Author: editor.udayarashmi@gmail.com

ಸಿಂದಗಿ: ರಾಜ್ಯ ಸರಕಾರ ಹೊರಡಿಸಿದ ಸಂವಿಧಾನ ಜಾಗೃತಿ ರಥವನ್ನು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಸಂವಿಧಾನದ ಅರಿವು ಮೂಡಿಸುವಂತ ಕಾರ್ಯಕ್ರಮಗಳು ಅನಾವರಣಗೊಳ್ಳಬೇಕು ಎಂದು ವಿಜಯಪುರ ಆಹಾರ ವಿಬಾಗದ ಜಿಲ್ಲಾಧಿಕಾರಿ ವಿನಯ ಪಾಟೀಲ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಪೂರ್ವಬಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ತಿಳೀದುಕೊಂಡು ಮತ್ತೊಬ್ಬರಿಗೆ ಅರಿವು ಮೂಡಿಸುವದು ಮತ್ತು ಸರಕಾರದಿಂದ ಹಮ್ಮಿಕೊಂಡ ೫ ಗ್ಯಾರೆಂಟಿಗಳ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಈ ತಾಲೂಕಿನಲ್ಲಿ ೧೬ ಗ್ರಾಂ ಪ ಹಾಗೂ ೧ ಪುರಸಭೆಯಲ್ಲಿ ೪ ದಿನಗಳ ಕಾಲ ಈ ರಥ ಸಂಚರಿಸುತ್ತದೆ ಕಾರಣ ಯಾವುದೇ ಜಾತಿಗೆ ಸಿಮೀತವಾಗದೇ ಎಲ್ಲರು ಸ್ವ ಇಚ್ಚೇಯಿಂದ ಡಾ. ಅಂಬೇಡ್ಕರರು ಬರೆದ ಸಂವಿಧಾನದ ಮೂಲ ಪಿಠೀಕೆಯನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಫೇ ೧೧ ರಂದು ಯರಗಲ್ ಬಿ.ಕೆ ಗ್ರಾಮಕ್ಕೆ ಸಂವಿಧಾನ ರಥ…

Read More

ಸಿಂದಗಿ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಪದವಿ/ಸ್ನಾತಕೋತ್ತರ/ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಡೆ-ನಲ್ಮ್ ಅಭಿಯಾನ ಮತ್ತು ಪಿ.ಎಮ್ ಸ್ವನಿಧಿ ಯೋಜನೆ ಅಡಿ ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ೨೦೨೩-೨೪ ನೇ ಸಾಲಿಗೆ ಅನುಷ್ಠಾನಗೊಳಿಸಲು ಸಿಂದಗಿ ಪುರಸಭೆಗೆ ೦೪ ಗುರಿ ನಿಗದಿಪಡಿಸಿದ್ದು, ಡೇ- ನಲ್ಕ್ ಅಭಿಯಾನದ ಉಪಘಟಕಗಳು ಮತ್ತು ಪಿ.ಎಮ್ ಸ್ವನಿಧಿ ಯೋಜನೆ ಅಡಿ ಬೀದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವುದು ಈ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಕಾರಣ ಪದವಿ/ಸ್ನಾತಕೋತ್ತರ/ಡಿಪ್ಲೋಮಾ ಮುಗಿಸಿದ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ಫೆ.೧೫ರಂದು ಸಾಯಂಕಾಲ ೦೫:೦೦ ಘಂಟೆಯೊಳಗಾಗಿ ಇಂಟರ್ನ್ಶಿಪ್ ತರಬೇತಿಗಾಗಿ ಅರ್ಜಿಯನ್ನು ಸಿಂದಗಿ ಪುರಸಭೆಯ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪುರಸಭೆ ಮುಖ್ಯಧಿಕಾರ ಗುರುರಾಜ ಚೌಕಿಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಪಟ್ಟಣದ ಅಮಾನತ್ ಅಲ್ಪಸಂಖ್ಯಾತರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಮಲಿಕಸಾಬ ನದಾಫ, ಉಪಾಧ್ಯಕ್ಷರಾಗಿ ಇಸಾಕ ನಿರ್ದೇಶಕರುಗಳಾಗಿ ಎಂ ಬಿ ಜಕ್ಕೆರಾಳ, ಬಿ ಎಂ ಮುಲ್ಕಿಸಿಪಾಯಿ, ಎಂ.ಎ. ಲಿಂಗಸೂರ (ವಕೀಲರು), ಎ.ಎಂ.ಮೊಮೀನ, ಎಲ್.ಡಿ.ಢವಳಗಿ, ಎಂ.ಎ.ಮಾಗಿ, ಎಂ.ಎಚ್.ಜಾನ್ವೇಕರ, ಎ.ಎಂ.ಢವಳಗಿ, ಎಲ್.ಆರ್.ನಾಯ್ಕೋಡಿ, ಅರ್.ಎ. ನಾಯ್ಕೋಡಿ, ಎಸ್.ಎ. ಢವಳಗಿ ಅವಿರೋಧವಾಗಿ ಆಯ್ಕೆಯಾದರು. ಇದೇ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

Read More

ಬಸವನಬಾಗೇವಾಡಿ: ಮಕ್ಕಳ ಮೇಲೆ ನಮ್ಮ ಕನಸುಗಳನ್ನು ಹೇರದೇ ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪಾಲಕರು, ಶಿಕ್ಷಕರು ಅವಕಾಶ ನೀಡಬೇಕೆಂದು ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಂಗಮೇಶ ಪೂಜಾರಿ ಹೇಳಿದರು.ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ವಿಶ್ವಗುರು ಶಿಕ್ಷಣ ಸಂಸ್ಥೆಯ ಬಸವ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ವಾರ್ಷಿಕೋತ್ಸವದಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬಸವ ರಂಗೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಮಕ್ಕಳು ವ್ಯವಸ್ಥೆಗೆ ಹೊಂದಿಕೊಳ್ಳುವ ಗುಣ ಕಲಿಸದೇ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಹ ಶಿಕ್ಷಣ ಕಲಿಸಬೇಕು. ಮಕ್ಕಳಿಗೆ ಸಮಾಜದಲ್ಲಿ ಬದುಕು ಸಾಗಿಸಲು ಬೇಕಾದ ಕೌಶಲ್ಯಗಳನ್ನು ಕಲಿಸಬೇಕು. ಮಕ್ಕಳ ಮನೋವಿಜ್ಞಾನ ಅರಿತು ಅವರಿಗೆ ಅದರಂತೆ ಶಿಕ್ಷಣ ಕೊಡಿಸಬೇಕೆಂದರು.ಮಕ್ಕಳಿಗೆ ಉತ್ತಮ ಶಾಲೆ, ಉತ್ತಮ ಪರಿಸರ ಅಗತ್ಯವಿದೆ. ಇದು ಮಕ್ಕಳ ಕಲಿಕೆಗೆ ಪೂರಕವಾಗಲಿದೆ. ೧೯೭೨ ರ ಅವಧಿಯಲ್ಲಿ ಜನಿಸಿದವರು ಜೀವನದಲ್ಲಿ ಆಸಕ್ತಿ, ಪ್ರೀತಿಗೆ ೩೦ ವರ್ಷ ಕಾಲ, ೧೯೭೨-೯೨ ರ ಅವಧಿಯಲ್ಲಿ ಜನಿಸಿದವರು ೭ ವರ್ಷ ಕಾಲ, ೧೯೯೨-೨೦೧೨ ಅವಧಿಯಲ್ಲಿ ಜನಿಸಿದವರು ೧ ತಿಂಗಳ ಕಾಲ, ೨೦೧೨ ಈಚೆಗೆ…

Read More

ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಕರ್ನಾಟಕ ಸಂಭ್ರಮ ೫೦ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಬುಧವಾರ ಸಂಜೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ತಾಲೂಕಿಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸ್ವಾಗತಿಸಿಕೊಂಡರು.ಮುತ್ತಗಿ ಕ್ರಾಸ್‌ನಲ್ಲಿ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿಕೊಳ್ಳಲಾಯಿತು. ನಂತರ ಗ್ರಾಮದಲ್ಲಿ ಜರುಗಿದ ಮೆರವಣಿಗೆಯಲ್ಲಿ ಕುಂಭಮೇಳ, ಲೇಜಿಮ್, ಕೋಲಾಟ, ಕರಡಿ ಮಜಲು, ವಿವಿಧ ಮಕ್ಕಳ ಛದ್ಮವೇಷ ಗಮನ ಸೆಳೆದವು.ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ತಾಪಂ ಅಧಿಕಾರಿ ಡಾ.ಯುವರಾಜ ಹನಗಂಡಿ, ಬಿಇಓ ವಸಂತ ರಾಠೋಡ ಮಾತನಾಡಿದರು.ಮೆರವಣಿಗೆಯಲ್ಲಿ ಬಸ್ ಡಿಪೋ ವ್ಯವಸ್ಥಾಪಕ ಪಿ.ಕೆ.ಜಾಧವ, ಜಿಪಂ ಅಭಿಯಂತರ ವಿಲಾಸ ರಾಠೋಡ, ತಾಲೂಕು ಕಸಾಪ ಅಧ್ಯಕ್ಷ ಎಸ್.ಐ.ಡೋಣೂರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವಾನಂದ ಮಡಿಕೇಶ್ವರ, ಎಸ್.ಎಸ್.ಚಿಮ್ಮಲಗಿ, ಎಂ.ಬಿ.ತೋಟದ, ಬಿ.ವಿ.ಚಕ್ರಮನಿ, ಎಂ.ಎ.ಅಂಗಡಗೇರಿ, ಬಿ.ಎಫ್.ಮೇಟಿ, ಬಿ.ಬಿ.ಚಿಂಚೋಳಿ, ವೈ.ಕೆ.ಪತ್ತಾರ, ಸಿದ್ರಾಮ ಬಿರಾದಾರ, ಪ್ರೇಮಕುಮಾರ ಮ್ಯಾಗೇರಿ, ನಜೀರ ದಡ್ಡಿ, ಮಹೇಶ ಪೂಜಾರಿ, ಎಂ.ವಿ.ಗಬ್ಬೂರ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾ ಪಾಟೀಲ, ಉಪಾಧ್ಯಕ್ಷೆ ಕವಿತಾ ಬಡಿಗೇರ, ಸದಸ್ಯರು, ಗ್ರಾಮದ ವಿವಿಧ…

Read More

ಫೆ.12ರಂದು ನೀರು ಹರಿಸುವ ಭರವಸೆ | ನೀರು ಹರಿಸದಿದ್ದರೆ ಫೆ.13 ರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಆಲಮಟ್ಟಿ: ಜಲಾಶಯದ ವ್ಯಾಪ್ತಿಗೆ ಬರುವ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಂಡ ಕರ್ನಾಟಕ ರೈತ ಸಂಘ ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಿದರು.ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಮುಖ್ಯ ಎಂಜಿನಿಯರ್ ಅವರಿಗೆ ಎರಡೂ ಸಂಘಟನೆಗಳು ಮನವಿ ಅರ್ಪಿಸಿದರು.ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಆಲೂರ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಬೇಕು, ಈ ಮೊದಲು ಹರಿಸಿದ ನೀರಿನಿಂದ ಕೆರೆಗಳ ಸಾಮರ್ಥ್ಯದ ಶೇ 30 ರಷ್ಟು ಮಾತ್ರ ಕೆರೆಗಳು ಭರ್ತಿಯಾಗಿವೆ. ಫೆಬ್ರುವರಿಯಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಿದೆ. ಅಂತರ್ಜಲ ಮಟ್ಟ…

Read More

ಚಿಮ್ಮಡದಲ್ಲಿ ಕಸ ಸಂಗ್ರಹ, ವಿಲೇವಾರಿ ವಾಹನಕ್ಕೆ ಮಹಿಳೆಯೇ ಸಾರಥಿ *- ಇಲಾಹಿ ಇ. ಜಮಖಂಡಿ* ಚಿಮ್ಮಡ: ಗ್ರಾಮ ಪಂಚಾಯತಿಯ ಕಸದ ವಾಹನಕ್ಕೆ ಚಾಲಕಿಯಾಗಿ ಗ್ರಾಮದ ಮಹಿಳೆ ಸರೋಜಾ ಮ್ಯಾದಾರ ಸುಮಾರು ಏಳು ತಿಂಗಳಿಂದ ಗ್ರಾಮದಲ್ಲಿ ಸ್ವಚ್ಚ ವಾಹಿನಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಚಿಮ್ಮಡ ಗ್ರಾಮದಲ್ಲಿ ವಾರದಲ್ಲಿ ಎರಡು ದಿನ ಶನಿವಾರ ಮತ್ತು ಬುಧವಾರ ಸ್ವಚ್ಚ ವಾಹಿನಿ ಜೊತೆ ಪ್ರತಿ ಮನೆ ಮನೆಗೆ ಕಸ ಸಂಗ್ರಹಣೆ ಮಾಡುವ ಮೂಲಕ ಸ್ವಚ್ಚ ಭಾರತಕ್ಕೆ ಕೈ ಜೋಡಿಸುತ್ತಿದ್ದಾರೆ.ಜಿಲ್ಲಾ ಪಂಚಾಯತಿ ಮಹತ್ವದ ಹೆಜ್ಜೆ: ಮಹಿಳೆಯ ಆರ್ಥಿಕ ಭದ್ರತೆ. ಸ್ವಾವಲಂಬಿ ಬದುಕು. ಸಬಲೀಕರಣಕ್ಕಾಗಿ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮಿಣ ಭಾಗದ ಹಲವು ಮಹಿಳೆಯರಿಗೆ ಚಾಲನಾ ತರಬೇತಿ ನೀಡಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತಿದೆ. ಗ್ರಾಮದ ಸ್ವಚ್ಚ ವಾಹಿನಿಗಳಲ್ಲಿ ಕಸ ಸಂಗ್ರಹಣೆಯ ತರಬೇತಿ ಪಡೆದ ಮಹಿಳಾ ವಾಹನ ಚಾಲಕಿಯರನ್ನು ನೇಮಕ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.ಮನೆ ಬಾಗಿಲಗಳಿಗೆ ವಾಹನ: ಸ್ವಚ್ಚ ಭಾರತ್…

Read More

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಗಂಭೀರ ಆರೋಪ ಇಂಡಿ: ಭೀಮಾಶಂಕರ ಕಾರ್ಖಾನೆಯ ಮೇಲೆ ಕಳೆದ ಐದು ವರ್ಷಗಳಲ್ಲಿ ೨೭೮ ಕೋಟಿ ರೂ ಸಾಲ ಪಡೆದಿದ್ದು, ೧೪೩ ಕೋಟಿ ರೂ ಹಾನಿಯಾಗಿದೆ ಮತ್ತು ಪ್ರತಿ ವರ್ಷ ೨೮ ಕೋಟಿ ರೂ ನಷ್ಟವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆರೋಪಿಸಿದರು.ಅವರು ಭೀಮೆಯ ದಡದಲ್ಲಿ ಭೀಮಾಶಂಕರ ಕಾರ್ಖಾನೆ ಚುನಾವಣೆ ಪ್ರಚಾರಾರ್ಥ ಡಾ|| ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ ಅಭ್ಯರ್ಥಿಗಳ ಗುಂಪಿನಿಂದ ನಡೆದ ಪಟ್ಟಣದ ಅಮರ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಬ್ಬು ಕಟಾವು ಮಾಡುವಾಗ ಕಬ್ಬು ಸಾಗಿಸುವ ಅಥವಾ ಕಾರ್ಖಾನೆಯಲ್ಲಿ ಕಬ್ಬು ನುರಿಸುವಾಗ ಅಪಘಾತ ಸಂಭವಿಸಿ ರೈತರು ಕಾರ್ಮಿಕರು ಮೃತ ಪಟ್ಟರೆ ಅವರಿಗೆ ೫ ಲಕ್ಷ ಪರಿಹಾರವನ್ನು ನೀಡಲಾಗುವದು, ಮತ್ತು ಅಪಘಾತಗೊಂಡು ಆಸ್ಪತ್ರೆಗೆ ದಾಖಲಾದರೆ ಅವರ ವೈದ್ಯಕೀಯ ವೆಚ್ಚವನ್ನು ಕಾರ್ಖಾನೆಯಿಂದ ಭರಿಸಲಾಗುವದು, ಜಮೀನಿನಲ್ಲಿ ಬೆಳೆದಿರುವ ಕಬ್ಬು ವಿದ್ಯುತ್ ಹಾಗೂ ಬೆಂಕಿಯಿಂದ ಸುಟ್ಟರೆ…

Read More

ದೇವರಹಿಪ್ಪರಗಿ: ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ಮುಳಸಾವಳಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಿಜೇತರಾಗಿದ್ದಾರೆ.ತಾಲ್ಲೂಕು ಮಟ್ಟದಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ರಸಪ್ರಶ್ನೆಯಲ್ಲಿ ಸಾವಿತ್ರಿ ಸುರಗಿಹಳ್ಳಿ ಪ್ರಥಮ, ಚಿತ್ರಕಲೆಯಲ್ಲಿ ಮಲ್ಲಮ್ಮ ನಾಗರಳ್ಳಿ ಪ್ರಥಮ ಹಾಗೂ ಪ್ರಬಂಧದಲ್ಲಿ ಅಕ್ಷತಾ ಭೈರೋಡಗಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಅಭಿನಂದಿಸಿದ್ದಾರೆ ಎಂದು ಮುಖ್ಯಗುರು ಐ.ಎಸ್.ನರೂಣಿ ತಿಳಿಸಿದ್ದಾರೆ.

Read More

ಕೊಲ್ಹಾರ: ನಾಡು -ನುಡಿ, ನೆಲ-ಜಲ, ಸಂಸ್ಕೃತಿ-ಪರಂಪರೆ ಪರಿಚಯಿಸುವ ಕಾರ್ಯವನ್ನು ತಾಯಿ ಭುವನೇಶ್ವರಿಯನ್ನು ಹೊತ್ತ ಕನ್ನಡದ ರಥವು ರಾಜ್ಯಾದ್ಯಂತ ಕನ್ನಡದ ಕಂಪು ಬೀರುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.ತಾಲೂಕಿನ ಮಸೂತಿ ಗ್ರಾಮದಲ್ಲಿ ಕನ್ನಡ ರಥವನ್ನು ಸಾವಿರಾರು ವಿದ್ಯಾರ್ಥಿಗಳು ಸಾರ್ವಜನಿಕರು. ಸಾಹಿತಿಗಳು ಶಿಕ್ಷಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಕಾರ್ಯಕ್ರಮ ಆಯೋಜಿಸಿದರು.ಈ ಸಂದರ್ಭದಲ್ಲಿ ಮಾತನಾಡುತ್ತಾ, ಕನ್ನಡ ನಮ್ಮ ಅನ್ನದ ಭಾಷೆ, ಆಡಳಿತ ಭಾಷೆ, ಮಾತೃ ಭಾಷೆಯಾಗಿದ್ದರಿಂದ ಕನ್ನಡವನ್ನು ಬೆಳೆಸೋಣ ಎಂದರು.ಕೊಲ್ಹಾರ ತಹಸೀಲ್ದಾರ ಎಸ್ ಎಸ ನಾಯಕಲಮಠ ಮಾತನಾಡಿ, ಮೈಸೂರು ರಾಜ್ಯ ಬದಲಾಯಿಸಿ ಕರ್ನಾಟಕವೆಂದು ಹೊಸ ಹೆಸರನ್ನು ನಾಮಕರಣ ಮಾಡಿ ಐವತ್ತು ವರ್ಷ ಗತಿಸಿದರಿಂದ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ನಾಡಿನಾದ್ಯಾಂತ ಭುವನೇಶ್ವರಿ ಹೊತ್ತ ಕನ್ನಡ ರಥ ಜಾಥಾ ಮಸೂತಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ್ದು ಅತ್ಯಂತ ಸಂತಸ ಉಂಟಾಗಿದೆ ಎಂದರು.ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ಇತರ ಸಾಹಿತ್ಯಗಳಿಗಿಂತ ಶ್ರೇಷ್ಠವಾಗಿದ್ದು, ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪುರಸೃತರನ್ನು…

Read More