ ಈ ವರ್ಷವೂ ಕೊಲ್ಹಾರದ ವೀರಭದ್ರೇಶ್ವರ ಪಾದಯಾತ್ರಾ ಕಮೀಟಿ ವತಿಯಿಂದ ೩೦ನೇ ವರ್ಷದ ಸತತ ಪಾದಯಾತ್ರೆಯು ಗುರುವಾರ ಗಣಪತಿ ಗೋಕಾಂವಿ ಇವರ ಮನೆಯಲ್ಲಿ ನಡೆದ ವೀರಭದ್ರೇಶ್ವರ ಭಾವಚಿತ್ರದ ಪೂಜಾ ಕಾರ್ಯಕ್ರಮದೊಂದಿಗೆ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂದಿನ ಊರುಗಳಿಗೆ ತೆರಳಿದರು.
ಹಿರೇಮಠದ ಮುರುಘೇಂದ್ರ ಮಹಾಸ್ವಾಮಿಗಳ ಅಮೃತವಾಣಿಯ ವೇದಮಂತ್ರ ಪಠಣದೊಂದಿಗೆ ಪೂಜೆಯನ್ನು ನೆರವೇರಿಸಿದರು. ಮುತೈದೆಯರು ಆರತಿ ಬೆಳಗಿದ ನಂತರ ಒಡಪಿನ ಮೂಲಕ ದೇವರ ನಾಮಸ್ಮರಣೆಯ ಕಾರ್ಯಕ್ರಮ ಜರುಗಿತು. ಪಾದಯಾತ್ರೆಯು ಹೊಳೆಹಂಗರಗಿ, ಬೆಳ್ಳುಬ್ಬಿ, ದೇವರ ಗೆಣ್ಣೂರ, ಬಬಲಾದಿ, ಮುಂಡಗನೂರ, ಜಮಖಂಡಿ, ಆಸಂಗಿ, ತೇರದಾಳ, ಸಸಾಲಟ್ಟಿ, ಹಾರುಗೇರಿ, ಅಲಕನೂರ, ಚಿಂಚಲಿ, ಇಂಗಳಗಿ, ಮಾಂಜರಿ ಗ್ರಾಮಗಳ ಮೂಲಕ ಉತ್ತರ ಕರ್ನಾಟಕದ ಪ್ರಸಿದ್ದ ಯಾತ್ರಾ ಸ್ಥಳ ಶ್ರೀಶೈಲ ಜಗದ್ಗುರುಗಳ ಹಿರೇಮಠವಾದ ಯಡೂರು ಪುಣ್ಯಕ್ಷೇತ್ರಕ್ಕೆ ದಿನಾಂಕ ೦೮ ರಂದು ಸೋಮವಾರ ದಿವಸ ತಲುಪುವರು.
ಈ ಸಂದರ್ಬದಲ್ಲಿ ಪಟ್ಟಣದಲ್ಲಿ ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ರೇವಣಸಿದ್ದಪ್ಪ ಮೇಲಗಿರಿ ಕುಟುಂಬದವರಿಗೆ ಪಾದಯಾತ್ರಾ ಸಮೀತಿ ವತಿಯಿಂದ ೧೦,೦೦೦/- ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸಲಾಯಿತು. ಚಂದ್ರಶೇಖರಯ್ಯ ಗಣಕುಮಾರ, ವಿ.ಎಂ.ಶ್ಯಾವಿಗೊಂಡ, ಈರಣ್ಣ ಔರಸಂಗ, ಸಂತೋಷ ಗೋಕಾವಿ, ರಾಚಯ್ಯ ಗಣಕುಮಾರ, ಸಂಗಪ್ಪ ಮೇಲಗಿರಿ, ಶ್ರೀಶೈಲ ಮೇಲಗಿರಿ, ಪುಟ್ಟು ಗಣಿ ಇವರುಗಳ ನೇತ್ರತ್ವದಲ್ಲಿ ಪಾದಯಾತ್ರಾ ತಂಡದ ನೂರಾರು ಜನರು ಯುವಕರು, ಮಹಿಳೆಯರು, ಹಿರಿಯರು, ಪಾದಯಾತ್ರೆ ಕೈಗೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

