ದೇವರಹಿಪ್ಪರಗಿ: ಲಚ್ಯಾಣ ಗ್ರಾಮದ ಕೊಳವೆಭಾವಿಯಲ್ಲಿ ಬುಧವಾರ ಬಿದ್ದು ಪವಾಡ ಸದೃಶವಾಗಿ ಬದುಕಿ ಬಂದ ಬಾಲಕ ಸಾತ್ವಿಕನಿಗಾಗಿ ಮುಳಸಾವಳಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಿಡಿಗಾಯಿ ಒಡೆದು ಭಕ್ತಿ ಸಮರ್ಪಿಸಲಾಯಿತು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಕಂಬಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೇರಿದ ಗ್ರಾಮಸ್ಥರು ಮಗುವಿನ ಬದುಕಿಗಾಗಿ ಶ್ರಮಿಸಿದ ರಕ್ಷಣಾ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಸರ್ವರಿಗೂ ಕೃತಜ್ಞತೆ ಅರ್ಪಿಸಿ, ಸಿಡಿಗಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮದ ಶರಣಗೌಡ ಬಿರಾದಾರ ಮಾತನಾಡಿ, ಕೊಳವೆಭಾವಿಯಲ್ಲಿ ಬಿದ್ದ ಯಾವ ಮಗು ಬದುಕಿದ ನಿದರ್ಶನಗಳಿಲ್ಲ. ಆದರೆ ಲಚ್ಯಾಣ ಸಿದ್ದಲಿಂಗ ಮಹಾರಾಜರ ಕೃಪೆಯಿಂದ ಈ ಮಗು ಯಾವುದೇ ತೊಂದರೆಯಿಲ್ಲದೇ ಬದುಕಿ ಪುನರ್ಜನ್ಮ ಪಡೆದಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಅರ್ಜುನ ವಾಲೀಕಾರ ಮಾತನಾಡಿ, ಬೊರೆವೆಲ್ ಪ್ರಕರಣಗಳು ನಮಗೆ ಪಾಠವಾಗಬೇಕು. ಕೂಡಲೇ ಗ್ರಾಮದ ವ್ಯಾಪ್ತಿಯಲ್ಲಿ ನೀರು ಬರದೇ ಇದ್ದ ಹಾಳಾದ ಬೊರೆವೆಲ್‌ಗಳನ್ನು ಮುಚ್ಚೋಣ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಪಿಕೆಪಿಎಸ್ ನಿರ್ದೇಶಕ ಕಲ್ಲಪ್ಪ ಮೂಲಿಮನಿ, ಸುಭಾಸ್ ಹೊಸಮನಿ, ಸಿದ್ದು ಹದರಿ, ವಿರುಪಾಕ್ಷಿ ರೋಡಗಿ, ಸುರೇಶ ಉಕುಮನಾಳ, ಷಣ್ಮುಖ ತೇಲಿ, ಕಿರಣ ಗೊಬ್ಬೂರ, ಅಮರೇಶ ಮುಳಸಾವಳಗಿ, ರುದ್ರಗೌಡ ಪೋಲೇಶಿ, ರಮೇಶ ಹದರಿ, ಬಸು ಕೋಟಿನ್, ಸದಾಶಿವ ನಾಯ್ಕೋಡಿ, ಸಾಹೇಬಗೌಡ ಹೊನ್ನುಟಗಿ, ಮಹಾಂತೇಶ ಬಿರಾದಾರ, ಶಿವಶರಣ ಸರಬಡಗಿ, ಹಣಮಂತ್ರಾಯ ಪೋಲೇಶಿ, ಶರಣಗೌಡ ಬಿರಾದಾರ, ಶಿವರಾಯ ಕನ್ನೂರ, ಸಂದೀಪ ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

