Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ ಜಿಲ್ಲೆಯಲ್ಲಿ ವಿಶೇಷ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ | 61.770 ಕೆ.ಜಿ ಗಾಂಜಾ ವಶಕ್ಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತವಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಜೂನ್ 1ರಿಂದ ಜೂನ್ 16, 2026ರವರೆಗೆ ವಿಶೇಷ ಡ್ರೈವ್ ನಡೆಸಿ, ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಪೊಲೀಸರ ಕಾರ್ಯಾಚರಣೆಯಲ್ಲಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 7 ಪೆಡ್ಲರ್‌ಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, 61.770 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ₹15.78 ಲಕ್ಷ ಎಂದು ತಿಳಿಸಿದ್ದಾರೆ.ಪೆಡ್ಲರ್‌ಗಳ ವಿರುದ್ಧಸಿಂದಗಿ ಠಾಣೆ ವ್ಯಾಪ್ತಿಯಲ್ಲಿ 34.400 ಕೆ.ಜಿ. ಗಾಂಜಾ ಪತ್ತೆ, ಮನಗೂಳಿ ಠಾಣೆ ವ್ಯಾಪ್ತಿಯಲ್ಲಿ 15.060 ಕೆ.ಜಿ. ಗಾಂಜಾ ವಶ, ಗೋಳಗುಮ್ಮಟ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಹಕಾರ ಸಂಘಗಳು ನಿಯಮಾನುಸಾರ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿರುವ ಸಹಕಾರ ಸಂಘಗಳನ್ನು ಪುನಶ್ಚೇತನ-ರದ್ಧತಿ ಮಾಡಲು ಕ್ರಮವಹಿಸಲಾಗುತ್ತಿದ್ದು, ಈ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರು ಆಕ್ಷೇಪಣೆಗಳನ್ನು ಆಹ್ವಾನಿಸದ್ದಾರೆ.ಜಿಲ್ಲೆಯ ಭಾರತ ಮುದ್ರಣಾಲಯ ಸಹಕಾರ ಸಂಘ ನಿ., ವಿಜಯಪುರ, ಜಾಪೂರ ಬ್ರಿಕ್ಸ್ ಮತ್ತು ಟಾಯಿಲ್ಸ್ ಕೂಲಿಕಾರರ ಸಹಕಾರ ಸಂಘ ನಿ., ವಿಜಯಪುರ, ಶ್ರೀ ಸಿದ್ದೇಶ್ವರ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿ.,ವಿಜಯಪುರ ಹಾಗೂ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಗ್ಯಾಂಗಬಾವಡಿ, ವಿಜಯಪುರ ಸಂಘಗಳು ದೀರ್ಘಕಾಲದಿಂದ ಸ್ಥಗಿತ ಅಥವಾ ಸಮಾಪನೆಗೊಂಡಿದ್ದು, ಕಾರ್ಯ ನಿರ್ವಹಿಸದೇ ಇರುವುದಾಗಿ ತಿಳಿದು ಬಂದಿದೆ.ಅಂತಿಮವಾಗಿ ಈ ಪ್ರಕಟಣೆಗಳ ಮೂಲಕ ಆಕ್ಷೇಪಣೆ, ಹೇಳಿಕೆಗಳನ್ನು ಆಹ್ವಾನಿಸಲಾಗಿದ್ದು, ಏಳು ದಿನಗಳೊಳಗಾಗಿ ಖುದ್ದಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಹಾಜರಾಗಿ,ತಮ್ಮ ಹೇಳಿಕೆ ದಾಖಲೆ ಸಲ್ಲಿಸುವಂತೆ ವಿಜಯಪುರದ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜೂ.೧೭ ರಿಂದ ೨೬ ರವರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೊಹರಂ ಹಬ್ಬ ಆಚರಣೆಯನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜೂನ್ ೧೭ ರಿಂದ ೨೬ ರವರೆಗೆ ಮೊಹರಂ ಹಬ್ಬ ಆಚರಣೆ ನಿಷೇಧಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ೨೦೨೫-೨೬ನೇ ಸಾಲಿನಿಂದ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರ ರಕ್ಷಣೆ ಹಾಗೂ ನೆರವಿಗಾಗಿ ವೃದ್ಧಾಶ್ರಮಗಳನ್ನು ನಡೆಸಲು ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ರಸ್ತೆ, ವಿಜಯಪುರ ಕಚೇರಿಯಿಂದ ಜೂನ್ ೨೫ರವರೆಗೆ ಅರ್ಜಿ ಸಮಾಜ ಕಲ್ಯಾಣ ಇಲಖೆಯ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಸಹಿತ ಜೂನ್ ೩೦ರೊಳಗೆ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ,ವಿಜಯಪುರ ಇವರ ಕಚೆರಿಗೆ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರಿಗೆ ಇಲಾಖೆಯಲ್ಲಿ ೧೯೯೧-೯೨ ರಿಂದ ೨೦೨೧-೨೨ (೩೧-೦೩-೨೦೨೨)ರವರೆಗೆ ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಗೆ ಸಂಬAಧಿಸಿ ದಾಖಲಾಗಿರುವ ಮತ್ತು ಬಾಕಿ ಉಳಿದಿರುವ ಡಿ.ಎಸ್.ಎ. (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ ರಿಯಾಯಿತಿ ನೀಡಲಾಗಿದೆ. ಬಾಕಿ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ಅವಕಾಶ ಕಲ್ಪಿಸಲಾಗಿದ್ದು,ದಿನಾಂಕ:೨೧-೦೬-೨೦೨೬ರಿಂದ ೧೦-೦೭-೨೦೨೬ರವರೆಗೆ ಪ್ರಕರಣಗಳನ್ನು ಇತ್ಯರ್ತಪಡಿಸಿಕೊಳ್ಳಲು ಕಾಲಾವಕಾಶ ಕಲ್ಪಿಸಲಾಗಿದೆ.ಈ ಅವಧಿಯಲ್ಲಿ ವಾಹನ ಮಾಲೀಕರು ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದ ಶೇ.೫೦ರಷ್ಟು ಹಣವನ್ನು ಪಾವತಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ದಂಡದ ಮೊತ್ತ ಪಾವತಿಸಲು ಯಾವುದೇ ಆನ್‌ಲೈನ್ ವ್ಯವಸ್ಥೆ ಅಥವಾ ಲಿಂಕ್ ಇರುವುದಿಲ್ಲ. ವಾಹನ ಮಾಲೀಕರು ಕಚೇರಿ ಅವಧಿಯಲ್ಲಿ ಸಂಬಂಧಿಸಿದ ಸಾರಿಗೆ ಕಚೇರಿಗೆ ಭೇಟಿ ನೀಡಿ, ನಗದು ಕೌಂಟರ್‌ನಲ್ಲಿ ದಂಡದ ಮೊತ್ತವನ್ನು ಪಾವತಿಸಿ ಅಧಿಕೃತ ರಸೀದಿ ಪಡೆದು ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು. ವಾಹನ ಮಾಲೀಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ವಯ ೨೦೨೬ ನೇ ಮೇ ಹಾಗೂ ಜೂನ್ ತಿಂಗಳಿಗೆ ಸಂಬಂಧಿಸಿದ ಪಡಿತರ ಅಕ್ಕಿಯನ್ನು ಹಿಂದಿನ ತಿಂಗಳು ಮೇ ತಿಂಗಳಲ್ಲಿ ವಿತರಣೆ ಮಾಡಲಾಗಿರುತ್ತದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ೨೦೨೬ ನೇ ಮೇ ಹಾಗೂ ಜೂನ್ ಈ ಎರಡೂ ತಿಂಗಳಿಗೆ ಸಂಬಂಧಿಸಿದ ಅಕ್ಕಿ ಪ್ರತಿ ಸದಸ್ಯರಿಗೆ ೫ ಕೆಜಿಯಂತೆ ಎರಡೂ ತಿಂಗಳಿಗೆ ೧೦ ಕೆಜಿಯಂತೆ ಇದೇ ತಿಂಗಳು ನ್ಯಾಯ ಬೆಲೆ ಅಂಗಡಿವಾರು ಹಂಚಿಕೆ ಮಾಡಲಾಗಿದೆ.ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯಲ್ಲಿನ ೪ ಹಾಗೂ ಹೆಚ್ಚಿನ ಸದಸ್ಯರು ಇರುವ ಪಡಿತರ ಚೀಟಿದಾರರು ಎರಡೂ ತಿಂಗಳ ಎನ್‌ಎಫ್‌ಎಸ್‌ಎ ಹೊರತುಪಡಿಸಿ ಇನ್ನುಳಿದಂತೆ ಹಾಗೂ ಆಧ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ತಿಂಗಳು ಪ್ರತಿ ಸದಸ್ಯರಿಗೆ ೫ ಕೆಜಿಯಂತೆ ಒಟ್ಟು ೧೦ ಕೆಜಿ ಅಕ್ಕಿಯನ್ನು ಬಯೋಮೆಟ್ರಿಕ್ ನೀಡುವ ಮೂಲಕ ಪಡಿತರ ಚೀಟಿದಾರರು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಗ್ರಾಮ ಪಂಚಾಯತಿಗಳಿಗೆ ಚುನಾವಣಾ ಕ್ಷೇತ್ರ ವ್ಯಾಪ್ತಿ, ಸ್ಥಾನ ನಿಗದಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-೨೦೨೬ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ ರ ಪ್ರಕರಣ ೫ ರಂತೆ ಗ್ರಾಮ ಪಂಚಾಯತಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಮತ್ತು ಸ್ಥಾನಗಳ ನಿಗದಿಪಡಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ.ಜಿಲ್ಲೆಯಲ್ಲಿ ಹೊಸದಾಗಿ ರಚನೆ ಮತ್ತು ಪುನರ್‌ರಚನೆಯಾದ ಗ್ರಾಮ ಪಂಚಾಯತಿಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಮತ್ತು ಸ್ಥಾನಗಳನ್ನು ನಿಗದಿಪಡಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಜೂ. ೨೩ರೊಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ.ವಿಜಯಪುರ ತಾಲೂಕಿನ ಐನಾಪುರ, ಜುಮನಾಳ ಮತ್ತು ಹೊನಗನಹಳ್ಳಿ, ನಿಡಗುಂದಿ ತಾಲೂಕಿನ ಗಣಿ ಆರ್.ಸಿ, ಬಸವನಬಾಗೇವಾಡಿ ತಾಲೂಕಿನ ವಡವಡಗಿ, ಕೊಲ್ಹಾರ ತಾಲೂಕಿನ ಅರಷಣಗಿ ಮತ್ತು ಸಿದ್ಧನಾಥ ಆರ್.ಸಿ,ತಾಳಿಕೋಟ ತಾಲೂಕಿನ ಸಾಸನೂರ, ಸಿಂದಗಿ ತಾಲೂಕಿನ ಚಾಂದಕವಟೆ, ಯರಗಲ್ ಬಿ.ಕೆ, ಗುತ್ತರಗಿ ಮತ್ತು ಗಬಸಾವಳಗಿ, ಆಲಮೇಲ ತಾಲೂಕಿನ ಗ್ರಾಮ ಪಂಚಾಯತಿಗಳ ಗ್ರಾಮ ಪಂಚಾಯತಿಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಮತ್ತು…
ವಿಜಯಪುರದಲ್ಲಿ ಪಶ್ಚಿಮ ಬಂಗಾಳ ಆದಾಯ ತೆರಿಗೆ ಇಲಾಖೆ ಮುಖ್ಯ ಪ್ರಧಾನ ಆಯುಕ್ತ ಶ್ರೀನಿವಾಸ ಬಿದರಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಲೆತಲಾಂತರದಿಂದ ಬಂದ ಆಸ್ತಿಗಳನ್ನು ನಮ್ಮ ಹಿರಿಯರು ದಾನ ನೀಡಿದ್ದರ ಫಲವಾಗಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಸತ್ಪ್ರಜೆಗಳನ್ನು ರೂಪಿಸಿವೆ ಎಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಮುಖ್ಯ ಪ್ರಧಾನ ಆಯುಕ್ತರಾಗಿರುವ ವಿಜಯಪುರದ ಶ್ರೀನಿವಾಸ ಬಿದರಿ ಹೇಳಿದರು.ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಆಯುಕ್ತರಿಂದ ಮುಖ್ಯ ಪ್ರಧಾನ ಆಯುಕ್ತರೆಂದು ಬಡ್ತಿ ಪಡೆದಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಅವರ ಸ್ನೇಹಿತರು, ಶಾಲಾ-ಕಾಲೇಜು ಸಹಪಾಠಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಜಯಪುರದ ದರ್ಬಾರ್, ಪಿಡಿಜೆ, ಬಿಡಿಇ, ಶ್ರೀ ಸಿದ್ದೇಶ್ವರ ಹೈಸ್ಕೂಲ್ ಎಲ್ಲವೂಗಳು ಸಹ 70-100 ವರ್ಷದ ಹಿಂದೆ ಅಂದಿನ ಹಿರಿಯರು ತಮ್ಮ ತಲೆ ತಲಾಂತರದ ಆಸ್ತಿಯನ್ನು ಈ ನಾಡಿನ ಮಕ್ಕಳ ಭವಿಷ್ಯ ಒಳಿತಾಗಲಿ ಎಂದು ದಾನವಾಗಿ ನೀಡಿದ್ದರು. ಅದರ ಫಲವಾಗಿ ಅಂತಹ ಸಂಸ್ಥೆಗಳಲ್ಲಿ ಕಲಿತ ನಮ್ಮಂಥವರು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಯಿತು. ಇದಕ್ಕೆ…
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದಿನ ಬೆಳಗಾದರೆ ಆರ್‌ಎಸ್‌ಎಸ್ ಜಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು ಸಂಘಟನೆಯನ್ನು ಟೀಕಿಸುವುದನ್ನು ನಿಲ್ಲಿಸಿ ಎಂದು ಸಿಂದಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಅವರು ಹರಿಹಾಯ್ದರು.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಆರ್‌ಎಸ್‌ಎಸ್ ದೇಶದ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ಶಿಸ್ತಿನ ದೇಶಭಕ್ತ ಸಂಘಟನೆ. ಇಂತಹ ಸಂಘಟನೆಯ ವಿರುದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಸತತವಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ಎಂದು ಹಗಲು ರಾತ್ರಿ ಜಪ ಮಾಡುವುದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿ ಹಾಗೂ ತಮ್ಮ ಇಲಾಖೆಯ ಕಾರ್ಯಗಳೆಡೆಗೆ ನಿಮ್ಮ ಚಿತ್ತವಿರಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಚಿವರು ದಿನಬೆಳಗಾದರೆ ಆರ್‌ಎಸ್‌ಎಸ್ ಜಪ ಮಾಡುತ್ತಿದ್ದಾರೆ. ದೇಶಪ್ರೇಮ ಬಿತ್ತುತ್ತಿರುವ ಸಂಘಟನೆಯನ್ನು ಟೀಕಿಸುವ ಮೊದಲು, ಖರ್ಗೆ ಅವರು ತಮ್ಮ ಇಲಾಖೆಯ…
