ಮುದ್ದೇಬಿಹಾಳ: ನೇಹಾ ಕೊಲೆ ಪ್ರಕರಣ ಎಲ್ಲ ಆಯಾಮಗಳಲ್ಲಿ ಮುಕ್ತ ತನಿಖೆ ನಡೆಯಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾಳಿಗೆ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು, ವ್ಯಾಪಾರಸ್ಥರು, ನಾಗರಿಕರ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕೊಲೆಗಾರ ಫಯಾಜ ಮತ್ತು ಅವನ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಉಗ್ರ ಶಿಕ್ಷೆಯಾಗಬೇಕೆನ್ನುವದು ನೇಹಾಳ ಕುಟುಂಬದ ಮತ್ತು ಎಲ್ಲ ಕನ್ನಡಿಗರ ಬೇಡಿಕೆಯಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಮಂತ ದುದ್ದಗಿ ಮಾತನಾಡಿ, ಸ್ವತಂತ್ರ ಬಂದು ಸಾಕಷ್ಟು ವರ್ಷಗಳಾದರೂ ನಮ್ಮ ಮನೆಯ ಹೆಣ್ಣು ಮಕ್ಕಳು ಬೆಳಿಗ್ಗೆ ಮನೆಯಿಂದ ಹೋದರೆ ಮರಳಿ ಸೌಖ್ಯವಾಗಿ ಮನೆಗೆ ಬರುವವರೆಗೂ ಸಮಾಧಾನ ಇರಲ್ಲ. ಹಿಂದೂಗಳಲ್ಲಿ ಒಗ್ಗಟ್ಟು ಕಡಿಮೆಯಾದ ಪರಿಣಾಮ ಹಿಂದೂಗಳ ಮೇಲೆ ದಬ್ಬಾಳಿಕೆಯಾಗುತ್ತಿದೆ. ಹಿಂದು ಹೆಣ್ಣುಮಕ್ಕಳನ್ನು ಟಾರ್ಗೇಟ್ ಮಾಡಲಾಗುತ್ತಿದೆ. ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಲಾಗುತ್ತಿದೆ ಹಿಂದೂ ಹೆಣ್ಣುಮಕ್ಕಳು ಜಾಗೃತರಾಗಬೇಕಾಗಿದೆ ಎಂದರು.
ಹೋರಾಟಗಾರ ಬಸಯ್ಯ ನಂದಿಕೆಶ್ವರಮಠ, ಪ್ರಮುಖರಾದ ವಿಕ್ರಂ ಓಸ್ವಾಲ್, ವಾಸುದೇವ ಶಾಸ್ತ್ರಿ ಶಿವಯೋಗಪ್ಪ ರಾಂಪೂರ, ಕಾಶಿಬಾಯಿ ರಾಂಪೂರ, ಬಿ.ಜಿ,ಜಗ್ಗಲ ವಕೀಲರು, ಬಸಲಿಂಗಪ್ಪ ರಕ್ಕಸಗಿ, ಡಿಎಸ್‌ಎಸ್ ಮುಖಂಡ ಹರೀಶ ನಾಟೆಕಾರ, ಸಿದ್ಧರಾಜ ಹೊಳಿ, ಸಂಜು ಬಾಗೇವಾಡಿ, ರವೀಂದ್ರ ಬಿರಾದಾರ, ಪರಶುರಾಮ ನಾಲತವಾಡ, ರಾಜು ಬಳ್ಳೊಳ್ಳಿ, ಜಗದೀಶ ಕಂಠಿ, ಬಸವರಾಜ ಮುರಾಳ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

