Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ
(ರಾಜ್ಯ ) ಜಿಲ್ಲೆ

ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ಬೇಸಿಗೆ ಕಾಡುತ್ತಿರುವುದನ್ನು ಅರಿತು ಎಲ್ಲೆಡೆ ರಸ್ತೆ ಬದಿಗಳಲ್ಲಿ ಎಳನೀರು ಮಾರಾಟಗಾರರು ಕಳೆದ ವಾರದಿಂದ ಹೆಚ್ಚಾಗಿದ್ದು ತಾಲೂಕಿನ ಗ್ರಾಮೀಣ ಹಾಗೂ ವಿವಿಧೆಡೆಗಳಿಂದ ಎಳನೀರು ತಂದು ಮಾರಾಟ ನಡೆಸುತ್ತಿದ್ದಾರೆ. ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಎಳನೀರು ಮತ್ತು ಕಲ್ಲಂಗಡಿ ಹಣ್ಣಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ನಗರದ ಬಹುತೇಕ ಹಣ್ಣಿನ ಜ್ಯೂಸ್‌ ಸೆಂಟರ್‌ಗಳಲ್ಲಿಯೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅನೇಕ ರಸ್ತೆ ಬದಿಗಳಲ್ಲಿ ಎಳನೀರು, ಕಲ್ಲಂಗಡಿ, ಸೌತೆಕಾಯಿ ಮಾರಾಟದ ಭರಾಟೆ ಜೋರಾಗಿ ನಡೆಯುತ್ತಿದೆ. ಬಹುತೇಕ ರಸ್ತೆ ಬದಿಗಳಲ್ಲಿ ಎಳನೀರು ಮತ್ತು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಕಂಡು ಬರುತ್ತಿದ್ದಾರೆ.
ದಿನೇದಿನೆ ಹೆಚ್ಚುತ್ತಿರುವ ರಣ ಬಿಸಿಲು ಜನರನ್ನು ಕಂಗೆಡಿಸುತ್ತಿದ್ದು, ಇದರಿಂದ ಪಾರಾಗಲು ಎಳನೀರು , ಕಲ್ಲಂಗಡಿ, ಕಬ್ಬಿನ ಹಾಲು, ಮಜ್ಜಿಗೆ ಹಾಗೂ ಹಣ್ಣಿನ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಜಮಖಂಡಿ ಸೇರಿದಂತೆ ಕೋಟೆನಾಡಿನ ಪ್ರದೇಶಗಳಾದ ಮುಧೋಳˌ ಬೀಳಗಿˌ ಮಹಾಲಿಂಗಪೂರˌ ತೇರದಾಳˌ ರಬಕವಿ-ಬನಹಟ್ಟಿ ಸೇರಿದಂತೆ ಹಲವು ಕಡೆ ಬಿಸಿಲ ಕಾವು ಏರುತ್ತಿದೆ. ಈಗಾಗಲೇ ಬಿಸಿಲ ಹೊಡೆತಕ್ಕೆ ಕಂಗಾಲಾಗಿರುವ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮಧ್ಯಾಹ್ನದ ಸಂದರ್ಭದಲ್ಲಿ ಜನ ಸಂಚಾರ ವಿರಳವಾಗಿರುತ್ತದೆ. ಜನರು ಕಂಪನಿಯ ಕೂಲ್‌ ಡ್ರಿಂಕ್ಸ್‌ಗಳಿಗೆ ಹೆಚ್ಚು ಮೊರೆ ಹೋಗದೆ, ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ನಿಂಬೆ ಪಾನಕ, ಜೀರಾ ಸೋಡಾ, ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಮತ್ತಿತರ ಹಣ್ಣುಗಳಿಂದ ತಯಾರಾದ ತಂಪು ಪಾನೀಯಗಳನ್ನು ಕುಡಿದು ದಣಿವು ನೀಗಿಸಿಕೊಳ್ಳುತ್ತಿದ್ದಾರೆ. ನಗರದ ಅನೇಕ ರಸ್ತೆ ಬದಿಗಳಲ್ಲಿಎಳನೀರು, ಕಲ್ಲಂಗಡಿ, ಸೌತೆಕಾಯಿ ಮಾರಾಟದ ಭರಾಟೆ ಜೋರಾಗಿ ನಡೆಯುತ್ತಿದೆ. ಬಹುತೇಕ ರಸ್ತೆ ಬದಿಗಳಲ್ಲಿ ಎಳನೀರು ಮತ್ತು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಕಂಡು ಬರುತ್ತಿದ್ದಾರೆ. ಬೇಸಿಗೆ ಕಾಡುತ್ತಿರುವುದನ್ನು ಅರಿತು ಎಲ್ಲೆಡೆ ರಸ್ತೆ ಬದಿಗಳಲ್ಲಿ ಎಳನೀರು ಮಾರಾಟಗಾರರು ಕಳೆದ ವಾರದಿಂದ ಹೆಚ್ಚಾಗಿದ್ದು ತಾಲೂಕಿನ ಗ್ರಾಮೀಣ ಭಾಗಗಳಾಂದ ಹಾಗೂ ವಿವಿಧೆಡೆಗಳಿಂದ ಎಳನೀರು ತಂದು ಮಾರಾಟ ನಡೆಸುತ್ತಿದ್ದಾರೆ. ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಎಳನೀರು ಮತ್ತು ಕಲ್ಲಂಗಡಿ ಹಣ್ಣಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ನಗರದ ಬಹುತೇಕ ಹಣ್ಣಿನ ಜ್ಯೂಸ್‌ ಸೆಂಟರ್‌ಗಳಲ್ಲಿಯೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಹಣ್ಣು, ಎಳನೀರು ಮಾರಾಟದಲ್ಲಿ ಶೇ.75ರಷ್ಟು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಒಂದು ಎಳನೀರಿಗೆ 30 ರೂ.ನಿಂದ 40 ರೂಪಾಯಿಗಳವರೆಗೆ ಇದೆ. ಕಲ್ಲಂಗಡಿ ಬೆಲೆ ಕೆಜಿಗೆ 30 ರೂ.ಇದೆ. ಮುಂದಿನ ತಿಂಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವರ್ತಕರು.

ಮೂಲೆ ಸೇರಿದ್ದ ಕೊಡೆಗಳು ಹೊರಗೆ

ಮಳೆಗಾಲದ ನಂತರ ಮೂಲೆ ಸೇರಿದ್ದ ಕೊಡೆಗಳು ಈಗ ಹೊರಬರಲಾರಂಭಿಸಿವೆ. ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಕೊಡೆಗಳ ಮೊರೆ ಹೋಗಿದ್ದಾರೆ. ಪುರುಷರು ಕೂಡ ತಲೆಗೆ ಸ್ಕಾರ್ಫ್‌, ಹ್ಯಾಟ್‌ ಧರಿಸಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಬಾಯಾರಿಕೆ ಆಗುವ ಮೊದಲೇ ನೀರು ಕುಡಿದರೆ ಉತ್ತಮ

“ಬಿಸಿಲಿನ ತಾಪ ಹೆಚ್ಚಿರುವುದರಿಂದ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಬಾಯಾರಿಕೆ ಆಗುವ ಮೊದಲೇ ನೀರು ಕುಡಿದರೆ ಉತ್ತಮ. ವಿವಿಧ ಪಾನೀಯಗಳಿಗಿಂತ ನೀರನ್ನೇ ಹೆಚ್ಚು ಸೇವಿಸುವುದು ಒಳಿತು. ಎಳನೀರು, ಮಜ್ಜಿಗೆ, ಕಲ್ಲಂಗಡಿ ಇದರಿಂದ ಉಷ್ಣದ ಸಮತೋಲನ ಉಂಟಾಗುವುದು. ಆದಷ್ಟು ಹಣ್ಣಿನಿಂದ ತಯಾರಿಸಿದ ಪಾನೀಯ ಸೇವನೆ ಮಾಡುವುದಕ್ಕಿಂತ ಹಣ್ಣುಗಳನ್ನು ಹಾಗೆಯೇ ತಿನ್ನುವುದರಿಂದ ಬಿಸಿಲಿನ ದಾಹದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ.”

– ಡಾ.ಮುಕುಂದ ಕಾಂಬಳೆ
ವೈದ್ಯಾಧಿಕಾರಿ, ಚಿಕ್ಕಲಕಿ ಕ್ರಾಸ್

ಎಳನೀರು ಆರೋಗ್ಯಕ್ಕೆ ಹಿತಕರ

“ಇದನ್ನು ಕುಡಿಯುವುದರಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯುತ್ತದೆ. ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಿ, ದೇಹಕ್ಕೆ ತಂಪು ನೀಡುವ ಎಳನೀರು ಕೇವಲ ಪಾನೀಯವಲ್ಲ, ಇದೊಂದು ಆರೋಗ್ಯ ವೃದ್ಧಿಸುವ ಔಷಧ. ಬೇಸಿಗೆಯಲ್ಲಿ ನಿತ್ಯ ಒಂದನ್ನಾದರೂ ಸೇವಿಸುವ ಮೂಲಕ ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತೇವೆ.”

– ಸದಾಶಿವ ಪಡಸಲಗಿ
ಸ್ಥಳಿಯ ರೈತ

“ಕಂಪನಿ ಪಾನೀಯಗಳಲ್ಲಿ ಇಂಗಾಲದ ಡೈ ಆಕ್ಸೈಡ್‌ ಅಂಶ ಇರುವುದರಿಂದ ದಂತಗಳಿಗೆ ತೊಂದರೆಯಾಗುತ್ತದೆ. ಅತ್ಯಧಿಕ ಸೇವಿಸುವುದರಿಂದ ಡಯಾಬಿಟಿಸ್‌ ಬರುವ ಸಾಧ್ಯತೆ ಇದೆ. ದೇಹದ ಮೂಳೆ ಕೃಶವಾಗುತ್ತವೆ. ದೇಹದ ತೂಕ ಹೆಚ್ಚುತ್ತದೆ. ಬೊಜ್ಜು, ರಕ್ತದ ಒತ್ತಡ ಹೆಚ್ಚುತ್ತದೆ. ಪ್ರತಿಯೊಬ್ಬರು ಸಹ ದೇಸಿಯ ಪದಾರ್ಥಗಳಾದ ಎಳನೀರು, ಮಜ್ಜಿಗೆ, ಹಣ್ಣಿನ ಪಾನೀಯಗಳನ್ನು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು.”

– ಸಾವಿತ್ರಿ ನ್ಯಾಮಗೌಡ
ಸ್ಥಳಿಯರು.

BIJAPUR NEWS bjp public public news Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ

ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ಲಭ್ಯ :ಡಾ.ಮುಕುಂದ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ತಿಕೋಟಾ ಭಾಗದ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ 
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ
    In (ರಾಜ್ಯ ) ಜಿಲ್ಲೆ
  • ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ಲಭ್ಯ :ಡಾ.ಮುಕುಂದ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ :ಮಹಾಲಿಂಗ ಶ್ರೀ
    In (ರಾಜ್ಯ ) ಜಿಲ್ಲೆ
  • ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವಂತೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಖೋಖೊ ದೈಹಿಕ ಸದೃಡತೆಯನ್ನು ಉತ್ತೇಜಿಸುವ ಸಾಂಪ್ರದಾಯಿಕ ಕ್ರೀಡೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಎಂದರೆ ತನ್ನದೇ ಆದ ಹೆಜ್ಜೆಯಲ್ಲಿ ನಡೆಯುವವಳು :ಭಾಗ್ಯಶ್ರೀ
    In (ರಾಜ್ಯ ) ಜಿಲ್ಲೆ
  • ಪಪೂ ಕಾಲೇಜು ಮಂಜೂರಾತಿಗೆ ಸಚಿವರಿಗೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.