ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರ ೧೧೭ನೇ ಜನ್ಮದಿನ ಆಚರಿಸಲಾಯಿತು.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಬಾಷ ಕಾಲೇಬಾಗ ರವರು ಡಾ.ಬಾಬು ಜಗಜೀವನರಾಮ ಅವರು ಈ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ದಲಿತ ಕುಟುಂಬದಲ್ಲಿ ಜನಿಸಿ ಛಲದಿಂದ ಉನ್ನತ ವ್ಯಾಸಂಗ ಪೂರೈಸಿದರು. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಮತ್ತು ನೆಹರೂ ಅವರ ನಿಕಟವರ್ತಿಗಳಾಗಿ ದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ಯಂತ ಮೇಧಾವಿಯಾಗಿದ್ದ ಡಾ.ಬಾಬು ಜಗಜೀವನರಾಮ ರವರು ದೀನ, ದಲಿತರು ಹಾಗೂ ಕಾರ್ಮಿಕ ವರ್ಗದವರ ಒಳಿತಿಗಾಗಿ ಹೋರಾಡಿದರು. ಸ್ವಾತಂತ್ರ್ಯಾನಂತರದ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿ ದೇಶದ ಮೊಟ್ಟಮೊದಲ ಉಪಪ್ರಧಾನಿ ಹುದ್ದೆಗೇರಿದ ಖ್ಯಾತಿ ಡಾ.ಬಾಬು ಜಗಜೀವನರಾಮ ಅವರದು. ದೇಶವು ತೀವ್ರ ಬರಗಾಲಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ ಸಂದರ್ಭದಲ್ಲಿ ಆಹಾರ ಖಾತೆ ಸಚಿವರಾಗಿ ಈ ದೇಶದಲ್ಲಿ ಹಸಿರುಕ್ರಾಂತಿಯನ್ನು ಮಾಡಿ ದೇಶವು ಆಹಾರದಲ್ಲಿ ಸ್ವಾವಲಂಬಿಯಾಗುವಂತೆ ಮಾಡಿದರು. ಇವರ ಜೀವನ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿದಾಯಕವಾಗಿದೆ. ದೀನ ದಲಿತರು ಬಾಬೂಜಿಯವರ ಸಾಧನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಡಾ.ಸಿ.ಇ. ರಂಗಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಓಬಿಸಿ ಜಿಲ್ಲಾ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಎಂ.ಎಂ. ಮುಲ್ಲಾ, ಫಿರೋಜ ಶೇಖ, ಸೋಮಣ್ಣ ತಳವಾರ, ಕೃಷ್ಣಾ ಲಮಾಣಿ, ಸಂತೋಷ ಬಾಲಗಾಂವಿ, ಮಹಾದೇವ ಜಾಧವ, ಎ.ಆರ್. ಕಂಬಾಗಿ, ಜಯಪ್ರಭು ಕೊಳಮಲಿ, ಭೀಮರಾಯ ಸೀತಿಮನಿ, ಮಹಾಲಿಂಗ ಕೆಂಗಲಗುತ್ತಿ, ರಮೇಶ ಪೂಜಾರಿ, ಶಾಂತವ್ವ ಹೊಸಮನಿ, ಅಬ್ದುಲ್‌ಪೀರಾ ಜಮಖಂಡಿ, ಬಸಪ್ಪ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

