ಮುದ್ದೇಬಿಹಾಳ: ಚಿಮ್ಮಲಗಿ ಏತ ನೀರಾವರಿ ಕಾಲುವೆ ಕಾಮಗಾರಿ ಸನ್ ೨೦೧೩ ರಿಂದ ಪ್ರಾರಂಭವಾಗಿದ್ದರೂ ಪೂರ್ಣಗೊಂಡಿಲ್ಲ. ರಸ್ತೆಯ ಒಂದೇ ಬದಿಯಲ್ಲಿ ನೀರು ಹರಿಯುತ್ತಿದ್ದು ಇನ್ನೊಂದು ಬದಿಯ ರೈತರಿಗೆ ಈ ಯೋಜನೆ ತಲುಪಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು ತಾಲೂಕಿನ ನಾಲತವಾಡ ಬಳಿಯ ಅಮರೇಶ್ವರ ದೇವಸ್ಥಾನದ ತಿರುವಿಗೆ ಕಾಲುವೆ ನಿರ್ಮಿಸುವ ಮೂಲಕ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟಗಾರ ಶಿವಾನಂದ ವಾಲಿ ಪಟ್ಟಣದ ಹುಡ್ಕೋದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ (ಎ.ಎಲ್.ಬಿ.ಸಿ) ಸಹಾಯಕ ಅಭಿಯಂತರರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯ ಎರಡು ಬದಿಗಳಲ್ಲಿ ಕಾಲುವೆ ನಿರ್ಮಿಸಿದ್ದಾರೆ. ಆದರೆ ಒಂದನ್ನೊಂದು ಸೇರಿಸುವ ಪ್ರಮುಖ ಕಾಮಗಾರಿಯನ್ನೇ ಕೈಗೊಂಡಿಲ್ಲ. ಹನ್ನೊಂದು ವರ್ಷಗಳು ಗತಿಸಿದರೂ ಈ ಎರಡೂ ಕಾಲುವೆಗಳನ್ನು ಸೇರಿಸುವ ಇಚ್ಛೆ ಈ ಅಧಿಕಾರಿಗಳಿಗೆ ಇಲ್ಲ. ಇದರಿಂದ ಅಂದಾಜು ೫೦೦ ಎಕರೆ ಭೂಮಿಯ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ರಸ್ತೆಯ ಈ ಬದಿಗೆ ಕಾಲುವೆ ಸೇರಿಸಲು ಮುಂದಾಗಬೇಕು ಇಲ್ಲವಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

