ಚಿಮ್ಮಡ: ಹಲವಾರು ಸೌಲಭ್ಯಗಳನ್ನು ನೀಡಿರುವ ಕಾಂಗ್ರೆಸ್ ಬಡವರು, ನೇಕಾರರಿಗೆ ಮಾತೃಪಕ್ಷ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.
ಗ್ರಾಮದ ಅಶೋಕ ಧಡೂತಿಯವರ ಮನೆಯ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನೇಕಾರರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿದ್ದು ಕಾಂಗ್ರೆಸ್, ಆಶ್ರಯ ಮನೆಗಳ ೩೨ ಕೋಟಿ ಸಾಲವನ್ನುಬರಕಾಸ್ತು ಮಾಡಿದ್ದು, ನೇಕಾರರಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಆದರೆ ಕೇಂದ್ರ ಬಿಜೆಪಿ ಸರಕಾರ ದಿನಬಳಕೆಯ ಎಲ್ಲ ವಸ್ತುಗಳ ಬೆಲೆಯೇರಿಸುವ ಮೂಲಕ ಬಡವರನ್ನು ಲೂಟಿ ಹೊಡೆಯುತ್ತಿದೆ, ರೈತರನ್ನು ಕೇವಲವಾಗಿ ಕಾಣುವ ಇವರು ಆಯ್ದ ಕೆಲವು ಉದ್ಯಮಿಗಳಿಗೆ ಮಾತ್ರ ಭರಪೂರ ನೆರವು ನೀಡುತ್ತಿದ್ದಾರೆ ಕಾಂಗ್ರೆಸ್ ಆಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಮತ ನೀಡುವ ಮೂಲಕ ಬಡವರು, ಮದ್ಯಮವರ್ಗದ ವಿರೋಧಿ ಬಿಜೆಪಿ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.
ನೇಕಾರ ಧುರೀಣ ರವೀಂದ್ರ ಕಲಬುರ್ಗಿ ಮಾತನಾಡಿ ರೈತರು, ನೇಕಾರರು, ಬಡವರು, ಮಧ್ಯಮವರ್ಗದವರಿಗೆ ಪಂಚ ಗ್ಯಾರಂಟಿ ಮೂಲಕ ಪ್ರತಿಯೊಂದು ಮನೆಗಳಿಗೆ ಸರಕಾರದ ಸೌಲಭ್ಯಗಳು ತಲುಪುತ್ತಿವೆ ಎಂದರು.
ನೆಕಾರರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಗಪ್ಪ ಹಳ್ಳೂರ, ಅಶೋಕ ಧಡೂತಿ ಮಾತನಾಡಿದರು.
ಪ್ರಮುಖರಾದ ಅರುಣ ಗಾಣಿಗೇರ, ಪಿರಸಾಬ ನದಾಫ, ಇಮಾಮ ಯಾದವಾಡ, ಮಹಾದೇವ ಅಥಣಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
