Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್.ಸಿ ಘಟಕದ ವತಿಯಿಂದ ಸನ್ಮಾನ ವಿಜಯಪುರ: ಜಿಲ್ಲಾ ಕಾಂಗ್ರೆಸ್‌ನ ನಿಕಟಪೂರ್ವ ಅಧ್ಯಕ್ಷರು ಹಾಗೂ ಲೋಕಸಭಾ ಅಭ್ಯರ್ಥಿಯಾದ ರಾಜು ಆಲಗೂರ ಅವರು ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್.ಸಿ ಘಟಕದ ವತಿಯಿಂದ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೆವಾಡ, ಸಂಘಟನಾ ಕಾರ್ಯದರ್ಶಿ ಮಹಾದೇವ ಚಲವಾದಿ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಚಲವಾದಿ ಹಾಗೂ ರಜಾಕ ಬಬಲೇಶ್ವರ ಅವರು ಸೇರಿ ಸಂವಿದಾನ ಪೀಠಿಕೆ ನೀಡುವುದರ ಮೂಲಕ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರು ಹಾಗೂ ಲೋಕಸಭಾ ಅಭ್ಯರ್ಥಿಯಾದ ರಾಜು ಆಲಗೂರ ಅವರು ಅಧಿಕಾರ ಹಸ್ತಾಂತರ ಮಾಡುವ ವೇಳೆ ‘ಬೇವು-ಬೆಲ್ಲ’ ನೀಡುವುದರೊಂದಿಗೆ ನನಗೆ ಯಾವ ರೀತಿಯಾಗಿ ಜಿಲ್ಲೆಯ ಎಲ್ಲಾ ಕಾಂಗ್ರೆಸಿನ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಿದ್ದೀರಿ, ಅದೇ ರೀತಿ ಲೋಣಿ ಅವರಿಗೂ ಬೆಂಬಲ ನೀಡುವದರೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಮನೆ ಮನೆಗೆ…
ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ |ಜೀವನಜಾಗೃತಿ ಸಂಗೋಷ್ಠಿ ಕಲಕೇರಿ: ಮನಷ್ಯನ ಜೀವನ ಭಗವಂತನ ಬಳುವಳಿಯಾಗಿದ್ದು, ಬದುಕಿನುದ್ದಕ್ಕೂ ಸತ್ಯ ನ್ಯಾಯ ನೀತಿಯ ಪರಿಪಾಲನೆಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಜೀವನ ಜಾಗೃತಿಗೊಳಿಸಿಕೊಳ್ಳುವುದರೊಂದಿಗೆ ಸದಾ ಭಗವಂತನ ಚಿಂತನದಲ್ಲಿ ತೊಡಗಿಕೊಳ್ಳಬೇಕು, ನಮ್ಮ ಜೀವನವನ್ನು ಸುಂದರ ಮತ್ತು ಸಾರ್ಥಕಗೊಳಿಸಿಕೊಳ್ಳುವುದೇ ಜೀವನದ ಪರಮ ಗುರಿಯಾಗಿರಬೇಕು ಎಂದು ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹೇಳಿದರು.ಗ್ರಾಮದ ಶ್ರೀ ಜಗದಾರಾಧ್ಯ ಜಯಶಾಂತಲಿಗೇಶ್ವರ ಮಹಾಸಂಸ್ಥಾನಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಜೀವನಜಾಗೃತಿ ಸಂಗೋಷ್ಠಿ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಅವರು ಮಾತನಾಡಿದರು.ಹುಟ್ಟಿದಾಗ ಉಸಿರು ಇರುತ್ತದೆ ಆದರೆ ಹೆಸರು ಇರುವುದಿಲ್ಲ, ನಾವು ಸತ್ತಾಗ ಹೆಸರು ಇರುತ್ತದೆ ಆದರೆ ಉಸಿರು ಇರುವುದಿಲ್ಲ. ಈ ಉಸಿರು ಮತ್ತು ಹೆಸರಿನ ಮಧ್ಯದ ನಮ್ಮ ಅಲ್ಪ ಜೀವನದಲ್ಲಿ ನಮ್ಮ ಸುಂದರ ಕಾರ್ಯಗಳ ಮೂಲಕ ಶ್ರೇಷ್ಠ ಬದುಕು ನಮ್ಮದಾಗಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ಓಂಕಾರ ಧ್ವಜಾರೋಹಣ ನೆರವೇರಿಸಿದ ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮತ್ತು ಜೀವನಜಾಗೃತಿ ಸಂಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡೆಕಲ್ಲ ದುರುದುಂಡೇಶ್ವರ…
ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮಲ್ಲಿಕಾರ್ಜುನ ಲೋಣಿ ಭವಿಷ್ಯ ವಿಜಯಪುರ: ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಗೆಲ್ಲಲಿದ್ದಾರೆ ಎಂದು ಮಲ್ಲಿಕಾರ‍್ಜುನ ಲೋಣಿ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು.ಮುಖಂಡರು, ಕಾರ‍್ಯಕರ‍್ತರು ಈ ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ತಮ್ಮ ಮೇಲೆ ವಿಶ್ವಾಸವಿಟ್ಟು, ಪಕ್ಷ ಈ ಮಹತ್ತರ ಜವಾಬ್ದಾರಿ ನೀಡಿದೆ. ಇದಕ್ಕೆ ಬದ್ಧವಾಗಿ ಶ್ರಮವಹಿಸಿ ಸಂಘಟನೆಯಲ್ಲಿ ತೊಡಗುವೆ. ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನಡೆಸಿ, ಜನಾನುರಾಗಿಯಾಗಿದೆ. ಇದನ್ನು ಜನರಿಗೆ ನಮ್ಮ ಕಾರ‍್ಯಕರ‍್ತರು ತಿಳಿಸಬೇಕು ಎಂದರು.ನಮ್ಮ ಪಕ್ಷದ ಲೋಕಸಭೆ ಅಭ್ಯರ್ಥಿ ಆಲಗೂರರು ಪ್ರಬುದ್ಧರಾಗಿದ್ದಾರೆ. ಇಷ್ಟು ದಿನ ಅವಿರತ ಶ್ರಮದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಅವರಂತೆ ತಾವು ಕೂಡ ಪಕ್ಷದ ಏಳ್ಗೆಗೆ ಶ್ರಮಿಸುವೆ ಎಂದು ಹೇಳಿದ ಲೋಣಿ, ಆಲಗೂರರ ಗೆಲುವು ನೂರಕ್ಕೆ ನೂರು ನಿಶ್ಚಿತವಾಗಿದೆ. ನಾವೆಲ್ಲ ಕಷ್ಟಪಟ್ಟರೆ…
“ವ್ಯಂಗೋತ್ಸವ”- ಶ್ರೀನಿವಾಸ ಜಾಲವಾದಿ, ಸುರಪುರ ‘ಏನಲೇ ಬುಕಡ್ಯಾ ಎಲ್ಲಿ ಹೋಗಿದ್ದೆಲೆ? ಕಂಡೇ ಇಲ್ಲ?’ ಗುಡುಮ್ಯಾ ಕೇಳ್ದ’ಏ ನಾ ಸೀಟ ಹಿಡ್ಯಾಕ ಹೋಗಿದ್ನs…. ಹಿಂಗಾಗಿ ಕಂಡಿಲ್ಲ’ ಎಂದ ಬುಕುಡ್ಯಾ’ಯಾವ ಸೀಟಪಾ? ಬಸ್ನಾಗ ಸೀಟ ಹಿಡ್ಯಾಕ ಹೋಗಿದ್ಯಾ?’ ವ್ಯಂಗವಾಗಿ ಕೇಳಿದ ಶೌರಿ’ಇಲ್ಲಾ ಇಮಾನದಾಗ ಹಿಡ್ಯಾಕ ಹೋಗಿದ್ನ್ಯಾ, ಮಗನ ಏನ ಮಾತಾಡ್ತಿರಲೇ? ಮನಸಿಗಿ ಬಂದದ್ದ ಆಡೂದೇನು ಹಂಗs?’ ಎಂದು ಸಿಡುಕಿದ ಬುಕಡ್ಯಾ’ ಏ ತಮ್ಮಾ, ಯಾಕ ಸಿಟ್ಟಿಗೇರ್ತಿ? ಎಲ್ಲಿ ಹೋಗಿದ್ದಿ ಹೇಳು ಸರಿಯಾಗಿ’ ಅಂತ ಕಾಕಾ ಕೇಳಿದ’ಅದೇ ಕಾಕಾ, ಈಗ ಇಲೆಕ್ಷನ್ ಡಿಕ್ಲೇರ ಆಗ್ಯಾವಲಾ, ಅದ್ಕ ಸೀಟ ಹಿಡ್ಯಾಕ ಹೋಗಿದ್ನ್ಯಾ, ಅದೇ ಕೋಲಾರದ್ದು’ ಅಂದ ಬುಕಡ್ಯಾ’ಕೋಲಾರದಾಗ ಜಂಗಿ ನಿಕಾಲಿ ಕುಸ್ತಿ ನಡಿದಿತ್ತs, ಎಲ್ಲಾರೂ ರಾಜಿನಾಮೆ ಪತ್ರ ಕಿಸೆದಾಗ ಇಟ್ಗೊಂಡೆ ಅಡ್ಡಾಡಕತ್ತಿದ್ರು, ಅಂಥಾದ್ರಾಗ ನೀ ಯಾವ ಪುಟಗೋಸಿಯಪಾ ಸೀಟ ಹೊಡ್ಕೊಂಡು ಬರಾಂವಾ?’ ಎಂದು ನಕ್ಕ ಗುಂಡ್ಯಾ’ಹೌಂದಪಾ, ಅಲ್ಲಿ ಮುನಿ,ರಮೇಶ ನಡಕ ಯಾವಾಗ್ಲೂ ಫೈಟ್! ಅದ್ಕs ನಂಗೇ ಚಾನ್ಸ ಇತ್ತ ಅಲ್ಲಿ’ ಎಂದ ಬುಕಡ್ಯಾ’ಏನಲೇ ಇಂವಾ ಅದೇನ ಮುನ್ಸಿಪಾಲ್ಟಿ…
Udayarashmi kannada daily newspaper
ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ಸಂಸದರಾದ ಮುಕುಲ್ ವಾಸ್ನಿಕ್, ಪವನ್ ಖೇರಾ&ಗುರುದೀಪ್ ಸಪ್ಪಲ್ ನಿಯೋಗದಿಂದ ದೂರು ದೆಹಲಿ: “ಪಕ್ಷದ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಸಿದ್ಧಾಂತವನ್ನು ಪ್ರತಿ ಬಿಂಬಿಸುತ್ತದೆ ಮತ್ತು ಪ್ರತಿ ಪುಟವು ಭಾರತವನ್ನು ತುಂಡು ತುಂಡಾಗಿಸುವ ಅಂಶವನ್ನು ಹೊಂದಿದೆ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ವಿರುದ್ದ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ರಾಜ್ಯಸಭಾ ಸಂಸದರಾದ ಮುಕುಲ್ ವಾಸ್ನಿಕ್, ಪವನ್ ಖೇರಾ ಮತ್ತು ಗುರುದೀಪ್ ಸಪ್ಪಲ್ ಅವರ ನಿಯೋಗವು ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ.ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಬಿಜೆಪಿಯು ಚುನಾವಣಾ ಪ್ರಚಾರದಲ್ಲಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಆರೋಪಿಸಿದೆ.ಕೇಂದ್ರ ಸಚಿವ ಮತ್ತು ಬಿಜೆಪಿಯ ತಿರುವನಂತಪುರಂ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ‘ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಕಾಂಗ್ರೆಸ್ ಮತ್ತೊಂದು ದೂರು ದಾಖಲಿಸಿದೆ.‘ವಿಕಸಿತ ಭಾರತ @…
ವಿಜಯಪುರ: ಸ್ವಚ್ಚತೆ ಎಂಬುದು ನಾಗರೀಕ ಜೀವನದ ಮೊದಲ ಆದ್ಯತೆಯಾಗಿರಬೇಕು. ನಾವು ವಾಸಿಸುವ ಸ್ಥಳವನ್ನು ಶುಚಿಯಾಗಿ ಇಟ್ಟುಕೊಂಡರೆ ಮಹಾತ್ಮ ಗಾಂಧೀಜಿಯವರ ಆಶಯವಾದ ಸ್ವಚ್ಚ ಭಾರತದ ಪರಿಕಲ್ಪನೆ ಸಾಕಾರವಾಗುತ್ತದೆ. ಹಾಗಾಗಿ ಇನ್ನು ಮುಂದೆ ಪ್ರತಿ ತಿಂಗಳ ಮೊದಲನೇ ಶನಿವಾರವನ್ನು ‘ಸ್ವಚ್ಚ ಶನಿವಾರ’ ಎನ್ನುವ ಪರಿಕಲ್ಪನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.ಅವರು ಶನಿವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ಕಾರ್ಯಾಲಯದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಇನ್ನು ಮುಂದೆ ಕಛೇರಿಯಲ್ಲಿ ಸ್ವಚ್ಛ ಶನಿವಾರ ಎಂಬ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ಇದರ ಅಂಗವಾಗಿ ಪ್ರತಿ ತಿಂಗಳ ಮೊದಲನೆಯ ಶನಿವಾರದಂದು ಜಿಲ್ಲಾ ಪಂಚಾಯತಿಯ ಕಾರ್ಯಾಲಯದ ಎಲ್ಲ ಒಳ ಮತ್ತು ಹೊರ ಆವರಣವನ್ನು ಎಲ್ಲ ಅಧಿಕಾರಿಗಳು ಸಿಬ್ಬಂದಿಯವರು ಸ್ವಚ್ಛಗೊಳಿಸುವ ಮೂಲಕ ತಾವು ಇರುವ ಸ್ಥಳವನ್ನು ಶುಚಿಗೊಳಿಸಿ, ಮಾದರಿ ಕಛೇರಿಯನ್ನಾಗಿ ಮಾಡುವ ಸದುದ್ದೇಶದಿಂದ ಜಾರಿಗೊಳಿಸಲಾಗುತ್ತಿದೆ ಎಂದರು.ಸ್ವಚ್ಛತಾ ಕಾರ್ಯಕ್ಕೆ ಕಛೇರಿಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು…
ವಿಜಯಪುರ: ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕ್ರಿಯಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಚುನಾವಣಾಧಿಕಾರುಗಳು ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಹಿನ್ನೆಲೆಯಲ್ಲಿ ರವಿವಾರದಂದು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮತದಾರರ ಪ್ರತಿಜ್ಞಾವಿಧಿ ಕೋಣೆಯ ಉದ್ಘಾಟನೆ ನೇವೇರಿಸಿ ಅವರು ಮಾತನಾಡಿದರು.ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಮತದಾನವು ಶೇ.೧೦೦ರಷ್ಟು ಆಗಬೇಕು. ಅದಕ್ಕಾಗಿ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅನೇಕ ಜನರು ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿರುತ್ತಾರೆ ಅಂತಹವರನ್ನು ಕರೆ ಮಾಡುವ ಮೂಲಕ ಸಂಪರ್ಕಿಸಿ ಅವರಿಗೂ ಸಹ ಮತದಾನದ ಕುರಿತು ಮಾಹಿತಿ ನೀಡಿ ಮತದಾನದಲ್ಲಿ ಭಾಗಿಯಾಗಲು ಪ್ರೇರೇಪಣೆ ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಾತನಾಡಿದರು.ಜಿಲ್ಲೆಯ ಎಲ್ಲಾ ಜನತೆಗೆ ಮತದಾನ ಮಾಡಲು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಪ್ರಮಾಣ…
-ವಿ.ಎಂ.ಎಸ್.ಗೋಪಿ,ಬೆಂಗಳೂರು. ಮೊ:9353611472 ಬೇವು ಬೆಲ್ಲದ ಸಂಭ್ರಮವೇ ಯುಗಾದಿ ಹಬ್ಬ ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ ಯುಗಾದಿ, ಹಿಂದೂ ಸಂಪ್ರದಾಯದ ಹೊಸ ವರ್ಷ ಯುಗಾದಿ ಹಬ್ಬ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕ್ಕೆ ಹೊಸದು ಹೊಸದು ತರುತ್ತಿದೆ. ಈಯುಗಾದಿ ಹಬ್ಬ ನಮಗೆ ಮಾತ್ರವಲ್ಲ, ಪ್ರಕೃತಿಗೊ ಸಹ ಹೊಸ ವರುಷವಾಗಿರುತ್ತದೆ. ಚೈತ್ರ ಮಾಸದಿಂದ ಪ್ರಾರಂಭವಾಗುವ. ಈ ಮಾಸದಲ್ಲಿ ಮರ ಗಿಡಗಳು ಚಿಗರೊಡೆದು ಪ್ರಕೃತಿಯೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಬೇವು ಬೇಲ್ಲದ ಸಂಭ್ರಮವೇ ಈ ಯಗಾದಿ ಹಬ್ಬ ಮನೆಯಂಗಳದಲ್ಲಿ ಸಗಣಿ ಸಾರಿಸಿ ರಂಗೋಲಿ ಬಿಡಿಸಿ ಬಣ್ಣ ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಬೇವು ಮಾವಿನ ತಳಿರು ತೋರಣ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ. ಬೇವು ಬೇಲ್ಲವನ್ನು ತಿಂದು ಹಿಂದಿನ ನೋವು ಮರೆತು ಸ್ನೇಹಿತರಿಗೆ ಯುಗಾದಿ ಹಬ್ಬದ ಶುಭಾಷಯಗಳನ್ನು ಹೇಳಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಕಳೆದ ವರ್ಷದ ಕಹಿ ಘಟನೆಗಳನ್ನು ಮರೆಯೋಣ, ಮತ್ತು ಸಿಹಿ ಘಟನೆಗಳನ್ನು ಸವಿಯೋಣ,…
ಇಂಡಿ: ಚುನಾವಣೆ ಆಯೋಗದ ಮಾರ್ಗಸೂಚಿಯ ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಆದರ್ಶ ಪ್ರೌಢಶಾಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲ ಪಿಆರ್‌ಒ ಮತ್ತು ಎಪಿಆರ್‌ಓ ಇವರಿಗೆ ಚುನಾವಣೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಮಾಕ ಪೋಲ, ಅದರ ಕಾರ್ಯ ವಿಧಾನ,ಮತ್ತು ನಿಜವಾದ ಮತದಾನದ ಆರಂಭದ ಬಗ್ಗೆ ತಿಳಿಸಿದರು.ಚುನಾವಣೆ ಪೂರ್ವ ಹೋದ ನಂತರ ಮಾಡುವ ಕಾಗದಗಳ ಮತ್ತು ವಿವಿಧ ನಮೂನೆ ಕಾಗದದ ಎಲ್ಲ ವಿವರ ಮತ್ತು ಇವಿಎಮ್, ವಿವಿಪ್ಯಾಡ ಕುರಿತು ಮಾಹಿತಿ ನೀಡಿದರು.ಅದರಂತೆ ೧೯ ಜನ ಮಾಸ್ಟರ್ ಟ್ರೇರ‍್ಸ ತರಬೇತಿದಾರರು ವಿವಿಧ ಕೋಣೆಗಳಲ್ಲಿ ಚುನಾವಣೆ ನಡೆಸುವ ಕುರಿತು ವಿವರವಾದ ಮಾಹಿತಿ ನೀಡಿದರು.ತರಬೇತಿಯಲ್ಲಿ ೩೭೯ ಪಿಆರ್‌ಒ ಮತ್ತು ೫೫೪ ಎಪಿಆರ್‌ಒ ಭಾಗವಿಹಿಸಿ ಚುನಾವಣೆ ತರಬೇತಿ ಪಡೆದರು.ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವಪ್ಪ ಮುರಗಿ, ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ, ರವಿ ಮಡಿವಾಳರ, ಕೆವಿಕೆ ಮುಖ್ಯಸ್ಥ ಶಿವಶಂಕರಮೂರ್ತಿ,…
