ಉದಯರಶ್ಮಿ ದಿನಪತ್ರಿಕೆ
ಯಾಳವಾರ (ದೇವರಹಿಪ್ಪರಗಿ): ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಭವಿಷ್ಯ ರೂಪಿಸುವಲ್ಲಿ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಗಮನಾರ್ಹವಾಗಿದೆ ಎಂದು ಕಡಕೋಳ ಸಂಸ್ಥಾನಮಠದ ರಾಜಗುರು ಮಹಾಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದ ಸಂಸ್ಕಾರಧಾಮ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಜರುಗಿದ ಸಂಸ್ಕಾರ ಉತ್ಸವ ಹಾಗೂ ೧೪ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮದ ಮಕ್ಕಳಿಗೆ ಸತತ ೧೪ ವರ್ಷಗಳ ಕಾಲ ಸತ್ವಯುತ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಪ್ರವಚನಕಾರ ಬಸಯ್ಯ ಸ್ವಾಮೀಜಿ ಮಾತನಾಡಿ, ಮಗುವಿನ ಬೆಳವಣಿಗೆಯಲ್ಲಿ ಪಾಲಕ, ಪೋಷಕ, ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯಾವುದೇ ಕಾರಣಕ್ಕೂ ಮಗುವಿನ ಶಿಕ್ಷಣದ ಜವಾಬ್ದಾರಿಯಿಂದ ನುಣಚಿಕೊಳ್ಳದೇ ನಾವು ನಮ್ಮ ಕರ್ತವ್ಯ ನಿರ್ವಹಿಸಿ ಅವರನ್ನು ಸತ್ಪçಜೆಗಳನ್ನಾಗಿಸೋಣ ಎಂದರು.
ಸಂಸ್ಕಾರರತ್ನ ಪ್ರಶಸ್ತಿ ವಿಜೇತರಾದ ಎಸ್.ಎಸ್.ಸಾತಿಹಾಳ, ಕೆ.ಆರ್.ಕೊಕಟನೂರ, ಮಹಾಂತೇಶ ಸಂಗಮ, ಸಿ.ಕೆ.ಕಿರಣಗಿ ವೈದ್ಯ ವಿದ್ಯಾರ್ಥಿ ಹರೀಶ ನ್ಯಾಮಣ್ಣವರ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಪಟೇದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ದೇವೇಂದ್ರ ಬಡಿಗೇರ, ಡಾ.ಎಂ.ವ್ಹಿ.ಗುರುಮಠ, ರಾಜುಗೌಡ ನಾಡಗೌಡ, ಕೆ.ಎಸ್.ಅವಟಿ, ನಾಗಪ್ಪಣ್ಣ ಶಿವೂರ, ಗುರುನಾಥ ಮುರುಡಿ, ಬಿ.ಜಿ.ಮಠ, ಸಾಹೇಬಗೌಡ ದೊಡಮನಿ, ಬಿ.ಆರ್.ಪಾಟೀಲ, ವೆಂಕನಗೌಡ ಮೂಲಿಮನಿ, ಬಿ.ಎಸ್.ಪಾಟೀಲ, ಚನ್ನಪ್ಪಗೌಡ ಪಾಟೀಲ, ಸಿದ್ದಣ್ಣ ಉತ್ನಾಳ, ಶಂಕರಗೌಡ ನ್ಯಾಮಣ್ಣವರ, ಚಂದ್ರಾಮ ಪೂಜೇರಿ, ರವೀಂದ್ರ ಬಾಗೇವಾಡಿ, ಜಗದೀಶ ಡೇರೆದ, ಶರಣು ಪೂಜಾರಿ ಹಣಮಂತ್ರಾಯ ಬಿರಾದಾರ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.

