Author: editor.udayarashmi@gmail.com

ಕಲಕೇರಿ: ವಿದ್ಯೆಯ ಜೊತೆಗೆ ವಿನಯತೆ ವಿದ್ಯಾರ್ಥಿಗಳ ಜೀವನದ ಯಶಸ್ಸಿಗೆ ಮುಖ್ಯ ಕಾರಣವಾಗುತ್ತದೆ, ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ವಿಜಯಪುರದ ನೂತನ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಬಿ ಡಿ ಪಾಟೀಲ ಹೇಳಿದರು.ಕಲಕೇರಿ ಗ್ರಾಮದ ಎಸ್‌ಎಂವಿವಿ ಸಂಘದ ಬಸವೇಶ್ವರ ಸಂಯುಕ್ತ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ದೆಯಿಂದ ಬಳಸಿಕೊಂಡು ಜೀವನದಲ್ಲಿ ಏನಾದರು ಸಾಧನೆ ಮಾಡುವ ಛಲವನ್ನು ಮೈಗೂಡಿಸಿಕೊಳ್ಳಬೇಕು, ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುವದರ ಜೊತೆಗೆ ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಪ್ರಯತ್ನವಾದಿಗಳಾಗಿರಬೇಕು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಲಕೇರಿ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಪ್ರಾಚಾರ್ಯ ಸಿ ಎಸ್…

Read More

ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಬಸವರಾಜ ಹಡಪದ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ ವಿವೇಕ ಚಿಂತಾಮಣಿ ಪರಾಮರ್ಶೆ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ. ಅವರಿಗೆ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾಗಿರುವ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಮಾರ್ಗದರ್ಶಕರಾಗಿದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ಮುಖಂಡ ರಾಜಶೇಖರ ಹುಲ್ಲೂರ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವಿಜಯಪುರ ಜಿಲ್ಲಾ ಉಸ್ತುವಾರಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೆಗೌಡ ನೇಮಕ ಮಾಡಿ ಆದೇಶ ಹೊರಡಿಸಿ ಸಂಘಟನೆಯನ್ನು ಬಲಪಡಿಸಲು ಇವರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೇಂದ್ರ ಕಚೇರಿಗೆ ನೀಡಬೇಕು. ಅವರ ಆದೇಶದ ಮೂಲಕವೇ ಕಾರ್ಯನಿರ್ವಹಿಸಬೇಕು. ಇವರಿಗೆ ನೀಡಿರುವ ಅಧಿಕಾರವನ್ನು ಅಧ್ಯಕ್ಷರು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳಬಹುದು. ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮಿಸಬೇಕೆಂದು ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೆಗೌಡ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಸಂವಿಧಾನವು ಪ್ರಜಾಪ್ರಭುತ್ವದ ಮೇರು ಗ್ರಂಥವಾಗಿದೆ ಎಂದು ಉಪನ್ಯಾಸಕ ಹಣಮಂತಪ್ಪ ದಿವಿಗನಹಳ್ಳಿ ಹೇಳಿದರು.ತಾಲೂಕಿನ ವಡವಡಗಿ ಗ್ರಾಮದ ಬೆಂಗಳೂರು ಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ, ವಡವಡಗಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಮಾನತೆಗಾಗಿ ಪ್ರಜಾಪ್ರಭುತ್ವ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಇಡೀ ಜಗತ್ತಿನಲ್ಲಿಯೇ ಆದರ್ಶಮಯವಾಗಿದೆ. ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಸಂವಿಧಾನವು ನೀಡಿದ ಆಶಯಗಳನ್ನು ಎಲ್ಲರೂ ಪಾಲಿಸಿ ಗೌರವಿಸಬೇಕೆಂದರು.ಡಿಎಸ್ಎಸ್ ಮುಖಂಡ ಪರಶುರಾಮ ದಿಂಡವಾರ ಮಾತನಾಡಿದರು.ಸಾನಿಧ್ಯ ವಹಿಸಿದ್ದ ಗ್ರಾಮದ ವೀರಸಿದ್ದ ಸ್ವಾಮೀಜಿ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣನವರು ಸಂವಿಧಾನದ ಮಾದರಿಯಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡುವ ಮೂಲಕ ಸಮಾಜದ ಎಲ್ಲ ಜನಾಗದ ಬಾಂಧವರಿಗೆ ಅವಕಾಶ ನೀಡಿದರು. ಅದರಂತೆ ದೇಶದ ಸಂವಿಧಾನವು ರಚನೆ ಆಗಿದೆ. ಇದನ್ನು ಎಲ್ಲರೂ ಗೌರವಿಸಬೇಕೆಂದರು.ಸಾನಿಧ್ಯವನ್ನು ಬೃಂಗೀಶ್ವರ ಶಿವಾಚಾರ್ಯರು ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಹೆಬ್ಬಾಳ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬಿಇಓ ವಸಂತ ರಾಠೋಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ…

Read More

ಜಯ ಕರ್ನಾಟಕ ತಾಲ್ಲೂಕು ಘಟಕದ ಸಂಘಟನಾತ್ಮಕ ಸಭೆ ಬಸವನಬಾಗೇವಾಡಿ: ಬರ ಪರಿಸ್ಥಿತಿಯಲ್ಲಿ ಮಳೆ-ಬೆಳೆ ಕಳೆದುಕೊಂಡು‌ ತೀವ್ರ ಸಂಕಷ್ಟದಲ್ಲಿರುವ ನಾಡಿನ ಅನ್ನದಾತರು ಹಾಗೂ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ವಿರುದ್ದ ಗಟ್ಟಿ ಧ್ವನಿ ಎತ್ತಿದಾಗ ಮಾತ್ರ ನ್ಯಾಯ ಸಿಗಲು‌ಸಾಧ್ಯ. ಈ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ಸಂಘನಾತ್ಮಕವಾಗಿ ಒಗ್ಗೂಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ ನಾಯಕ್ ಕಾರ್ಯಕರ್ತರಿಗೆ ಕರೆ ನೀಡಿದರು.ಪಟ್ಟಣದ ಸಮೀಪದ ಜೈನಾಪೂರ‌ ಗ್ರಾಮದ ಪವಾಡ ಬಸವೇಶ್ವರ ಶ್ರೀಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಯ ಕರ್ನಾಟಕ ಸಂಘಟನೆ ಬಾಗೇವಾಡಿ ತಾಲೂಕು ಘಟಕದ ಸಂಘಟನಾತ್ಮಕ‌ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ದಿ. ಮುತ್ತಪ್ಪ ರೈ ಅಣ್ಣರವರು ತೋರಿಸಿಕೊಟ್ಟ ಹಾದಿಯಲ್ಲಿ ಸಾಗಿ ಇಂದು ರಾಜ್ಯದಲ್ಲಿ ನೆಲ-ಜಲ, ನಾಡು-ನುಡಿ ಹಾಗೂ ಜನಪರ ನೂರಾರು ಹೋರಾಟಗಳ ಮೂಲಕವೇ ಕರುನಾಡಿನ ಜನಮಾನಸದಲ್ಲಿ ಮುಂಚೂಣಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಬಸವನ‌ಬಾಗೇವಾಡಿ ತಾಲೂಕಿನಲ್ಲಿ ನಮ್ಮ ಸಂಘಟನೆ ಕಾರ್ಯಕರ್ತರು ಹೋರಾಟ, ಸಭೆಗಳಲ್ಲಿ ಹೆಚ್ಚು ಸಕ್ರಿಯರಾಗಿ ಸಂಘಟನೆ…

Read More

ದೇವರಹಿಪ್ಪರಗಿ: ಪಟ್ಟಣದ ಎಲ್ಲ ೧೭ ವಾರ್ಡುಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೊಳವೆಭಾವಿ ಕೊರೆಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಅಡಿ ೩ನೇ ವಾರ್ಡಿನಲ್ಲಿ ಕೊಳವೆಭಾವಿ ಕೊರೆಯುವ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದರು.ಪಟ್ಟಣ ಪಂಚಾಯಿತಿ ಸದಸ್ಯರು ನಿರ್ಧರಿಸುವ ಸ್ಥಳದಲ್ಲಿ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಕೊಳವೆಭಾವಿ ಕೊರೆಸಲಾಗುತ್ತಿದೆ.ಪಟ್ಟಣದ ೪೨೦೦ ಮನೆಗಳಿಗೆ ೨೮.೮೫ ಕೋಟಿ ವೆಚ್ಚದಲ್ಲಿ ನಲ್ಲಿ ಮೂಲಕ ನೀರು ನೀಡುವ ಅಮೃತ್ ೨.೦ ಯೋಜನೆಯ ಕಾರ್ಯ ಚಾಲನೆಯಲ್ಲಿದೆ ಜೊತೆಗೆ ಹಿಂದಿನ ಬಹುಹಳ್ಳಿ ಯೋಜನೆ(ಎಂವ್ಹಿಎಸ್) ಸಹ ಇದೆ ಈಗ ನೂತನ ಕೊಳವೆಭಾವಿ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇವುಗಳೆಲ್ಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಸಹಕಾರಿಯಾಗುತ್ತವೆ ಎಂದರು.ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಉಮೇಶ ರೂಗಿ, ಕಾಶೀನಾಥ ಬಜಂತ್ರಿ, ಬಶೀರ್‌ಅಹ್ಮದ್ ಬೇಪಾರಿ, ಸುಮಂಗಲಾ ಸೆಬೇನವರ, ಸಿಂಧೂರ ಡಾಲೇರ್, ಪ್ರಮುಖರಾದ ಕಾಶೀನಾಥ ಕಡ್ಲೇವಾಡ, ಮಲ್ಲಿಕಾರ್ಜುನ ಜಡಿಮಠ,…

Read More

ದೇವರಹಿಪ್ಪರಗಿ: ಜ್ವಾಲಾಮುಖಿ ಸ್ಫೋಟ, ಮಳೆ ನೀರು ಕೊಯ್ಲು ಸೇರಿದಂತೆ ವಿಜ್ಞಾನದ ಹಲವು ವಿಷಯಗಳ ಮೇಲೆ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ವಸ್ತು ಪ್ರದರ್ಶನ ಗಮನ ಸೆಳೆಯಿತು.ಪಟ್ಟಣದ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಸೋಮವಾರ ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದ ವಿಶೇಷತೆಗಳನ್ನು ವಿದ್ಯಾರ್ಥಿಗಳು ತಯಾರಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ೯ನೇ ತರಗತಿಯ ಪ್ರಶಾಂತ ಅವಟಿ ಹಾಗೂ ರಾಜ್‌ಅಹ್ಮದ್ ಮಳಖೇಡ ತಯಾರಿಸಿದ ಸೌರಶಕ್ತಿಯಿಂದ ಗಾಳಿಯಂತ್ರ ಹಾಗೂ ವಿದ್ಯುತ್ ಬೆಲ್‌ಗಳ ಕಾರ್ಯ ನಿರ್ವಹಣೆ, ೭ನೇ ತರಗತಿಯ ಕೌಸರ್ ಮೋಮಿನ್ ಸಿದ್ಧಪಡಿಸಿದ ಮಳೆ ನೀರು ಕೊಯ್ಲು, ೮ನೇ ತರಗತಿಯ ಶಮೀಮ್ ಕರ್ನಾಚಿ ತಯಾರಿಸಿದ ಜ್ವಾಲಾಮುಖಿ ಸ್ಪೋಟ. ಪ್ರಾಥಮಿಕ ವಿಭಾಗದಲ್ಲಿ ೬ನೇ ತರಗತಿಯ ಸುಮಂತ ಒಂಟೇತ್ತಿನ ತಯಾರಿಸಿದ ಚಂದ್ರಯಾನ-೩ ಮಾದರಿ, ಇಸಾ ಕುರ್ಸಿಯ ವಾಟರ್ ಸೈಕಲ್, ೭ನೇ ತರಗತಿಯ ಉಮರ್‌ಫಾರುಖ್ ಕರ್ಜಗಿಯ ಮಳೆನೀರು ಸಂಗ್ರಹಣೆಯ ಮಾದರಿಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವು.ಶರಣ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಎಸ್.ಎನ್.ಬಸವರೆಡ್ಡಿ ನಿರ್ಣಾಯಕರಾಗಿ ಆಗಮಿಸಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂಥ ಕಾರ್ಯಕ್ರಮಗಳು ಅಗತ್ಯ ಎಂದರು.ಸಂಸ್ಥೆಯ…

Read More

ಬಸವನಬಾಗೇವಾಡಿ: ವಿಶ್ವಗುರು ಮಹಾತ್ಮ ಬಸವಣ್ಣವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿ ಇಂದು ಅಧಿಕೃತ ಭಾವಚಿತ್ರವನ್ನು ಅನಾವರಣಗೊಳಿಸಿದ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಅಭಿನಂದನೆ ಸಲ್ಲಿಸಿದ್ದಾರೆ.ರಾಜ್ಯ ಸರಕಾರವು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿ ಅಧಿಕೃತವಾಗಿ ಇಂದು ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾಂಸ್ಕೃತಿಕ ನಾಯಕ ಎಂದು ಬರೆದು ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಆದೇಶ ಮಾಡಿರುವುದು ಇಡೀ ಬಸವನಾಡಿನ ಜನತೆಗೆ ಬಹಳ ಸಂತೋಷ ಉಂಟು ಮಾಡಿದೆ ರಾಜ್ಯ,ಜಿಲ್ಲೆ,ಹಾಗೂ ತಾಲೂಕ ಮಟ್ಟಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಚಿಂತನೆಗಳು ಹಾಗೂ ಸರಕಾರದ ಉದ್ದೇಶಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದು ನಿರ್ದೇಶನ ಮಾಡಿರುವುದು ಕನ್ನಡ ನಾಡಿನ ಹಲವಾರು ಮಠಾಧೀಶರ ಬಸವಾಭಿಮಾನಿಗಳ ಹೋರಾಟದ ಫಲವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಇದೇ ತಿಂಗಳು 16 ರಂದು ಸರ್ಕಾರದ ಬಜೆಟ್ ನಲ್ಲಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯ…

Read More

ಬೆಂಗಳೂರು: ಜವಳಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಉದ್ಯಮಶೀಲರ ಕಡತಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಿ, ಸಬ್ಸಿಡಿ ಮತ್ತಿತರ ಕಾರಣಗಳಿಗೆ ರೂಪಿತವಾದ ಕಡತಗಳ ಬಗ್ಗೆ ಮುತುವರ್ಜಿ ವಹಿಸಿ ಎಂದು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.ವಿಕಾಸಸೌಧದಲ್ಲಿ ಜವಳಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಡತ ವಿಲೇವಾರಿ ವಿಳಂಬವಾದರೆ ಉದ್ಯಮಶೀಲರು ಆಸಕ್ತಿ ಕಳೆದುಕೊಳ್ಳಬಹುದು. ಹೀಗಾಗಿ ನೈಜ ಯೋಜನೆಗಳ ಕಡತಗಳನ್ನು ವಿಳಂಬವಿಲ್ಲದೆ ವಿಲೇ ಮಾಡಿ ಹಾಗೂ ಒಪ್ಪಂದದ ಪ್ರಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಹೇಳಿದರು.ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಉತ್ಪಾದನಾ ವೆಚ್ಚ ಅಧಿಕವಾಗಿರುವುದರಿಂದ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೇಡಿಕೆ ಇಲ್ಲ. ಹೀಗಾಗಿ ಉತ್ಪಾದನಾ ವೆಚ್ಚ ಕಡಿತ ಮಾಡಲೂ ಆಧುನೀಕರಣ ಸೇರಿದಂತೆ ಇತರ ಮಾರ್ಗೋಪಾಯಗಳ ಕ್ರಿಯಾ ಯೋಜನೆ ತಯಾರಿಸಿ ಕೊಡಿ. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಅವಕಾಶಗಳಿವೆ ಎಂಬ ಮಾಹಿತಿಯೂ ಬೇಕು. ಸಭೆಗೆ ಬರುವಾಗ ಪೂರ್ಣ ಮಾಹಿತಿ ಇರಬೇಕು. ಹೋಮ್ ವರ್ಕ್ ಮಾಡಿಕೊಂಡು ಬರಬೇಕು ಎಂದು ಹೇಳಿದರು.ಜವಳಿ ಪಾರ್ಕ್ ಗಳ…

Read More

ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ವಿಜಯಪುರ: ವಿಜಯಪುರ ನಗರದ ಸರ್ಕಾರಿ ಉರ್ದು ಟಿಟಿಐ, ಸರ್ಕಾರಿ ಬಾಲಕರ ಪ.ಪೂ. ಕಾಲೇಜ್(ಪ್ರೌಢಶಾಲಾ ವಿಭಾಗ) ಹಾಗೂ ಟೇಕಡೆ ಗಲ್ಲಿಯಲ್ಲಿರುವ ಸರ್ಕಾರಿ ಹಿರಿಯ ಉರ್ದು ಹೆಣ್ಣು ಮಕ್ಕಳ ಶಾಲೆಯಲ್ಲಿ ಮತ್ತು ಸಿಂದಗಿಯ ಅಂಜುಮನ್ ಪದವಿಪೂರ್ವ ಕಾಲೇಜ್‌ನಲ್ಲಿ ಫೆ.೧೨ ರಿಂದ ೧೭ರವರೆಗೆ ಅರೇಬಿಕ್ ಪರೀಕ್ಷೆಗಳು ಜರುಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನ್‌ಗಳನ್ನು ತರುವುದುನ್ನು ಹಾಗೂ ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ನಿಷೇಧಿತ ಪ್ರದೇಶವೆಂದು ಘೊಷಿಸಿ, ಸದರಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಝರಾಕ್ಸ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ತೆರೆಯದಂತೆ ಆದೇಶಿಸಲಾಗಿದೆ.

Read More