Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಬುರಗಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಖರ್ಗೆ ವಾಗ್ದಾಳಿ ಕಲಬುರಗಿ: ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುತ್ತಾರೆ, ಆದರೆ ಬಿಜೆಪಿ ಭ್ರಷ್ಟಾಚಾರ ಆರೋಪ ಹೊತ್ತವರಿಗೆ ಕ್ಲೀನ್ ಚಿಟ್ ನೀಡುವ ವಾಷಿಂಗ್ ಮೆಷಿನ್‌ನಂತೆ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ನಾಮಪತ್ರ ಸಲ್ಲಿಕೆಯ ನಂತರ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿಜಿ ಮತ್ತು ಶಾ ಬಳಿ ಒಂದು ದೊಡ್ಡ ಯಂತ್ರವಿದೆ. ವಾಷಿಂಗ್ ಮಷೀನ್. ಇದು ಎಷ್ಟು ದೊಡ್ಡ ಯಂತ್ರವೆಂದರೆ ಅದು ಬಟ್ಟೆಗಳನ್ನು ಮಾತ್ರವಲ್ಲ; ಮನುಷ್ಯರನ್ನು ಕೂಡ ಶುದ್ಧಗೊಳಿಸಬಲ್ಲದು.ಒಮ್ಮೆ ಬಿಜೆಪಿ ಸೇರಿದರೆ ಸಾಕು ಈ ಯಂತ್ರದ ಮೂಲಕ ಹಾದು ಎಲ್ಲರೂ ಪರಿಶುದ್ಧರಾಗುತ್ತಾರೆ. ಭ್ರಷ್ಟತೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲ್ಪಟ್ಟವರು, ಭ್ರಷ್ಟಾಚಾರ ಆರೋಪ ಪ್ರಕರಣ ದಾಖಲಾದವರು, ನೀವೇ ಜೈಲಿಗೆ ಕಳಿಸದವರೆಲ್ಲಾ ನಿಮ್ಮ ಪಕ್ಷಕ್ಕೆ ಸೇರಿದ ಮೇಲೆ ಅದು ಹೇಗೆ ಪರಿಶುದ್ಧರಾಗುತ್ತಾರೆ? ಎಂದು ಪ್ರಶ್ನಿಸಿದರು.ಮೋದಿಜೀ ಭ್ರಷ್ಟರನ್ನು ಎಂದಿಗೂ ಬಿಡುವುದಿಲ್ಲ…
ವಿಜಯಪುರ: ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಸ್ಥೆಯ ನಳಂದ ಪದವಿ ಪೂರ್ವ ಕಾಲೇಜು ಕೆ.ಎಚ್.ಬಿ. ಕಾಲನಿ, ವಿಜಯಪುರ ಇದರ ದ್ವಿತೀಯ ಪಿ.ಯು.ಸಿ. ಪರೀಕ್ಷೆ ೨೦೨೪ರ ಸಾಲಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಂದಿನಿ ಮಠಪತಿ ಶೇ.೯೫% ರಷ್ಟು, ದ್ವಿತೀಯ ಸ್ಥಾನವನ್ನು ಪರಮಾನಂದ ಕತ್ನಳ್ಳಿ ಶೇ.೯೪ ರಷ್ಟು, ತೃತೀಯ ಸ್ಥಾನವನ್ನು ಭಾಗ್ಯಶ್ರೀ ಅವರಾದಿ ಶೇ.೯೩ ರಷ್ಟು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇವರೊಂದಿಗೆ ಚಿದಾನಂದ ಮಠಪತಿ ಶೇ.೯೨%, ಅಬ್ದುಲ ಕಯ್ಯೂಮ್ ಚಡಚಣ ಶೇ.೯೧%, ಚೇತನ ಮಠಪತಿ ಶೇ.೯೦%, ಸಹನಾ ಬೊಮ್ಮನಹಳ್ಳಿ ಶೇ.೯೦ %. ಶೃತಿ ಯಳವಂತಿ ಶೇ.೮೯%, ಸೌಮ್ಯ ಶೇ.೮೯%, ಸಾವಿತ್ರಿ ಹರಿಜನ ಶೇ.೮೮% ಪರಿಮಳ ಕಟ್ಟಿ ಶೇ.೮೮% ರಷ್ಟು ಶಿವಕುಮಾರ ಗೊಳಸಂಗಿ ಶೇ.೮೭% ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.ಕಲಾ ವಿಭಾಗದಲ್ಲಿ : ಪ್ರಥಮ ಸ್ಥಾನ ಪ್ರವೀಣ ಇಮ್ಮಡಿ ಶೇ.೯೦%, ದ್ವಿತೀಯ ಸ್ಥಾನ ರಂಜಿತಾ ಮನಿಕ್ಯಾಳ ಶೇ.೮೯%, ತೃತಿಯ ಸ್ಥಾನ ರಾಜೇಶ ಅರವತ್ತು ಶೇ.೮೮% ಪಡೆದುಕೊಂಡರೆ, ಇವರೊಂದಿಗೆ ಸಾಗರ ಮಂಗಳೂರು ಶೇ.೮೭%, ಗುರುಪಾದ ಕಂಬಾರ ಶೇ.೮೭%, ಮಂಜುನಾಥ…
ಇಂಡಿಯಲ್ಲಿ ಸಿಡಿಲಿಗೆ ಇಬ್ಬರ ಬಲಿ ಇಂಡಿ: ಸಿಡಿಲು ಅಪ್ಪಳಿಸಿ ಇಬ್ಬರ ದಾರುಣ ಸಾವು. ಬಿರುಗಾಳಿ ಮಳೆಗೆ ಮರಗಳು ಧರೆಗುರುಳಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.ಗುರುವಾರ ಸಂಜೆ ವೇಳೆ ಬಿರುಗಾಳಿ ಸಮೇತ ಮಳೆಯಾಗಿದ್ದು ರೈತರಲ್ಲಿ ಸ್ವಲ್ಪ ಸಂತಸ ಮೂಡಿಸಿದ್ದರೆ, ಹಲವರ ದುಃಖಕ್ಕೆ ಕಾರಣವಾಗಿದೆ. ಪಟ್ಟಣದ ಮಾವಿನಹಳ್ಳಿ ರಸ್ತೆಯ ಜಲ ದೇವಪ್ಪ ಕೆರೆ ಹತ್ತಿರ ಇರುವ ಪೂಜಾರಿ ವಸ್ತಿಯಲ್ಲಿ 16 ವರ್ಷದ ಬಾಲಕ ಭೀರಪ್ಪ ನಿಂಗಪ್ಪ ಅವರಾದಿ ಮಳೆ ಬರುತ್ತಿದೆ ಎಂದು ಬೇವಿನ ಮರದ ಆಶ್ರಯದಲ್ಲಿ ಪಡೆಯುತ್ತಿದ್ದಂತೆ ಏಕಾಏಕಿ ಬಡಿದ ಸಿಡಿಲಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅದರಂತೆ ತಾಲ್ಲೂಕಿನ ಹಿರೇ ಮಸಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ 43 ವರ್ಷದ ಸೋಮಶೇಖರ್ ಕಾಶಿಕನಾಥ ಪಟ್ಟಣಶೆಟ್ಟಿ ಸಿಡಿಲಿಗೆ ಜೀವ ತೆತ್ತಿದ್ದಾರೆ. ಇಷ್ಟಲ್ಲದೆ ಹಿರೇ ಮಸಳಿ ಗ್ರಾಮದ ಸುತ್ತಮುತ್ತ ಹಾಗೂ ಅಂಬಣ್ಣ ಸುಣಗಾರ ಇವರ ತೋಟದಲ್ಲಿ ಫಲಕೊಡಬೇಕಾದ ಲಿಂಬೆ ಗಿಡಗಳು ಹಾಗೂ ಇತರೆ ಮರಗಳು ನೆಲಕಚ್ಚಿವೆ. ಒಟ್ಟಾರೆಯಾಗಿ ಸಿಡಿಲು ಬಡಿದು ದುರಂತದಲ್ಲಿರುವ ಕುಟುಂಬಕ್ಕೆ ಪರಿಹಾರ ಹಾಗೂ ಹಾಗೂ ಹಾನಿಗೊಳಗಾದ ರೈತ…
ಇಂಡಿ: 2024 ರ ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮೈತ್ರಿ ಪಕ್ಷದ ಸಮಯನ್ವ ಸಮಿತಿಯ ಕಾರ್ಯಕ್ರಮದಲ್ಲಿ ನ್ಯಾಯವಾದಿ ಎಸ್ ಜೆ ವಾಲಿಕಾರ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.ಗುರುವಾರ ಪಟ್ಟಣದ ಶಾಂತೇಶ್ವರ ಮಂಗಲಕಾರ್ಯದಲ್ಲಿ ನಡೆದ ಸಮನ್ವಯ ಸಮಿತಿಯ ಸಭೆಯಲ್ಲಿ ಸಂಸದ ಅಭ್ಯರ್ಥಿ ರಮೇಶ್ ಜಿಗಜಿಣಿಗಿ, ಜೆಡಿಎಸ್ ಪಕ್ಷದ ಮುಖಂಡ ಬಿ.ಡಿ. ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ. ಜಿ. ಪಾಟೀಲ, ಆರ್ ಕೆ ಪಾಟೀಲ ಶ್ರೀಶೈಲಗೌಡ ಬಿರಾದಾರ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ವಿಜಯಪುರ: ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಡಿ. ಎಸ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೊಂಡಿದ್ದು ಕಾಲೇಜಿನ ಫಲಿತಾಂಶ 98.43% ರಷ್ಟು ದಾಖಲಾಗಿದೆ.ಕುಮಾರಿ – ಸೌಮ್ಯ ಗೌರ 569/600 ಪ್ರಥಮ ಸ್ಥಾನ, ಕುಮಾರಿ – ಶಶಿಕಲಾ ಮಂಗೊಂಡಿ -568/600 ದ್ವಿತೀಯ ಸ್ಥಾನ, ಕುಮಾರಿ – ಪ್ರೀಯಾ ಸುಂಟ್ಯಾಣ 557/600 ತೃತೀಯ ಸ್ಥಾನ ಪಡೆದಿದ್ದಾರೆ. ಕಾಲೇಜಿನಲ್ಲಿ ಒಟ್ಟು 64 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು ಅದರಲ್ಲಿ 63 ವಿದ್ಯಾರ್ಥಿಗಳು ತೇರ್ಗಡೆ ಹೊಂದ್ದಿದ್ದಾರೆ. ಅದರಲ್ಲಿ 32 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), ಮತ್ತು 31 ವಿದ್ಯಾರ್ಥಿಗಳು ಉತ್ತಮ ಶ್ರೇಣಿ (ಪ್ರಥಮ ಶ್ರೇಣಿ)ಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಈ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯರಾದ ಐ.ಡಿ.ಪಡಶೆಟ್ಟಿ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಇಡೀ ದಿನ ಜರುಗಿದ ವಾದಿ-ಪ್ರತಿವಾದಿ ಗೀ ಗೀ ಪದಗಳು ಜನಮನಸೂರೆಗೊಂಡವು.ಸಿಂದಗಿ ತಾಲೂಕಿನ ಮದರಿಯ ಸಂಗನಬಸವೇಶ್ವರ ಗೀ ಗೀ ಪದ ಕಲಾ ಮೇಳ ಹಾಗೂ ಅಥಣಿ ತಾಲೂಕಿನ ಬಾಳೇಗರಿಯ ರೇಣುಕಾದೇವಿ ಗೀ ಗೀ ಪದ ಕಲಾ ಮೇಳದಿಂದ ವಾದಿ-ಪ್ರತಿವಾದಿ ಗೀ ಗೀ ಪದಗಳು ಜರುಗಿದವು. ಮದರಿಯ ರಾಜ್ಯ ಪ್ರಶಸ್ತಿ ವಿಜೇತ ಗಾಯಕ ಭಾಗಣ್ಣ ಲಕ್ಷ್ಮಣ ತಳವಾರ ಇವರಿಗೆ ಪರಶುರಾಮ ಮಾದರ ಅವರು ವಾಯಲೀನ್ ಸಾಥ್ ನೀಡಿದರು. ಬಾಳೇಗರಿಯ ಗಾಯಕಿ ಲಕ್ಷ್ಮೀಬಾಯಿ ಅಡಿವೆಪ್ಪ ಕೊಣ್ಣೂರ ಗೀ ಗೀ ಮುಖ್ಯಗಾಯಕಿಗೆ ಗೋಪಾಲ ಕೋಳಿ, ಶ್ರೀಕಾಂತ ಕೊಣ್ಣೂರ, ಶಾಂತಪ್ಪ ಜಮಾದಾರ ಸಾಥ್ ನೀಡಿದರು. ಎರಡು ಗೀ ಗೀ ಕಲಾಮೇಳಗಳು ಗರ್ಭಕಾಂಡ ವಿಷಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಸ್ತುತ ಪಡಿಸಿದ ವಾದಿ-ಪ್ರತಿವಾದಿ ಗೀ ಗೀ ಪದಗಳನ್ನು ಜನರು ಆಲಿಸಿದರು.ಮುಖ್ಯ ಗಾಯಕಿ ಲಕ್ಷ್ಮೀಬಾಯಿ ಅಡಿವೆಪ್ಪ ಕೊಣ್ಣೂರ ಅವರನ್ನು ಮಾತನಾಡಿಸಿದಾಗ, ನಿಜವಾದ ಕಲಾವಿದರಿಗೆ ಎಲ್ಲ ಕಾಲದಲ್ಲಿಯೂ…
ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಎಲ್ಲ ಧರ್ಮದವರು ಶರಣರಾಗುವ ಧನ್ಯತೆ ಪಡೆಯುವ ಮೂಲಕ ಅದ್ಭುತವಾದ ಕ್ರಾಂತಿ ನಡೆಯಿತು. ಈ ಕಾಲ ಘಟದಲ್ಲಿ ಬಸವಾದಿ ಶರಣರಿಂದ ರಚನೆಯಾಗಿರುವ ವಚನ ಸಾಹಿತ್ಯ ಎಲ್ಲರಿಗೂ ಆದರ್ಶದ ಬದುಕಿಗೆ ದಾರಿದೀಪವಾಗಿದೆ ಎಂದು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವವನ್ನು ಗುರುವಾರ ಸಂಜೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಬಸವಣ್ಣನವರು ಸಾಮಾಜಿಕ ಕ್ರಾಂತಿಯಿಂದಾಗಿ ತಮ್ಮ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಬೇಕಾಯಿತು. ವಚನ ಸಾಹಿತ್ಯ ಸಂರಕ್ಷಣೆ ಚನ್ನಬಸವಣ್ಣನವರಿಗೆ ಜವಾಬ್ದಾರಿ ವಹಿಸಿ ತಾವು ಕೂಡಲಸಂಗಮದ ಕಡೆಗೆ ತೆರಳಿದರು. ಚನ್ನಬಸವಣ್ಣನವರು ಸೇರಿದಂತೆ ಅನೇಕ ಶರಣರು ವಚನ ಸಾಹಿತ್ಯದ ಸಂರಕ್ಷಣೆ ಮಾಡಿದರು. ೧೨ ನೇ ಶತಮಾನದಲ್ಲಿ ಧರ್ಮದ ಜ್ಯೋತಿ ಬೆಳಗಿ ನಂತರ ಕೆಲ ವರ್ಷಗಳ ಕಾಲ ಆರಿ ಹೋಯಿತು. ನಂತರ ವಿಜಯನಗರ ಸಾಮ್ರಾಜ್ಯದ…
ವಿಜಯಪುರ: ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕ ಆಧಾರದ ಮೇಲೆ ೬ ಭದ್ರತಾ ಸಿಬ್ಬಂದಿ ನೇಮಕಾತಿ ಹುದ್ದೆಗಳಿಗಾಗಿ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಸಕ್ತರು ಐದು ದಿನದ ಒಳಗಾಗಿ ತಮ್ಮ ವಿವರವನ್ನು ಉಪನಿರ್ದೇಶಕರ ಕಾರ್ಯಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವಿಜಯಪುರ ಇವರಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ೧೩೩ ನೇ ಜಯಂತಿ ಆಚರಣೆಯನ್ನು, ಲೋಕಸಭೆ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ, ಜಿಲ್ಲಾಡಳಿತ ವತಿಯಿಂದಏಪ್ರಿಲ್ ೧೪ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲಾಗುವುದು.ಅಂದು ಬೆಳಿಗ್ಗೆ ೮ ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಗುವುದು. ಸಾರ್ವಜನಿಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿಗಳು ಭಾಗವಹಿಸಲು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲೀಕ ಮಾನವರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರ: ಸಧೃಡ ಭಾರತ ನಿರ್ಮಾಣಕ್ಕಾಗಿ, ಸಶಕ್ತ ಭಾರತವನ್ನು ಮುನ್ನೆಡಸಲು ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಮತದಾನ ಅತ್ಯಗತ್ಯವಾಗಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆ-೨೦೨೪ರ ನಿಮಿತ್ತ ಮತದಾನ ಜಾಗೃತಿ ಮೂಡಿಸುವ ಸ್ಥಬ್ಧಚಿತ್ರ ವಾಹನಕ್ಕೆ ಶುಕ್ರವಾರ ಹಸಿರು ನಿಶಾನೆ ತೋರುವುದರ ಮೂಲಕ ಮಾತನಾಡಿದರು.ಮತ ಚಲಾಯಿಸುವುದರ ಮೂಲಕ ದೇಶದ ಸಮಗ್ರತೆ ಹಾಗೂ ಪ್ರಗತಿಗೆ ಮುನ್ನುಡಿ ಬರೆಯಬೇಕು. ನಾವು ಹಾಕುವ ಮತ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ ಅದು ದೇಶದ ಭವಿಶ್ಯವನ್ನು ನಿರ್ಮಾಣ ಮಾಡುವ, ಅಭಿವೃದ್ಧಿಗೆ ಪೂರಕವಾಗಿರುವ ಮೆಟ್ಟಿಲು ಆಗಿರುತ್ತದೆ ಎಂದು ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಮಾತನಾಡಿ, ಮತದಾನದಿಂದ ದೇಶದ ಆಭಿವೃದ್ಧಿ ಸಾಧ್ಯ. ನನ್ನ ಒಂದು ಒಂದು ಮತದಾನವೂ ದೇಶದ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂಬುದನ್ನು ಅರಿತುಕೊಂಡು ಮತ ಚಲಾಯಿಸಬೇಕು. ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಭಾರತಕ್ಕೆ ಮತದಾನ ಎಂಬುದು ಅತ್ಯಂತ ಪ್ರಾಮುಖ್ಯತೆ ಹೊದಿರುವ ಕರ್ತವ್ಯವಾಗಿದೆ ಎಂದರು.ಈಗಾಗಲೇ…
