ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದಲ್ಲಿ ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಶುಕ್ರವಾರ ಆಗಮಿಸಿದ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ತರಕಾರಿ ಮಾರಾಟಗಾರರ ಕುರಿತು ತಹಶೀಲ್ದಾರ ಅವರ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಷ್ಟಿçÃಯ ರೈತಸಂಘದ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ತರಕಾರಿ ಮಾರಾಟಗಾರರು ಬಿಸಿಲು, ಮಳೆ, ಚಳಿಯೇನ್ನದೇ ವರ್ಷದುದ್ದಕ್ಕೂ ವಿಜಯಪುರ-ಕಲಬುರ್ಗಿ ಮಧ್ಯೆದ ರಾಷ್ಟ್ರೀಯ ಹೆದ್ದಾರಿ ೫೦ ರ ಪಕ್ಕದಲ್ಲಿ ಮಾರಾಟ ಮಾಡಲು ಕುಳಿತುಕೊಳ್ಳುತ್ತಾರೆ. ಇವರಿಂದ ವಾಹನ ಸಂಚಾರಕ್ಕೂ ಅಡತಡೆ ಜೊತೆಗೆ ಮಾರಾಟಗಾರರ ಜೀವಕ್ಕೂ ಅಪಾಯಕಾರಿ ಆದ್ದರಿಂದ ಅವರಿಗೆ ಸೂಕ್ತವಾದ ಮಾರುಕಟ್ಟೆ ಪ್ರದೇಶ ಅವಶ್ಯಕವಾಗಿದೆ. ಸ್ಥಳೀಯ ಹಾಗೂ ತಾಲ್ಲೂಕು ಆಡಳಿತ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಸನ್ ನಧಾಫ್, ರಾಜ್ಯ ರೈತಸಂಘದ ಯುವ ಸಂಚಾಲಕ ಸಿದ್ದನಗೌಡ ಪಾಟೀಲ ಮಾತನಾಡಿ, ರೈತ ಮಾರಾಟಗಾರರಿಗೆ ಅವಶ್ಯವಿರುವ ಮಾರುಕಟ್ಟೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

