ಸಿಂದಗಿ: ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಜೊತೆಗೆ ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಬುಧವಾರದಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ವಿಜಯಪುರ ಮೀಸಲು ಕ್ಷೇತ್ರ ಲೋಕಸಭಾ ಚುನಾವಣಾ ನಿಮಿತ್ಯವಾಗಿ ಸಿಂದಗಿ ವಿದಾನಸಭಾ ಮತಕ್ಷೇತ್ರದಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುತ್ತೇವೆ. ಪ್ರತಿ ವರ್ಷಕ್ಕೆ ಮಹಿಳೆಗೆ ೧ಲಕ್ಷ ರೂ. ಕುಟುಂಬದ ಮಹಿಳೆಗೆ ನೀಡುತ್ತೇವೆ. ದೇಶ ಕಟ್ಟಿದ್ದು ಕಾಂಗ್ರೆಸ್. ಜನರಿಗೆ ತಿನ್ನಲೂ ಆಹಾರ ಇಲ್ಲದ ಸಂದರ್ಭದಲ್ಲಿ ನೆಹರೂ, ಲಾಲಬಹದ್ದೂರ್ ಶಾಸ್ತ್ರೀಜಿ ಅವರು ಹಸಿರು ಕ್ರಾಂತಿಯನ್ನು ಮಾಡುವ ಮೂಲಕ ಆಹಾರ ಉತ್ಪಾದನೆ ಮಾಡುವುದಲ್ಲದೇ ವಿದೇಶಕ್ಕೆ ರವಾನೆ ಮಾಡುವ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಅನೇಕ ಬೃಹತ್ ಕಾರ್ಖಾನೆಗಳನ್ನು ಕಟ್ಟಿ ಉದ್ಯೋಗಗಳನ್ನು ನೀಡಿದೆ. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಡವರಿಗೆ ಕೈಗೆಟುಕುವ ಬೆಲೆಗೆ ವಸ್ತುಗಳು ದೊರೆಯುತ್ತಿದ್ದವು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಬೆಲೆಗಳು ಮುಗಿಲು ಮುಟ್ಟಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿದಿದೆ. ಚುನಾವಣಾ ಬಾಂಡ್ ಖರೀದಿ ವಿಚಾರದಲ್ಲಿ ಮೋದಿಯವರ ಮುಖವಾಡ ಕಳಚಿ ಬಿದ್ದಿದೆ. ಬಿಜೆಪಿ ಸರಕಾರ ೭,೫೦೦ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಇದೇ ಅಲ್ಲವೇ ಮೋದಿ ಅವರ ಅಚ್ಚೇದಿನ್ ಎಂದು ಹರಿಹಾಯ್ದರು.
ಈ ವೇಳೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಈ ಚುನಾವಣೆ ನಿಮ್ಮ ಭವಿಷ್ಯದ ಜೊತೆಗೆ ನಮ್ಮ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಕರ್ನಾಟಕದಿಂದ ಕೇಂದ್ರಕ್ಕೆ ೪೦ಲಕ್ಷ ೩೦ಸಾವಿರ ಕೋಟಿ ತೆರಿಗೆ ಹೊಗುತ್ತೇ ಆದರೇ ಬರಗಾಲದ ಸಂದರ್ಭದಲ್ಲಿ ಪರಿಹಾರ ನೀಡಿ ಎಂದು ಕೇಳಿದರೆ ನೀಡಲಿಲ್ಲ. ಕೊನೆಗೆ ನಾವು ಸುಪ್ರೀಂಕೋರ್ಟ್ಗೆ ಹೋಗಬೇಕಾಯಿತು. ಕಾಂಗ್ರೆಸ್ ಪಕ್ಷ ಬಿಜೆಪಿಯ ಹಾಗೇ ಬರಿ ಮಾತು ಹೇಳುವ ಪಕ್ಷವಲ್ಲ ನುಡಿದಂತೆ ನಡೆಯುವ ಪಕ್ಷವಾಗಿದೆ. ಯಾವುದೇ ಆಸೆ, ಸುಳ್ಳಿಗೆ ಮತ ಹಾಕದೇ ಅಭಿವೃದ್ಧಿಯ ಹರಿಕಾರಿಗೆ ಮತ ನೀಡಿ. ಪ್ರೊ.ರಾಜು ಆಲಗೂರ ಅವರಿಗೆ ಮತ ನೀಡಿ. ಪತ್ರಿವರ್ಷ ೩೦ಲಕ್ಷ ಉದ್ಯೋಗ ಸೃಷ್ಠಿ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿ ರಾಜು ಆಲಗೂರ, ಶಾಸಕರಾದ ಯಶವಂತ್ರಾಯಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾಧ್ಯಕ್ಷ ಮಲ್ಲಕಾರ್ಜುನ ಲೋಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕಾಂತಾ ನಾಯಕ, ಎಸ್.ಎಂ.ಪಾಟೀಲ ಗಣಿಹಾರ, ವಿದ್ಯಾರಾಣಿ ತುಂಗಳ, ಬಾಬುರಾಜೇಂದ್ರ ನಾಯಕ್, ಸುರೇಶ ಪೂಜಾರ, ಸಾಧಿಕ್ ಸುಂಬಡ, ಜಯಶ್ರೀ ಹದನೂರ, ಸುನಂದಾ ಯಂಪುರೆ, ಹಣಮಂತ ಸುಣಗಾರ, ಗುರುರಾಜಗೌಡ ಪಾಟೀಲ, ಹಾಸಿಂಪೀರ ಆಳಂದ, ವಾಯ್.ಸಿ.ಮಯೂರ. ಪರಶುರಾಮ ಕಾಂಬಳೆ, ರಮೇಶ ನಡುವೀರಕೇರಿ, ಕುಮಾರ ದೇಸಾಯಿ, ಅರವಿಂದ ಹಂಗರಗಿ, ಅಶೋಕ ವಾರದ, ಚನ್ನು ವಾರದ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

