Author: editor.udayarashmi@gmail.com

ದೇವರಹಿಪ್ಪರಗಿ: ಕರ್ನಾಟಕ ಸಂಭ್ರಮ-೫೦ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಜ್ಯೋತಿ ಹೊತ್ತ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ಬಿಳ್ಕೊಡಲಾಯಿತು.ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ಭಾನುವಾರ ತಾಲ್ಲೂಕು ಆಡಳಿತದ ಪರವಾಗಿ ಭವ್ಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪೀರ್ ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆ ಮಡಿವಾಳ ಮಾಚಿದೇವ ದೇವಸ್ಥಾನ, ಮೊಹರೆ ಹಣಮಂತ್ರಾಯ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತ ತಲುಪಿತು.ಅಂಬೇಡ್ಕರ್ ವೃತ್ತದಲ್ಲಿ ಸಭೆ ಜರುಗಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ತಿಳಿಸಿದರು.ಸ್ಥಳೀಯ ವಿವಿಧ ಮಠಗಳ ಶ್ರೀಗಳ ಉಪಸ್ಥಿತಿಯಲ್ಲಿ ಸದಯ್ಯನಮಠದ ವೀರಗಂಗಾಧರಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ…

Read More

ವಿಜಯಪುರ: ನಮ್ಮ ಹಿರಿಯರು ಜಾನಪದ ಸಂಸ್ಕೃತಿಯಲ್ಲಿ ಬದುಕು ಕಟ್ಟಿಕೊಂಡು ಇಂದು ನಮಗೆಲ್ಲ ವಿಶಾಲವಾದ ಮತ್ತು ಮೌಲ್ಯಯುತವಾದ ಸಂಸ್ಕೃತಿಯನ್ನು ಬಿಟ್ಟುಹೋಗಿದ್ದಾರೆ. ಇಂದು ಜಾನಪದ ಸಂಸ್ಕೃತಿಯನ್ನು ಮುರಿದು ಕಟ್ಟಬೇಕಾದ ಅವಶ್ಯಕತೆಯಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಅಭಿಪ್ರಾಯಪಟ್ಟರು.ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳದ ನೀಲಕಂಠೇಶ್ವರ ದೇವಾಲಯದಲ್ಲಿ ಕನ್ನಡ ಜಾನಪದ ಪರಿಷತ್ ಹಿರೇಮುರಾಳ ವಲಯ ಘಟಕ ಉದ್ಘಾಟನೆ ಮಾಡಿ ಮಾತನಾಡುತ್ತಾ, ಸರಕಾರ ಜಾನಪದ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ಮಾಡಿದೆ. ಆದರೆ ಜಾನಪದ ಸಂಸ್ಕೃತಿ ಉಳಿಯಲು ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ವಿಶ್ವವಿದ್ಯಾಲಯ ಗ್ರಾಮ ಮಟ್ಟಕ್ಕೆ ಇಳಿಯಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ( ಪಡಗಾನೂರ) ಜಿಲ್ಲೆಯಲ್ಲಿ ಕ ಜಾ ಪ ಕಲಾವಿದರ , ಸಾಹಿತಿಗಳ ಸೇವೆ ಮಾಡುತ್ತಾ, ಕಲಾವಿದರಿಗೆ ಮಾಶಾಸನ, ಪ್ರಶಸ್ತಿ, ಸನ್ಮಾನ, ಮತ್ತು ಇಲಾಖೆಯ ನೆರವು ಒದಗಿಸುವ ಮೂಲಕ ಜಾನಪದ ಸಂಸ್ಕೃತಿ ಜೀವಂತವಾಗಿಡಲಾಗಿದೆ. ಹಿರೇಮುರಾಳ ವಲಯದಲ್ಲಿ ಇಂದಿನಿಂದ ಗಿರೀಶ…

Read More

ಮುದ್ದೇಬಿಹಾಳ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು ನಮ್ಮ ಕ್ಷೇತ್ರದಲ್ಲಿ ಅತೀ ಹೆಚ್ಚಿದೆ. ನಾನು ಶಾಸಕನಾಗಿದ್ದಾಗ ಎಲ್ಲ ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡಿದ್ದೆ. ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲ ಹಳ್ಳಿಗಳ ಕೆರೆಗಳಲ್ಲಿ ಯಾವಾಗಲೂ ನೀರು ತುಂಬಿರುತ್ತಿತ್ತು. ಇದರಿಂದ ಸುತ್ತಮುತ್ತಲಿನ ಅಂತರ್ಜಲ ಜಾಸ್ತಿಯಾಗಿರುತ್ತಿತ್ತು. ಇದರಿಂದ ಸುತ್ತು ಹಳ್ಳಿಗಳಿಗೆ ಅನುಕೂಲವಾಗಿ ರೈತರಲ್ಲಿ ವಿಶ್ವಾಸ ಮೂಡಿತ್ತು. ಆದರೆ ಇವತ್ತು ಚಿಮ್ಮಲಗಿ ಪೂರ್ವ ಕಾಲುವೆಗೆ ನೀರನ್ನೇ ಬಿಟ್ಟಿಲ್ಲ. ಸ್ವಲ್ಪ ಮಾತ್ರ ಬಿಟ್ಟಿದ್ದು ಇದರಿಂದ ಕೆರೆಗಳು ತುಂಬಲು ಸಾಧ್ಯವಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಸರ್ಕಾರಕ್ಕೆ ಅವಕಾಶವಿದೆ. ಈ ಅವಕಾಶ ತಪ್ಪಿದರೆ ೬-೭ ತಿಂಗಳು ನೀರು ತುಂಬಲು ಸಾಧ್ಯವಿಲ್ಲ. ಕಾರಣ ಈ ಕೂಡಲೇ ಪೂರ್ವ ಕಾಲುವೆಗೆ ನೀರು ಬಿಡುವ ಮೂಲಕ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.ಪಟ್ಟಣದ ತಮ್ಮ ಫಾರ್ಮಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಮಾಧ್ಯಮದ ವರದಿಗಳನ್ನು ಗಮನಿಸಿದ್ದೇನೆ. ಅಭಿವೃದ್ಧಿಯ ಕುರಿತು…

Read More

ಕೊಲ್ಹಾರ: ಸಮಾಜದಲ್ಲಿ ಇರುವ ಕುಟುಂಬ ವ್ಯವಸ್ಥೆಗಳ ಯಜಮಾನಿ ಮನೆಯನ್ನು ವಿದ್ಯಾಭ್ಯಾಸದ ಕೇಂದ್ರವನ್ನಾಗಿ ಪರಿವರ್ತನೆ ಮಾಡಿದರೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳನ್ನು ಉತ್ತಮ ಶಿಕ್ಷಣವಂತರನ್ನು ಸಮಾಜ ಸೇವಕರನ್ನು ಕೊಡಲು ಪ್ರೇರಣೆಯಾಗುತ್ತದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.ಪಟ್ಟಣದ ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ, ಶಾಲೆಯಲ್ಲಿ ಪಾಲಕರಿಗಾಗಿ ನಡೆದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಣೆ ‘ಹಳೆ ಬೇರು ಹೊಸ ಚಿಗುರು’ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ನಮ್ಮ ಮಾತೃ ಭಾಷೆ ಕನ್ನಡದ ಅಭ್ಯಾಸದ ಜೊತೆಗೆ ಆಂಗ್ಲ ಭಾಷೆಯನ್ನು ನಾವುಗಳು ಕಲಿಯುವದು ಅತೀ ಅವಶ್ಯಕವಾಗಿದ್ದು ಕನ್ನಡವನ್ನು ಅಧ್ಯಯನ ಮಾಡಿ ಅನ್ಯ ಭಾಷೆಯನ್ನು ಪ್ರೀತಿಸೋಣ ತತ್ವದ ಅಡಿ ನಡೆಯಬೇಕಾಗಿದೆ ಎಂದರು.ಪಟ್ಟಣದ ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ತಮ್ಮ ಮಾತೃ ಭಾಷೆಯ ಜೊತೆಗೆ ಇಂಗ್ಲೀಷ ಬೋಧನೆಯನ್ನು ತದೇಕಚಿತ್ತದಿಂದ ಆಲಿಸಿ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಶೀಲವಂತ ಮಠದ ಕೈಲಾಸನಾಥ ಶ್ರೀಗಳು,…

Read More

ಬಸವನಬಾಗೇವಾಡಿ: ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಮ್ಮಿಕೊಂಡ ಶೋಷಿತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತ ಸಮುದಾಯದಿಂದ ಬಂದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಗ್ಗೆ ಕೀಳು ಭಾಷೆ ಬಳಸಿರುವುದು ಖಂಡನೀಯವಾಗಿದೆ. ಮುಖ್ಯಮಂತ್ರಿ ಅವರಿಗೆ ಘನತೆ ತರುವ ವಿಷಯವಲ್ಲ ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯನವರು ನಾನು ಸಂವಿಧಾನದ ಪರಿಪಾಲಕ, ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಂಡು ಭಾಷಣ ಮಾಡುವ ಇವರು ದೇಶದ ಘನವೆತ್ತ ರಾಷ್ಟ್ರಪತಿಗಳಿಗೆ ಅಸಂವಿಧಾನಿಕವಾಗಿ ಮಾತನಾಡುವುದು ಖಂಡನೀಯವಾಗಿದೆ. ಎಲ್ಲರನ್ನೂ ಪ್ರೀತಿಯಿಂದ ಕಂಡ ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಳ್ಳುವ ನೀವು ಈ ರೀತಿ ಮಾತನಾಡುವದು ಸರಿಯಾದ ಕ್ರಮವಲ್ಲ. ಇದು ಮಹಿಳಾ ವಿರೋಧಿ ಧೋರಣೆಯಾಗಿದೆ.ತಾವು ಗ್ರಾಮೀಣ ಪ್ರದೇಶದ ಬಂದವರಾಗಿದ್ದು. ಹಿರಿಯರಿಗೆ ಈ ರೀತಿ ಮಾತನಾಡುವುದು ಸ್ವಾಭಾವಿಕ ಎಂದು ಹೇಳಿರುವುದು ತೀರಾ ಅಕ್ಷಮ್ಯ ಅಪರಾಧವಾಗಿದೆ. ತಾವು ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಬಲ್ಲವರು ಈ ರೀತಿ ಮಾತನಾಡುವುದು ಸರಿಯೇ ಎನ್ನುವುದನ್ನು…

Read More

ತಿಕೋಟಾ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಾಳ್ಮೆ ಹಾಗೂ ಶೃದ್ದೆಯಿಂದ ಓದಿದರೆ ಜೀವನದಲ್ಲಿ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಎಂದು ವಿಜಯಪುರ ಡಿವೈಎಸ್ಪಿ ಧೂಳಪ್ಪ ಎಸ್. ಧನಗರ ಹೇಳಿದರು.ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ರವಿವಾರ ಸಂಜೆ ಕೌಲಗುಡ್ಡದ ಸಿದ್ದಶ್ರೀ ಸಂಸ್ಥೆಯ ಕರಿಯೋಗಸಿದ್ದ ಪ್ರಾಥಮಿಕ ಶಾಲೆ ಹಾಗೂ ಸಿದ್ದರತ್ನ ಪ್ರೌಢ ಶಾಲೆಯ ದಶಮಾನೋತ್ಸವ ನಿಮಿತ್ಯ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಕಾರಾತ್ಮಕ ಚಿಂತನೆಗಳನ್ನು ದೂರಮಾಡಿ ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುತ್ತದೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರಬೇಡಿ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಗುರಿ ಮುಟ್ಟುವವರೆಗೆ ಪ್ರಯತ್ನ ನಿಲ್ಲಬಾರದು ಆಗ ಯಶಸ್ಸು ಸಿಗುತ್ತದೆ ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಜೀವನದಲ್ಲಿ ಸೋಮಾರಿತನ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಾಗುವದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೆಯವಾಗಿದೆ. ಯಾವಾಗಲೂ ಮಕ್ಕಳ ಬಾಳಿಗೆ ಬೆಳಕಾಗುತ್ತೇನೆ. ಮಕ್ಕಳಿಗೆ…

Read More

ಆಲಮಟ್ಟಿ: ನಿಡಗುಂದಿ ತಾಲ್ಲೂಕಿನ ವಂದಾಲ ಗ್ರಾಮದ ಶಕ್ತಿ ದೇವತೆ ಬನಶಂಕರಿ ದೇವಿಯ ರಥೋತ್ಸವ ಸೋಮವಾರ ಸಂಜೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜ್ರಂಭನೆಯಿಂದ ಜರುಗಿತು.ಈ ವೇಳೆ ನೆರೆದಂತ ಸಹಸ್ರಾರು ಭಕ್ತಗಣ ಬನಶಂಕರಿ ನಿನ್ನ ಪಾದಕ್ಕೆ ಶಂಬೂಕೋ ಎಂದು ಜಯಘೋಷ ಮೊಳಗಿಸುತ್ತ ಹಣ್ಣು, ಕಾಯಿ, ಉತ್ತತ್ತಿ, ಬತ್ತಾಸುಗಳನ್ನು ಮಹಾರಥದ ಮೇಲೆ ತೂರುತ್ತ ಭಕ್ತಿ ಭಾವದಿಂದ ನಮಿಸಿ ಭವ್ಯ ಉತ್ಸವವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುಂಚೆ ನೂರಾರು ಭಕ್ತರು ಬೆಳಗಿನ ಜಾವ ಪಾದಗಟ್ಟಿಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ನೈವೇದ್ಯವನ್ನು ಅರ್ಪಿಸಿ ಕೃತಾರ್ಥಭಾವ ಮೆರೆದರು. ಗ್ರಾಮದ ಎಲ್ಲಾ ಜಾತಿ ಜನಾಂಗದವರು ಸೇರಿ ಜಾತ್ರಾ ಮಹೋತ್ಸವದ ವಿವಿಧ ಬಾಬತ್ತಿನ ಕಾರ್ಯಗಳನ್ನು ನಿರ್ವಹಿಸಿದರು.ರಾತ್ರಿ ಹೂಮಾಲೆಯ ಮೆರವಣಿಗೆಯ ನಂತರ ೯ ಗಂಟೆಗೆ ಹುಣಶ್ಯಾಳ-ಪಿಸಿ ಗ್ರಾಮದ ಕೆಂಧೂಳಿ ಸಂಗೀತ ಸಪ್ತಸ್ವರ ಸಿಂಚನ ಬಳಗದ ವತಿಯಿಂದ ರಸಮಂಜರಿ ಕಾರ್ಯಕ್ರಮ, ಶಾಂಭವಿ ಕುಲಕರ್ಣಿ ಅವರಿಂದ ಕಥಕ್ ಜಾನಪದ ನೃತ್ಯ ಪ್ರದರ್ಶನಗೊಂಡಿತು.

Read More

ಆಲಮಟ್ಟಿ: ಗುರುವಂದನಾ ಕಾರ್ಯಕ್ರಮ ನಡೆಸಲು, ಶಿಕ್ಷಣ ಜತೆಗೆ ದೊರೆತ ಉತ್ತಮ ಸಂಸ್ಕಾರವೇ ಕಾರಣ ಎಂದು ನಿವೃತ್ತ ಶಿಕ್ಷಕ ಎಸ್.ಐ. ಹರಣಶಿಕಾರಿ ಅಭಿಪ್ರಾಯಪಟ್ಟರು.ಇಲ್ಲಿಯ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೯೯೪-೯೫ ನೇ ಸಾಲಿನಲ್ಲಿ ೭ ನೇ ವರ್ಗ ಪಾಸಾದ ಹಾಗೂ ೧೯೯೭-೯೮ ನೇ ಸಾಲಿನಲ್ಲಿ ಎಂಎಚ್ ಎಂ ಪ್ರೌಡಶಾಲೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿದ್ಯಾರ್ಥಿಗಳ ಅದಮ್ಯ ಪ್ರೀತಿ ಮತ್ತು ಶಿಕ್ಷಕರ ಅವಿನಾಭಾವ ಸಂಬಂಧ ವರ್ಣಿಸಲಸಾಧ್ಯ ಎಂದರು.ಹಿಂದೆ ತಾವು ಮಾಡಿದ ಕರ್ಮದ ಪರಿಣಾಮವೇ ಈಗ ನೀವು ಅನುಭವಿಸುತ್ತಿರುವ ಜೀವನ, ಹೀಗಾಗಿ ಸದಾ ಒಳ್ಳೆಯದನ್ನೇ ಮಾಡಿ, ಒಳ್ಳೆಯದನ್ನೇ ಬಯಸಿ, ಇದೇ ಬದುಕಿನ ಯಶಸ್ಸಿನ ಮಂತ್ರ ಎಂದರು.ನಿವೃತ್ತ ಶಿಕ್ಷಕರಾದ ವಿ.ಎ. ಭಾಂಡವಳಕರ, ಸಿ.ಎಸ್. ಕಣಕಾಲಮಠ, ನೀಲಾಂಬಿಕಾ ಪಾಟೀಲ, ಕೆ.ಎಂ. ತಾಂಬೆ, ಪಿ.ಎಲ್. ಮಿಂಚನಾಳ ಮಾತನಾಡಿ, ಇಳಿ ವಯಸ್ಸಿನಲ್ಲಿ ತಾವು ಮಾಡಿದ ಗುರುವಂದನೆಯಿಂದ ನಮಗೂ ಒಂದು ಟಾನಿಕ್ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು. ಹಳೆ ವಿದ್ಯಾರ್ಥಿಗಳಾದ ಸದಾನಂದ ಗುಡಗುಂಟಿ, ಮಹೇಶ…

Read More

ಮುದ್ದೇಬಿಹಾಳ: ರಾಜ್ಯದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಸಿ.ಎಸ್.ನಾಡಗೌಡರನ್ನು ನಿಗಮದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ.ವಿಜಯಕರ, ತಾಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್ ಚಲವಾದಿ, ಗುತ್ತಿಗೆದಾರ ವಾಯ್.ವಾಯ್.ಚಲವಾದಿ, ವೀರೇಶ್ ಭಜಂತ್ರಿ, ಶರಣು ಚಲವಾದಿ, ಶೇಕು ಕಟ್ಟಿಮನಿ, ಭೀಮಣ್ಣ ಬಿಜ್ಜೂರ, ಸಿದ್ದು ಕಟ್ಟಿಮನಿ, ಲಕ್ಷ್ಮಣ ಚಲವಾದಿ, ಮಲ್ಲಪ್ಪ ಮುದ್ನಾಳ, ಸಂಗಪ್ಪ ವಿಜಯಕರ, ಯಲ್ಲಪ್ಪ ನಾಗರಬೆಟ್ಟ ಸೇರಿದಂತೆ ಮತ್ತೀತರರು ಇದ್ದರು.

Read More

ನಿಡಗುಂದಿ: ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ಆಯುರ್ವೇದ ತಜ್ಞ ಡಾ.ಹನಮಂತ ಮಲಾಲಿ ಹೇಳಿದರು.ಪಟ್ಟಣದ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ವಸ್ತುವಿಗೂ ಸಂಸ್ಕಾರ ಕೊಟ್ಟರೆ ಉತ್ತಮ ಫಲದೊರೆಯಲಿದೆ ಎಂದರು.ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ರೇಣುಕಾ ಅಕ್ಕ ಮತ್ತು ಎಂ ಬಿ ಹಿರೇಮಠ ಜಂಟಿಯಾಗಿ ಉದ್ಘಾಟಿಸಿದರು,ಜ್ಯೋತಿರ್ಲಿಂಗ ಹೊನ್ನಕಟ್ಟಿ ಮಾತನಾಡಿ, ಶಾಲೆಗಳು ಜೀವಂತ ದೇವಾಲಯಗಳು ದೇವರು ಎಲ್ಲಾ ಭಕ್ತರಿಂದ ಕೈ ಮುಗಿಸಿಕೊಳ್ಳಬೇಕಾದರೆ ಪಾಲಕ, ಪೋಷಕ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶಾಲೆಯಲ್ಲಿ ಕಲಿತ ಮಕ್ಕಳು ಉತ್ತಮ ಸಮಾಜ ನಿರ್ಮಾಣ ಮತ್ತು ದೇಶಕ್ಕೆ ಒಳ್ಳೆಯ ಕೀರ್ತಿ ತರುವಂತಹ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ಶಿಕ್ಷಣ ಜೊತೆಗೆ ಸಂಸ್ಕಾರ ಮುಖ್ಯ ಮತ್ತು ಆರೋಗ್ಯ ಕ್ರೀಡೆ ಮಕ್ಕಳಿಗೆ ಅವಶ್ಯವಾಗಿದೆ ಎಂದು ಹೇಳಿದರು,ಸುಜ್ಞಾನ ನ್ಯಾಷನಲ್ ಪಬ್ಲಿಕ್ ಶಾಲೆ ಸಂಸ್ಥಾಪಕ ಪ್ರಾಣೇಶ್ ಜೋಶಿ ಮಾತನಾಡಿದರು.ಎಂ ಬಿ ಹಿರೇಮಠ, ಡಾ.ಹನುಮಂತ ಮಲಾಲಿ, ಜ್ಯೋತಿರ್ಲಿಂಗ ಹೊನ್ನ ಕಟ್ಟಿ, ಅನಿಲ್ ಜೋಶಿ, ಸರೋಜಾ…

Read More