Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಲಚೇತನರ ಹಕ್ಕುಗಳ ಅಧಿನಿಯಮ–೨೦೧೬ರ ಕಲಂ ೭೨ರ ಅನ್ವಯ ರಚಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ಜೂ೨೩ರ ಬೆಳಿಗ್ಗೆ ೧೧:೩೦ ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲಿ ವಿಕಲಚೇತನರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಗುವುದು. ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ವಿಕಲಚೇತನರು ಸಭೆಗೆ ಆಗಮಿಸುವುಂತೆಯೂ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ದೂರವಾಣಿ ಸಂಖ್ಯೆ ೦೮೩೫೨೭೯೬೦೬೦ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಟೌನ್ ಶಿಫ್ ಮಾಡುವುದು ಅತ್ಯವಶ್ಯಕ | ಶೇ.80 ರಷ್ಟು ರೈತರು ಜಮೀನು ಕೊಡಲು ಒಪ್ಪಿಗೆ | ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ಮೈಸೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ನಾಯಕರ ಜಟಾಪಟಿ ಮುಂದುವರೆದಿದ್ದು, ಕೆಲವರ ಮಾತು ಕೇಳಿ ಯೋಜನೆ ಕೈ ಬಿಡಲು ಆಗಲ್ಲ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೌನ್ ಶಿಫ್ ಮಾಡುವುದು ಅತ್ಯವಶ್ಯಕವಾಗಿದೆ. ಶೇ.80 ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ. ಹೆಚ್ಚಿನ ಮಟ್ಟದ ಪರಿಹಾರಕ್ಕೆ ಒಪ್ಪಿದ್ದಾರೆ, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಜೆಡಿಎಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ಬಿಡದಿ ಟೌನ್ ಶಿಪ್ ಗೆ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲವರ ಮಾತನ್ನು ಕೇಳಿ ಯೋಜನೆ ಕೈ ಬಿಡಲು ಆಗಲ್ಲ. ಬೆಂಗಳೂರು ಜನಸಂದಣಿ ಹೆಚ್ಚಾಗಿದೆ. ಎಷ್ಟೋ ಜನರಿಗೆ ನಿವೇಶನದ ಅಗತ್ಯ ಇದೆ. ಬೆಂಗಳೂರು ಜನಸಂಖ್ಯೆ ಸ್ಪ್ರೆಡ್ ಆಗಬೇಕಿದೆ. ಬೆಂಗಳೂರು ವಿಸ್ತರಣೆಯ ಅವಶ್ಯಕತೆಯಂತೂ ಇದೆ. ರೈತರೊಂದಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ವಿಜಯಪುರ ಇವರ ವತಿಯಿಂದ ಜಿಲ್ಲೆಯ ರೈತರು ಹಾಗೂ ರೈತ ಮಹಿಳೆಯರಿಗಾಗಿ ಯಂತ್ರೋಪಕರಣಗಳು ಮತ್ತು ಮುಂಗಾರು ಹಂಗಾಮಿನ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ನೂತನ ಬೇಸಾಯ ಪದ್ಧತಿಗಳು ತೊಗರಿ ಮತ್ತು ಹತ್ತಿ ವಿಷಯದ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈ ತರಬೇತಿಯು ಜೂನ್ ೨೨ ರಿಂದ ೨೪ರವರೆಗೆ ಜಿಲ್ಲಾ ಆಧುನಿಕ ಕೃಷಿ ತರಬೇತಿ ಕೇಂದ್ರ, ವಿಜಯಪುರದಲ್ಲಿ ನಡೆಯಲಿದ್ದು, ಮುಂಗಾರು ಹಂಗಾಮಿನಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳ ವೈಜ್ಞಾನಿಕ ಕೃಷಿ ಪದ್ಧತಿಗಳು, ಆಧುನಿಕ ಯಂತ್ರೋಪಕರಣಗಳ ಬಳಕೆ ಹಾಗೂ ಉತ್ಪಾದಕತೆ ಹೆಚ್ಚಿಸುವ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಜೂನ್ ೧೯ರೊಳಗೆ ತಮ್ಮ ಹೆ¸ರು ನೋಂದಾಯಿಸಿಕೊಳ್ಳುವAತೆಯೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಗೀತಾ ಬಜಂತ್ರಿ (ಮೊ. ೯೯೮೬೦೫೪೭೫೦) ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂಡಿಯಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಭರವಸೆ | ಪುತ್ಥಳಿ ಖರ್ಚು-ವೆಚ್ಚದ ಹಣ ತಾವೇ ಭರಿಸುವ ವಾಗ್ದಾನ ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದಲ್ಲಿ ದಿ.ದಾದಾಗೌಡ ಪಾಟೀಲರ ಪುತ್ಥಳಿಯನ್ನು ಇನ್ನೆರಡು ತಿಂಗಳಲ್ಲಿ ದಿ. ದಾದಾಗೌಡ ಪಾಟೀಲರ ವೃತ್ತದಲ್ಲಿ ಪ್ರೆತಿಷ್ಠಾಪಿಸಲಾಗುತ್ತದೆ. ಆ ಪುತ್ಥಳಿ ಗೆ ಅವಶ್ಯವಿರುವ ಹಣವನ್ನು ನಾನೇ ನೀಡುತ್ತೇನೆ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾದಾಗೌಡರು ನನ್ನ ರಾಜಕೀಯ ಗುರುಗಳಾಗಿದ್ದರು. ನನ್ನನ್ನು ಮೊದಲನೇ ಬಾರಿಗೆ ಇಂಡಿ ನಗರಕ್ಕೆ ಕರೆತಂದು ಶಾಸಕನಾಗಿ ಮಾಡಿದ ಕೀರ್ತಿ ದಾದಾಗೌಡರಿಗೆ ಸಲ್ಲುತ್ತದೆ. ಹೀಗಾಗಿ ಅವರ ಮೂರ್ತಿ ನಿರ್ಮಾಣದ ವೆಚ್ಚ ನಾನೇ ಸ್ವತಃ ನೀಡುತ್ತೇನೆ ಎಂದರು.ಶಾಸಕ ಯಶವಂತ್ರಾಯಗೌಡ ಪಾಟೀಲರು ಇಂಡಿಯನ್ನು ಜಿಲ್ಲಾ ಮಾಡಿಯೇ ೨೦೨೮ ರ ಚುನಾವಣೆ ಎದುರಿಸುತ್ತೇನೆ ಎಂದು ಘೋಷಣೆ ಮಾಡಿದ್ದು, ಜಿಲ್ಲಾ ಕೂಗು ಮಂಕಾಗಿ ಸಚಿವ ಸ್ಥಾನದ ಕೂಗು ಹೆಚ್ಚಿಸಿದ್ದಾರೆ. ಜನರನ್ನು ಮರಳು ಮಾಡಲು ಹೇಳಿಕೆ ಕೊಡುವುದನ್ನು ಬಿಟ್ಟು ಕ್ಷೇತ್ರದಲ್ಲಿನ ಹಾಳಾದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ (MSW) ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಹಾಗೂ ವೃತ್ತಿ ಅವಕಾಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “Job Readiness Session for MSW Students” ಎಂಬ ವಿಶೇಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸಂತೋಷ ಹಳೆಮನಿ ಮಾತನಾಡುತ್ತಾ, ಸಮಾಜ ಕಾರ್ಯ ಎಂದರೆ ಕೇವಲ ಪುಸ್ತಕದಲ್ಲಿರುವ ಸಿದ್ಧಾಂತವಲ್ಲ. ಅದು ಬದುಕಿನ ನಡುವೆ ಇಳಿದು, ಜನರ ನೋವಿಗೆ ಕಿವಿಯಾಗಿ, ಅವರ ಶಕ್ತಿಯಾಗುವ ಪ್ರಯೋಗ ಶಾಲೆ ಎಂದರು.ನಂತರ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗಾವಕಾಶಗಳು, ವೃತ್ತಿಪರ ರೆಸ್ಯೂಮ್ ತಯಾರಿಕೆ, ಸಂದರ್ಶನ ಕೌಶಲ್ಯಗಳು, ಸಂವಹನ ಮತ್ತು ವ್ಯಕ್ತಿತ್ವ ವಿಕಸನ, ಲಿಂಕ್ಡ್ ಇನ್ ನೆಟ್ವರ್ಕಿಂಗ್, ಫ್ರೀಲಾನ್ಸಿಂಗ್ ಹಾಗೂ ಕನ್ಸಲ್ಟೆನ್ಸಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಕಾರ್ಯಕ್ರಮದ ಸವಿನೆನಪಿಗಾಗಿ ಪರಿಸರದ ಜೊತೆ ಸಮಾಜ ಕಾರ್ಯ ಸಂಬಂಧಗಳು ಹಚ್ಚ ಹಸರಾಗಿ ಎಲ್ಲೇಡೆ ಪಸರಿಸಲಿ ಎಂದು ಆಶಿಸುತ್ತಾ ಸಮಾಜ ಕಾರ್ಯ ವಿಭಾಗದ ಮುಂದೆ ಸಸಿ ನೆಡಲಾಯಿತು.ಕಾರ್ಯಕ್ರಮದಲ್ಲಿ ಸಮಾಜ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಮನಸ್ಸಿನಲ್ಲಿ ದ್ವೇಷ, ಅಸೂಹೆ, ಕೆಟ್ಟ ವಿಚಾರಗಳನ್ನು ಇಟ್ಟುಕೊಂಡು ದೇವಸ್ಥಾನಗಳಿಗೆ ಹೋದರೆ ಉಪಯೋಗವಿಲ್ಲ ಬದಲಾಗಿ ಶುಧ್ಧ ಮನಸ್ಸಿನಿಂದ ಹೋದಲ್ಲಿ ತಮ್ಮ ಇಷ್ಠಾರ್ಥ ಆ ದೇವರು ನೆರವೇರಿಸುತ್ತಾನೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಅಲ್ಲಮ ಪ್ರಭುದೇವರ ಪಲ್ಲಕ್ಕಿ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ರೈತ, ಸೈನಿಕ ಮನುಷ್ಯನ ಎರಡು ಕಣ್ಣಿದ್ದಂತೆ, ರೈತ ಕೈಕಟ್ಟಿ ಕುಳಿತರೆ ನಾವು ಮಣ್ಣು ತಿನ್ನಬೇಕಾಗುತ್ತದೆ, ಸೈನಿಕ ಕಣ್ಮುಚ್ಚಿದರೆ ನಾವು ಮಣ್ಣು ಸೇರಬೇಕಾಗುತ್ತದೆ, ದೇಶ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೆ ದೊರೆಯುವುದಿಲ್ಲ ದೇಶ ಸೇವೆ ಸಲ್ಲಿಸಲು ಆಯ್ಕೆಯಾದ ಯೋಧರಿಗೆ ಜನ್ಮನೀಡಿದ ಪಾಲಕರೇ ಪುಣ್ಯವಂತರು ಎಂದರು.ಇದೇ ಸಂಧರ್ಭದಲ್ಲಿ ಭಾರತ ಮಾತೆಯ ಸೇವೆ ಸಲ್ಲಿಸಲು ನೂತನವಾಗಿ ಚಿಮ್ಮಡ ಗ್ರಾಮದಿಂದ ಆಯ್ಕೆಯಾದ ಹನ್ನೆರಡು ಜನ ಅಗ್ನಿವೀರರಿಗೆ ಹಾಗೂ ಪವಿತ್ರ ಉಮ್ರಾ (ಹಜ್) ಯಾತ್ರೆಯನ್ನು ಯಶಸ್ವಿಯಾಗಿ ಪೋರೈಸಿದ ಪತ್ರಕರ್ತ ಇಲಾಹಿ ಜಮಖಂಡಿಯವರನ್ನು ಸತ್ಕರಿಸಿ ಗೌರವಿಸಲಾಯಿತು.ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ…
ಎಚ್.ಡಿ.ಕೋಟೆ ತಾಲೂಕು ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಮೆರವಣಿಗೆ | ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಎಚ್.ಡಿ.ಕೋಟೆ: ಎರಡನೇ ಹಂತದ ಸಚಿವ ಸಂಪುಟ ರಚನೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಮುಸ್ಲಿಂ ಸಮುದಾಯದ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜಾತ್ಯತೀತ ನಾಯಕರಾಗಿರುವ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಬೇಕೆಂದುಎಚ್ ಡಿ ಕೋಟೆ ಹಾಗೂ ಸರಗೂರು ತಾಲೂಕು ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘ ಹಕ್ಕೊತ್ತಾಯ ಮಾಡಿ ಮೌನ ಪ್ರತಿಭಟನೆ ನಡೆಸಿತು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದೆ ಜಮಾಯಿಸಿದ ಮುಸ್ಲಿಂ ಬಾಂಧವರು, ಹೆಚ್ ಡಿ ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಮೈಸೂರು ಶಾಸಕ ತನ್ವಿರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಪ್ರಭಾವಿ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿ ಮಾಡಲೇಬೇಕು ಎಂದು ಘೋಷಣೆ ಕೂಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಪುರಸಭೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸನ್ 2026-27 ನೇ ಸಾಲಿಗೆ ವಿಜಯಪುರ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಜಿಲ್ಲೆಯ ರಸ್ತೆಗಳು ಮಳೆಯಿಂದ ಹಾಗೂ ಕಬ್ಬಿನ ವಾಹನಗಳ ಸಂಚಾರದಿಂದ ದುರಸ್ತಿಗೆ ಬಂದಿರುವ ರಸ್ತೆಗಳ ಅಗಲೀಕರಣ ಹಾಗೂ ಮರು ನಿರ್ಮಾಣಕ್ಕಾಗಿ 4800 ಲಕ್ಷದ ಸಿ.ಆರ್.ಐ.ಎಫ್ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಚಾಲನೆಯ ಪೂಜೆಯನ್ನು ನೆರವೇರಿಸಲಾಗುವುದು ಎಂದು ರಮೇಶ ಜಿಗಜಿಣಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ ಅವರು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ-ಲಚ್ಯಾಣ-ಪಡನೂರ-ಶಿರಗೂರ-ಗುಬ್ಬೇವಾಡ ರಸ್ತೆ ಕಿ.ಮಿ. 3.00 ರಿಂದ 8.5 ಕಿ.ಮಿ ವರೆಗೆ (ಆಯ್ದ ಭಾಗಗಳಲ್ಲಿ) ಅಂದಾಜು ರೂ. 600.00 ಲಕ್ಷಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ. – (ರಸ್ತೆಯ ಉದ್ದ 10.00 ಕಿಮಿ), ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಡಂಬಳ-ಕಲಕೇರಿ ಜಿಲ್ಲೆಯ ರಸ್ತೆ ಕಿ.ಮಿ. 8.38 ರಿಂದ 12.65 ಮತ್ತು 17.50 (ಆಯ್ದ ಭಾಗಗಳಲ್ಲಿ) ಮರು ಡಾಂಬರೀಕರಣ ರೂ. 6.00 ಲಕ್ಷಗಳ ಕಾಮಗಾರಿ (ರಸ್ತೆಯ ಉದ್ದ- 10.00 ಕಿ.ಮಿ) ಕಾಮಗಾರಿ, ವಿಜಯಪುರ…
ಚಡಚಣದಲ್ಲಿ ಕೆಎಸ್‌ಆರ್‌ಟಿಸಿ ಬಸ್–ಕ್ಯಾಂಟರ್ ಮುಖಾಮುಖಿ ಡಿಕ್ಕಿ | ೨೭ ಜನರಿಗೆ ಗಾಯ | ಮೂವರ ಸ್ಥಿತಿ ಗಂಭೀರ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲ್ಲೂಕಿನಲ್ಲಿ ಒಂದೇ ದಿನದ ಅಂತರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟಿದ್ದು, 27 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.ರಾಜ್ಯ ಹೆದ್ದಾರಿ 41ರ ಬರಡೋಲ ಗ್ರಾಮ ಹಾಗೂ ಲೋಣಿ ಕ್ರಾಸ್ ನಡುವೆ ಚಡಚಣ ಪೋಲಿಸ್ ಸರಹದ್ದಿನಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ವಿಜಯಪುರ ಡಿಪೋದ ಕೆಎ 28 ಎಫ್ 2468 ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಚಡಚಣದಿಂದ ಬದಾಮಿ ಕಡೆಗೆ ಸುಮಾರು 50 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಇದೇ ವೇಳೆ ಝಳಕಿ ಕಡೆಯಿಂದ ಚಡಚಣಕ್ಕೆ ಬರುತ್ತಿದ್ದ ಕೆಎ 28 ಎಎ 6792 ನಂಬರಿನ ಸಿಮೆಂಟ್ ತುಂಬಿದ ಕ್ಯಾಂಟರ್‌ನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮವಾಗಿ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬಸ್‌ಗೆ…
ಕಾರು, ಬೈಕ್, ಡಿಜೆ, ಮದ್ಯಕ್ಕೂ ನಿಷೇಧ | “ಹೆಣ್ಣು ಮಕ್ಕಳನ್ನು ಮಾರಾಟದ ವಸ್ತುವಾಗಿಸಬೇಡಿ” ಬಂಜಾರ ಮಹಾಪಂಚಾಯತ್‌ನ ದಿಟ್ಟ ಘೋಷಣೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶತಮಾನಗಳಿಂದ ಸಮಾಜವನ್ನು ಕಾಡುತ್ತಿರುವ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ತಾಲೂಕಿನ ೨೨ ತಾಂಡಾಗಳು ಐತಿಹಾಸಿಕ ಸಮರ ಸಾರಿವೆ.ತಾಂಡಾಗಳಲ್ಲಿ ವರದಕ್ಷಿಣೆ ಕೊಡುವುದೂ ಅಪರಾಧ, ಪಡೆಯುವುದೂ ಅಪರಾಧ ಎಂಬ ಕಟ್ಟುನಿಟ್ಟಿನ ನಿಲುವು ತಾಳಲಾಗಿದ್ದು, ಮದುವೆ ಹೆಸರಿನಲ್ಲಿ ನಡೆಯುತ್ತಿದ್ದ ದುಂದುವೆಚ್ಚ, ಡಿಜೆ, ಮದ್ಯಪಾನ ಹಾಗೂ ಕಾರು-ಬೈಕ್ ಉಡುಗೊರೆಗಳ ಸಂಪ್ರದಾಯಕ್ಕೂ ಸಂಪೂರ್ಣ ಬ್ರೇಕ್ ಹಾಕಲಾಗಿದೆ.ಈ ಕುರಿತು ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಎಆಯ್‌ಬಿಎಸ್‌ಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಡಾ.ಸಂತೋಷ ನಾಯಕ, ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ, ತಾಲ್ಲೂಕು ಅಧ್ಯಕ್ಷ ಬಹಾದ್ದೂರ ರಾಠೋಡ, ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಲಮಾಣಿ, ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ನಾನಪ್ಪ ನಾಯಕ, ಗ್ರಾಪಂ ಮಾಜಿ ಸದಸ್ಯ…
