ಇಂಡಿ: ಚುನಾವಣೆ ಆಯೋಗದ ಮಾರ್ಗಸೂಚಿಯ ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಆದರ್ಶ ಪ್ರೌಢಶಾಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲ ಪಿಆರ್‌ಒ ಮತ್ತು ಎಪಿಆರ್‌ಓ ಇವರಿಗೆ ಚುನಾವಣೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಾಕ ಪೋಲ, ಅದರ ಕಾರ್ಯ ವಿಧಾನ,ಮತ್ತು ನಿಜವಾದ ಮತದಾನದ ಆರಂಭದ ಬಗ್ಗೆ ತಿಳಿಸಿದರು.
ಚುನಾವಣೆ ಪೂರ್ವ ಹೋದ ನಂತರ ಮಾಡುವ ಕಾಗದಗಳ ಮತ್ತು ವಿವಿಧ ನಮೂನೆ ಕಾಗದದ ಎಲ್ಲ ವಿವರ ಮತ್ತು ಇವಿಎಮ್, ವಿವಿಪ್ಯಾಡ ಕುರಿತು ಮಾಹಿತಿ ನೀಡಿದರು.
ಅದರಂತೆ ೧೯ ಜನ ಮಾಸ್ಟರ್ ಟ್ರೇರ‍್ಸ ತರಬೇತಿದಾರರು ವಿವಿಧ ಕೋಣೆಗಳಲ್ಲಿ ಚುನಾವಣೆ ನಡೆಸುವ ಕುರಿತು ವಿವರವಾದ ಮಾಹಿತಿ ನೀಡಿದರು.
ತರಬೇತಿಯಲ್ಲಿ ೩೭೯ ಪಿಆರ್‌ಒ ಮತ್ತು ೫೫೪ ಎಪಿಆರ್‌ಒ ಭಾಗವಿಹಿಸಿ ಚುನಾವಣೆ ತರಬೇತಿ ಪಡೆದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವಪ್ಪ ಮುರಗಿ, ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ, ರವಿ ಮಡಿವಾಳರ, ಕೆವಿಕೆ ಮುಖ್ಯಸ್ಥ ಶಿವಶಂಕರಮೂರ್ತಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ , ಶಿರಸ್ತೆದಾರ ಬಸವರಾಜ ರಾಹೂರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

