ಸಿಂದಗಿ: ಪ್ರಸ್ತುತ ವರ್ಷವೂ ಬರಗಾಲ ಪೀಡಿತವಾಗಿದ್ದು, ಮಾನವ ಸಂಕುಲಕ್ಕೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮಾನವನು ಯಾವುದೇ ವಿಧಾನ ಅಥವಾ ಪರ್ಯಾಯ ಕಾರ್ಯದ ಮೂಲಕ ನೀರನ್ನು ಪಡೆದುಕೊಳ್ಳಬಹುದು ಎಂದು ಉಪನ್ಯಾಸಕ ಡಿ.ಎಸ್.ಮಠಪತಿ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಾವಿದ್ಯಾಲಯದ ಆವರಣದಲ್ಲಿರುವ ಉದ್ಯಾನವನದಲ್ಲಿ ಅರವಟಿಗೆಗಳನ್ನು ಅಳವಡಿಸಿ ಮಾತನಾಡಿದ ಅವರು, ವಿಪರ್ಯಾಸ ಎನ್ನುವಂತೆ ಪಕ್ಷಿ ಸಂಕುಲದ ಅಳಿವು-ಉಳಿವಿನ ಸಮಸ್ಯೆಯನ್ನು ಕಾಣುವ ಈ ವೇಳೆಯಲ್ಲಿ ನಾವು ಬದುಕುವದರೊಂದಿಗೆ ನಮ್ಮ ಮಧ್ಯದಲ್ಲಿ ಹಾರಾಡುವ ಪಕ್ಷಿಗಳಿಗೆ ನಮ್ಮಿಂದ ಸಾಧ್ಯವಾದಷ್ಟು ರಕ್ಷಣೆ ಮಾಡುವದರ ಜೊತೆಗೆ ಅವುಗಳಿಗೆ ದಾಹ ತಿರಿಸುವ ಕೆಲಸದಲ್ಲಿ ಸ್ವಲ್ಪ ಮಟ್ಟಿಗಾದರೂ ನಮ್ಮ ಸುತ್ತಲೂ ಇರುವ ಪ್ರದೇಶದಲ್ಲಿ ಒಂದು ಪಾತ್ರೆಯನ್ನೊ, ಇನ್ನಾವುದೋ ವಸ್ತುವಿನಲ್ಲಿ ನೀರನ್ನು ಸಂಗ್ರಹಿಸಿ ಅವುಗಳ ರಕ್ಷಣೆಯನ್ನು ಮಾಡೋಣ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಜಗದೇವಿ ನಂದಿಕೋಲ, ಉಪನ್ಯಾಸಕರಾದ ಡಿ.ಎಸ್.ಮಠಪತಿ ಹಾಗೂ ಎನ್.ಬಿ.ಪೂಜಾರಿ, ಸುಧಾಕರ ಚವ್ಹಾಣ, ಚನ್ನಬಸವರಾಜ ಕತ್ತಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

