ವಿಜಯಪುರ: ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಶಸ್ತçಚಿಕಿತ್ಸಕರು, ತಜ್ಞವೈದ್ಯರು ಲಭ್ಯವಿರುವದರಿಂದ ಹೆರಿಗೆ ಹಾಗೂ ಇನ್ನಿತರ ಶಸ್ತ್ರಚಿಕಿತ್ಸೆಯನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಡಲಾಗುತಿದ್ದು. ಸಿಂದಗಿ ತಾಲೂಕಿನ ಎಲ್ಲ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಬಸವರಾಜ ಹುಬ್ಬಳ್ಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಂದಗಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯ ದಾಖಲಾತಿ, ಕಾರ್ಯವೈಖರಿಯನ್ನು ಪರಿಶೀಲಿಸಿ ವೈದ್ಯರೊಂದಿಗೆ ಸಭೆ ನಡೆಸಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆ ಸಿಂದಗಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಕೆ.ಡಿ ಗುಂಡಬಾವಡಿ, ಈಗಾಗಲೇ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡು ಜನ ಗರ್ಭಿಣಿಯರಿಗೆ ಸಿಜರಿಯನ್, ಒಂದು ಹರ್ನಿಯಾ ಶಸ್ತ್ರಚಿಕಿತ್ಸೆ, ಎರಡು ಜನರಿಗೆ ಗಡ್ಡೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಎಲ್ಲರೂ ಆರೋಗ್ಯದಿಂದ ಇರುತ್ತಾರೆ. ಸದರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞವೈದ್ಯರಾದ ಡಾ.ನೂರೇಸ ಪಟೇಲ್ ಹೆರಿಗೆ ಹಾಗೂ ಸ್ರೀರೋಗ ತಜ್ಞರು, ಡಾ.ರಾಜಶೇಖರ ಸಿ.ಹೆಚ್. ಚಿಕ್ಕಮಕ್ಕಳ ತಜ್ಞರು, ಡಾ.ಸಾಯಬಣ್ಣ ಗುಣಕಿ. ಅವರಳಿಕೆ ತಜ್ಞರು, ಡಾ.ನಾಗರಾಜ ಶಸ್ತçಚಿಕಿತ್ಸಕರು, ಡಾ.ಶಂಕರರಾವ ದೇಶಮುಖ ಶಸ್ತ್ರಚಿಕಿತ್ಸಕರು, ಡಾ.ರಮೇಶ ರಾಠೋಡ ಆರ್.ಎಮ್.ಓ, ಶ್ರೀಮತಿ ವಿದ್ಯಾವತಿ ಹೀರೆಮಠ ನರ್ಸಿಂಗ್ ಸೂಪರಡೆಂಟ್, ರಾಯಣ್ಣ ಸೊನ್ನಳ್ಳಿ ನರ್ಸಿಂಗ್ ಆಫೀಸರ್, ಶ್ರೀಮತಿ ಅಶ್ವಿನಿ ಮೊಟಗಿ ನರ್ಸಿಂಗ್ ಆಫೀಸರ್, ಶ್ರೀಮತಿ ಅಶ್ವಿನಿ ಸಾವಳಗಿ ನರ್ಸಿಂಗ್ ಆಫೀಸರ್ ಮೇಲ್ಕಾಣಿಸಿದ ಎಲ್ಲ ಸಿಬ್ಬಂದಿಯವರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
ಸಾರ್ವಜನಿಕರು ಶಸ್ತ್ರಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳಿ :ಡಾ.ಬಸವರಾಜ
Related Posts
Add A Comment

