ವಿಜಯಪುರ: ಲೋಕಸಭಾ ಚುನಾವಣೆ ನಿಮಿತ್ತ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರು ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ವರ್ತಕರ ಸಭೆ ನಡೆಸಿ ವಿವಿಧ ವರ್ತಕರ ಸಂಘಸಂಸ್ಥೆಗಳ ಸದಸ್ಯರಲ್ಲಿ ಈ ಬಾರಿ ತಮಗೆ ಬೆಂಬಲಿಸಿ ಬಿಜೆಪಿ ಪರ ಮತ ಹಾಕುವಂತೆ ಕೋರಿದರು.
ಈ ವೇಳೆ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆ ಸಾಕಷ್ಟಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ 5 ನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಬಾರಿ ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬಂದರೆ ಭಾರತವನ್ನು ವಿಶ್ವದ 3 ನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರ ಮಾಡುವುದರೊಂದಿಗೆ ವಿಕಸಿತ ಭಾರತ ಮಾಡುವ ಸಂಕಲ್ಪ ಮೋದಿ ತೊಟ್ಟಿದ್ದಾರೆ. ನಾನು ಬಹುವರ್ಷಗಳಿಂದ ವರ್ತಕರ ಸಂಘಸಂಸ್ಥೆಗಳಿಗೆ ಅವಕಾಶ ಬಂದಾಗಲೆಲ್ಲಾ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಎಲ್ಲಾ ಮಾರುಕಟ್ಟೆ ವರ್ತಕರು, ವ್ಯಾಪಾರಸ್ಥರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದೇನೆ. ತಾವೆಲ್ಲಾ ಈ ಹಿಂದೆ ನನ್ನನ್ನು ಬೆಂಬಲಿಸಿದಂತೆ ಈ ಬಾರಿಯೂ ಬೆಂಬಲಿಸಿ ಮತ ಹಾಕುವ ಮೂಲಕ ಶಕ್ತಿ ತುಂಬಬೇಕು ಎಂದು ಜಿಗಜಿಣಗಿ ವರ್ತಕರಲ್ಲಿ ಮತಯಾಚನೆ ಮಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನೆಗಳು, ಜನಪರ ಹಾಗೂ ವ್ಯಾಪಾರ ವಾಣಿಜ್ಯೋದ್ಯಮ ಉತ್ತೇಜನದ ಕಾರ್ಯಗಳ ಬಗ್ಗೆ ಮಾತನಾಡಿ ಬಿಜೆಪಿ ಪರ ಬೆಂಬಲಿಸುವಂತೆ ಕೋರಿದರು.
ಸಭೆಯಲ್ಲಿ ನಗರದ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ರವಿಂದ್ರ ಬಿಜ್ಜರಗಿ, ಕಿರಾಣಾ ಬಜಾರ ಅಸೋಸಿಯೇಷನ್ ಅಧ್ಯಕ್ಷ ಲಾಲಾ ಶೇಠ, ಅಟೋಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಗುರುಶಾಂತ್ ನಿಡೋಣಿ, ಕ್ಲಾಥ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಗೋಕುಲ ಮಹಿಂದ್ರಕರ, ರಸಗೊಬ್ಬರ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಕೋರಿ, ಆಯಿಲ್ ವೀಲ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ನಿಡೋಣಿ, ಗ್ರಾಮೊದ್ಯೋಗ ಸಂಸ್ಥೆಯ ಸಿದ್ದಣ್ಣ ಸಜ್ಜನ, ಅಡತ ಬಜಾರ ಕಾರ್ಯದರ್ಶಿ ಅಮಲ ತೋನಶ್ಯಾಳ, ಪೇಟ್ರೋಲಿಯಂ ವ್ಯಾಪಾರಸ್ಥರಾದ ಅರುಣ ಹುಂಡೇಕರ ಹಾಗೂ ಗಣ್ಯ ವ್ಯಾಪಾರಸ್ಥರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಂಗಾಧರ ಜೋಗುರ, ಚಂದ್ರಶೇಖರ ಬಳಾಗಾನೂರ, ನೀಲೇಶ ಶಾಹಾ, ಜಯಾನಂದ ತಾಳಿಕೋಟಿ, ಪ್ರವೀಣ ವಾರದ, ಮನೋಜ ಬಗಲಿ, ಅಶೋಕ ಮಸಳಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

