ವಿಜಯಪುರ: ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಸ್ಥೆಯ ನಳಂದ ಪದವಿ ಪೂರ್ವ ಕಾಲೇಜು ಕೆ.ಎಚ್.ಬಿ. ಕಾಲನಿ, ವಿಜಯಪುರ ಇದರ ದ್ವಿತೀಯ ಪಿ.ಯು.ಸಿ. ಪರೀಕ್ಷೆ ೨೦೨೪ರ ಸಾಲಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಂದಿನಿ ಮಠಪತಿ ಶೇ.೯೫% ರಷ್ಟು, ದ್ವಿತೀಯ ಸ್ಥಾನವನ್ನು ಪರಮಾನಂದ ಕತ್ನಳ್ಳಿ ಶೇ.೯೪ ರಷ್ಟು, ತೃತೀಯ ಸ್ಥಾನವನ್ನು ಭಾಗ್ಯಶ್ರೀ ಅವರಾದಿ ಶೇ.೯೩ ರಷ್ಟು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇವರೊಂದಿಗೆ ಚಿದಾನಂದ ಮಠಪತಿ ಶೇ.೯೨%, ಅಬ್ದುಲ ಕಯ್ಯೂಮ್ ಚಡಚಣ ಶೇ.೯೧%, ಚೇತನ ಮಠಪತಿ ಶೇ.೯೦%, ಸಹನಾ ಬೊಮ್ಮನಹಳ್ಳಿ ಶೇ.೯೦ %. ಶೃತಿ ಯಳವಂತಿ ಶೇ.೮೯%, ಸೌಮ್ಯ ಶೇ.೮೯%, ಸಾವಿತ್ರಿ ಹರಿಜನ ಶೇ.೮೮% ಪರಿಮಳ ಕಟ್ಟಿ ಶೇ.೮೮% ರಷ್ಟು ಶಿವಕುಮಾರ ಗೊಳಸಂಗಿ ಶೇ.೮೭% ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.
ಕಲಾ ವಿಭಾಗದಲ್ಲಿ : ಪ್ರಥಮ ಸ್ಥಾನ ಪ್ರವೀಣ ಇಮ್ಮಡಿ ಶೇ.೯೦%, ದ್ವಿತೀಯ ಸ್ಥಾನ ರಂಜಿತಾ ಮನಿಕ್ಯಾಳ ಶೇ.೮೯%, ತೃತಿಯ ಸ್ಥಾನ ರಾಜೇಶ ಅರವತ್ತು ಶೇ.೮೮% ಪಡೆದುಕೊಂಡರೆ, ಇವರೊಂದಿಗೆ ಸಾಗರ ಮಂಗಳೂರು ಶೇ.೮೭%, ಗುರುಪಾದ ಕಂಬಾರ ಶೇ.೮೭%, ಮಂಜುನಾಥ ವಾಘಮೋರೆ ಶೇ.೮೭%, ಶಿವಲಿಂಗ ತೇಲಿ ಶೇ.೮೬%, ಹಮಾನಾಯಕ ರಾಠೋಡ ಶೇ.೮೫%, ದುರ್ಗೆಶ ವಾಘಮೋರೆ ಶೇ.೮೪%, ಪ್ರವೀಣ ಹಿಪ್ಪರಗಿ ಶೇ.೮೪% ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ : ಪ್ರಥಮ ಸ್ಥಾನ ಅಲ್ತಾಪ ಚಪ್ಪರಬಂದ ಶೇ.೮೫%, ದ್ವಿತೀಯ ರಾಹುಲ ವಡವಡಗಿ ಶೇ.೮೪%, ತೃತೀಯ ಬಸವರಾಜ ಮುದ್ದೆಬಿಹಾಳ ಶೇ.೮೩% ಫಲಿತಾಂಶವನ್ನು ಮಾಡಿದ ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ರಮೇಶ ಜಿಗಜೀವಣಗಿ, ಕಾರ್ಯದರ್ಶಿ ಮಿಲಿಂದ ಚಂಚಲಕರ, ಪ್ರಾಚಾರ್ಯರಾದ ಶ್ರೀಮತಿ ಹೇಮಲತಾ ಪಾಟೀಲ, ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
