ಸಿಂದಗಿ: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏ.೨೭-೨೯ರ ವರೆಗೆ ಚಿಣ್ಣರಿಗೆ ಮೂರು ದಿನಗಳ ಕಾಲ ಚಿಗುರು-ಚಿಲಿಪಿಲಿ ಚೈತ್ರದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಾಕುಮಾರಿ ರಾಜಯೋಗಿನಿ ಪವಿತ್ರಾ ಅಕ್ಕನವರು ತಿಳಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ ೧೦ರಿಂದ ಸಾಯಂಕಾಲ ೪ಗಂಟೆಯವೆರೆಗ ಜರುಗಲಿರುವ ಶಿಬಿರದ ಮಾರ್ಗದರ್ಶಕರಾಗಿ ಬಾಗಲಕೋಟೆಯ ಬಿ.ಕೆ. ನಾಗರತ್ನ ಅಕ್ಕನವರು, ಎಂ.ಕೆ ಹುಬ್ಬಳ್ಳಿಯ ಬಿ.ಕೆ ಜ್ಯೋತಿ ಅಕ್ಕನವರು, ಬಿ.ಕೆ ಗಾಯತ್ರಿ ಅಕ್ಕನವರು, ಶಿಕ್ಷಣ ತಜ್ಞ ಎಚ್.ಟಿ. ಕುಲಕರ್ಣಿ ಗುರುಗಳು, ಶಿಕ್ಷಕ ವ್ಯಂಗ್ಯ ಚಿತ್ರಗಾರ ಶರಣು ಚಟ್ಟಿ, ಚಿತ್ರಕಲಾ ಶಿಕ್ಷಕ ಎಂ.ಬಿ ಅಲ್ದಿ, ಗುಂಡಣ್ಣ ಕುಂಬಾರ, ರೇಣುಕ ಗವಾಯಿ, ದೈಹಿಕ ಶಿಕ್ಷಕ ಸಿದ್ದಲಿಂಗ ಚೌದರಿ ಭಾಗವಹಿಸುವರು.
ಶಿಬಿರದಲ್ಲಿ ಯೋಗಾಸನ, ಧ್ಯಾನ, ಕ್ರಾಫ್ಟ್, ಸ್ಪೋಕನ್ ಇಂಗ್ಲೀಷ್,ವ್ಯಂಗ್ಯ ಚಿತ್ರಕಲೆ, ನೃತ್ಯ, ಸ್ವಾನುಭೂತಿ, ಸ್ವಯಂ ಜಾಗೃತಿ, ತಾರ್ಕಿಕ ಶಕ್ತಿಯ ವೃದ್ಧಿ, ಜ್ಞಾನದ ಮಹತ್ವ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ವಿಧಿ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ೬-೯ನೇ ತರಗತಿಯ ವಿದ್ಯಾರ್ಥಿಗಳು ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕು. ಈ ಶಿಬಿರವು ಉಚಿತವಾಗಿದ್ದು, ಕೂಡಲೇ ಎಲ್ಲ ಮಕ್ಕಳು ೮೦೯೫೦೬೫೬೮೭ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಿಂದಗಿ ಸೇವಾ ಕೇಂದ್ರದ ಬ್ರಹ್ಮಾಕುಮಾರಿ ರಾಜಯೋಗಿನಿ ಪವಿತ್ರ ಅಕ್ಕನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
