Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಗಮನಿಸಿ.. ನಾವು ಕಾರ್ಮಿಕರು
ವಿಶೇಷ ಲೇಖನ

ಗಮನಿಸಿ.. ನಾವು ಕಾರ್ಮಿಕರು

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

ಕಾರ್ಮಿಕರು ಎಂದರೆ ಯಾರು?.. ತಮ್ಮ ದೈನಂದಿನ ಹೊಟ್ಟೆಪಾಡಿನ ಜೀವನಕ್ಕಾಗಿ ದುಡಿಯುವ ಸರ್ಕಾರಿ, ಅರೆಸರಕಾರಿ, ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಜನಸಮೂಹ.
ಅಸಂಘಟಿತವಾಗಿ ಈ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾಗ ಇವರಿಗೆ ಯಾವುದೇ ಕೆಲಸದ ಭದ್ರತೆ ಇರುತ್ತಿರಲಿಲ್ಲ. ದಿನಕ್ಕೆ 16 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು. ರಜಾ ಸೌಲಭ್ಯ, ನಿಯಮಿತ ಸಂಬಳ, ಆರೋಗ್ಯ ವಿಮೆ, ಹೆಣ್ಣು ಮಕ್ಕಳಿಗೆ ಹೆರಿಗೆ ರಜೆ ಹೀಗೆ ಯಾವುದೇ ಸೌಲಭ್ಯಗಳು ಇರುತ್ತಿರಲಿಲ್ಲ. ದುಡಿಯುವ ವರ್ಗಕ್ಕೆ ಮೂಲಭೂತ ಅವಶ್ಯಕತೆಗಳನ್ನು ಕೂಡ ಪೂರೈಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಬಂಡವಾಳ ಶಾಹಿಗಳ ಹಿಡಿತದಲ್ಲಿ ಕೂಲಿ ಕಾರ್ಮಿಕರು, ದಿನಗೂಲಿಗಳು ಕಾರ್ಯನಿರ್ವಹಿಸುವಂತಹ ಪರಿಸ್ಥಿತಿಯಲ್ಲಿ ಶ್ರೀಮಂತ ಉದ್ಯಮಿಗಳು ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರು. ಅತ್ಯಂತ ಕಡಿಮೆ ಸಂಬಳ ನೀಡಿ ದಿನದ ಮೂರನೇ ಎರಡು ಭಾಗ ಸಮಯ ಅಂದರೆ ಸುಮಾರು 16 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಾದಂತಹ ಪರಿಸ್ಥಿತಿ ಕಾರ್ಮಿಕರದು. ಆರೋಗ್ಯ ದೃಷ್ಟಿಯಿಂದ ಇದು ಹಾನಿಕಾರಕವಾಗಿದ್ದು ಕಾರ್ಮಿಕರು ದೈಹಿಕ, ಮಾನಸಿಕ ಮತ್ತು ಆರ್ಥಿಕ ಅನಾನುಕೂಲಕ್ಕೆ ಒಳಗಾದರು.
17 ,18ನೇ ಶತಮಾನದ ಹೊತ್ತಿಗೆ ಫ್ರಾನ್ಸ್ ನ ಬಹುದೊಡ್ಡ ಸಮಾಜವಾದಿಗಳಾದ ಕಾರ್ಲ್ ಮಾರ್ಕ್ಸ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ರವರು ಅಭಿವೃದ್ಧಿಪರ ಸಮಾಜದ ಕಲ್ಪನೆ ಹುಟ್ಟು ಹಾಕಿದರು. ದುಡಿಮೆಗೆ ತಕ್ಕ ಸಂಬಳ, ಆರೋಗ್ಯ, ಶಿಕ್ಷಣ, ವಸತಿ ವ್ಯವಸ್ಥೆಗಳು ಮತ್ತು ಭವಿಷ್ಯನಿಧಿ ಸ್ಥಾಪನೆಗಳ ಕುರಿತು ಯೋಜನೆಗಳನ್ನು ರೂಪಿಸಿದರು. ಸಮುದಾಯದ ಒಟ್ಟು ಅಭಿವೃದ್ಧಿಯ ಕುರಿತ ಚಿಂತನೆಯನ್ನು ‘ಕಮ್ಯುನಿಸಂ’ ಎಂದು ಹೆಸರಿಸಿ, ಆಡಳಿತದ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಯು ಸಮುದಾಯದ ಕೈಯಲ್ಲಿ ಇರಬೇಕು ಎಂದು ಪ್ರತಿಪಾದಿಸಿದರು.


ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕೆಂದು ಈ ವಿಶೇಷ ದಿನ ಹುಟ್ಟಿಕೊಂಡಿತು.
1921ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾಗಿದ್ದ ಪೀಟರ್. ಜೆ.ಜ್ಯೂರಿಯವರು ಬಡಗಿತನದ ಸಹೋದರತ್ವ ದಿನವನ್ನು ಸಂಭ್ರಮದಿಂದ ಆಚರಿಸಿದ್ದರು. ಮೊದಲು ಪ್ಯಾರಿಸ್ ದೇಶದಲ್ಲಿ ಮೇ 1ರಂದು ಕಾರ್ಮಿಕ ದಿನಾಚರಣೆ ಎಂದು 1927ರಲ್ಲಿ ಆಚರಿಸಲಾಯಿತು.
ಸಮಾಜವಾದಿ ಸಂಘಟನೆಗಳು, ಕಾರ್ಮಿಕ ಸಂಘಗಳು, ಬುದ್ಧಿಜೀವಿಗಳು ಸೇರಿ ಇದನ್ನು ಸ್ಥಾಪಿಸಿದರು.
2ನೇ ಮಹಾಯುದ್ಧದ ನಂತರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕಾರ್ಮಿಕರ ಕಲ್ಯಾಣ, ಕೆಲಸಕ್ಕೆ ತಕ್ಕ ಕೂಲಿ, ಸಂಭಾವನೆ, ರೋಗರುಜಿನಗಳ ಸಮಯದಲ್ಲಿ ಧನಸಹಾಯ, ಕೆಲಸ ಮಾಡುವಲ್ಲಿ ಉತ್ತಮ ಪರಿಸರ ನಿರ್ಮಾಣ, ಆರೋಗ್ಯ, ಶಿಕ್ಷಣ, ಮಕ್ಕಳಿಗೆ ವಿದ್ಯಾರ್ಥಿ ವೇತನಗಳು, ಮಹಿಳಾ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಗಳು, ವಿಮಾ ಯೋಜನೆ, ಕಾನೂನು ಸಲಹೆ ಮತ್ತು ಹೋರಾಟ, ಕೈಗಾರಿಕೆ, ಕನಿಷ್ಠ ಕೂಲಿ ನಿಗದಿ, ಈ ಮುಂತಾದ ವಿಷಯಗಳನ್ನು ಚರ್ಚೆ ಮಾಡಿ ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೊಳಿಸುವ ಮಹಾ ಹೊಣೆಗಾರಿಕೆ ಈ ಕಾರ್ಮಿಕ ಸಂಘಟನೆಗಳ ಹೆಗಲೇರಿತು.
ಪ್ರತಿ ಗ್ರಾಮ ಪಟ್ಟಣ ನಗರ ಜಿಲ್ಲೆ ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ಕಾರ್ಮಿಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳ ಮುಖ್ಯ ಕೆಲಸ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು. ಮೇ 1ರಂದು ಸಭೆ,ಚರ್ಚೆ, ನಿರ್ಣಯ, ಮೆರವಣಿಗೆ, ಪ್ರದರ್ಶನ, ಉತ್ತಮ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹ, ಪರಿಹಾರ ವಿತರಣೆ ಮುಂತಾದ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ.
ಇದರಲ್ಲಿ ಆಲೋಚನೆ ಮಾಡುವ ಅಂಶವೆಂದರೆ ಸಂಘಟಿತ, ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರೂ ಇದ್ದಾರೆ. ಫ್ಯಾಕ್ಟರಿ, ಬೀಡಿ, ಸಾಬೂನು, ಎಣ್ಣೆ, ಬಟ್ಟೆ ಗಿರಣಿಗಳು ಊದುಬತ್ತಿ ತಯಾರಿಕೆ, ಹತ್ತಿ ಗಿರಣಿಗಳು ಮತ್ತು ಅಕ್ಕಿ ಮಿಲ್ಲುಗಳು, ಗೃಹನಿರ್ಮಾಣ, ತೋಟಗಾರಿಕೆ ಹೀಗೆ ಹತ್ತು ಹಲವು ಸೇರುತ್ತದೆ. ಆಯಾಯ ವಿಭಾಗದಲ್ಲಿ ಸಂಬಂಧ ಪಟ್ಟವರು ಅವರ ಸದಸ್ಯತ್ವ ಮಾಡಿ, ಅವರಿಗಿರುವ ಸೌಲಭ್ಯಗಳನ್ನು ಹೇಳಿ ಕೊಡಿಸುತ್ತಾರೆ.
ಲಕ್ಷಾಂತರ ಮಹಿಳಾ ಶ್ರಮಿಕವರ್ಗ ಶಾಲಾ ಬಿಸಿಯೂಟದ ಕೆಲಸದಲ್ಲಿ ಇರುವುದನ್ನು ಕಾಣಬಹುದು. ದಾದಿಯರು, ಅಂಗನವಾಡಿ ಕಾರ್ಯಕರ್ತರು, ಖಾಸಗಿ ಶಾಲೆಯ ಶಿಕ್ಷಕರು ಗಾರ್ಮೆಂಟ್ ಗಳಲ್ಲಿ ಕೆಲಸ ಮಾಡುವ ಮಹಿಳಾ ಕೆಲಸಗಾರ್ತಿಯರು, ಸಾಫ್ಟ್ ವೇರ್ ಮತ್ತು ಹಾರ್ಡ್ವೇರ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಹೆಣ್ಣು ಮಕ್ಕಳು ಹೀಗೆ ಮಹಿಳಾ ಕಾರ್ಮಿಕರಾಗಿ ಕೋಟ್ಯಾಂತರ ಜನರು ದೇಶದ ಪ್ರಗತಿಗೆ ಅಹರ್ನಿಶಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯವಾಗಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ, ಅನಾರೋಗ್ಯದ ಸಂದರ್ಭದಲ್ಲಿ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಅವಶ್ಯಕತೆವಾಗಿದೆ.. ಈ ನಿಟ್ಟಿನಲ್ಲಿ ಇನ್ನೂ ಕಾರ್ಯಗಳು ನಡೆಯಬೇಕು.
ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು. ಕೆಲಸ ಮಾಡುವ ಸ್ಥಳ, ಮೂಲಭೂತ ಅನುಕೂಲಗಳು, ಜೀವನ ಭದ್ರತೆ ಎಲ್ಲವೂ ಇಂದಿನ ದಿನಗಳಲ್ಲಿದೆ. ವ್ಯಾಪಕ ಪ್ರಚಾರ ಮಾಡಿ, ಮಾಹಿತಿ ನೀಡಿ ಅವರಿಗೆ ಅದನ್ನು ಒದಗಿಸಿಕೊಡುವ ಕಾರ್ಯದಲ್ಲಿ ಬಹಳಷ್ಟು ಕಾರ್ಮಿಕ ಪರ ಸಂಘಟನೆಗಳು ತೊಡಗಿಸಿಕೊಂಡಿವೆ.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕಾಯಕವೇ ಕೈಲಾಸ ಎಂದು ಶ್ರಮದ ಜೀವನಕ್ಕೆ ಭಕ್ತಿಯ ಮಾರ್ಗವನ್ನು ತೋರಿಸಿಕೊಟ್ಟರು. ಕಾರ್ಮಿಕರು ದೇಶವನ್ನು ಕಟ್ಟುವ ನಿಜವಾದ ಕಟ್ಟಾಳುಗಳು. ಅವರ ಬೆಂಬಲಕ್ಕೆ ಸಮಾಜದ ಸರ್ವ ಜನರು ಕೈಗೂಡಿಸಲಿ ಎಂದು ಹಾರೈಸುವ..

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.