ಬಸವನಬಾಗೇವಾಡಿ: ಮತಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆದ ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಶೇ. 93.18ರಷ್ಟು ಮತದಾನವಾಗಿದೆ. 85 ಕ್ಕೂ ಹೆಚ್ಚು ವಯಸ್ಸಾದ 332 ಮತದಾರರಲ್ಲಿ 307 ಮತದಾರರು ತಮ್ಮ ಮತದಾನ ಚಲಾಯಿಸಿದರೆ, 123 ವಿಕಲಚೇತನ ಮತದಾರರಲ್ಲಿ 117 ವಿಕಲಚೇತನ ಮತದಾರರು ತಮ್ಮ ಮತದಾನ ಮಾಡಿದ್ದಾರೆ. 85ಕ್ಕೂ ಹೆಚ್ಚು ವಯಸ್ಸಾದ 332 ಮತದಾರರು, 123 ವಿಕಲಚೇತನ ಮತದಾರರು ಸೇರಿ ಒಟ್ಟು 455 ಮತದಾರರು ಮತಕ್ಷೇತ್ರದಲ್ಲಿ ತಮ್ಮ ಹೆಸರು ನೋಂದಣಿ ಮಾಡಿದ್ದರು. ಇದರಲ್ಲಿ ೪೨೪ ಮತದಾರರು ತಮ್ಮ ಮತದಾನ ಮಾಡುವ ಮೂಲಕ ಶೇ.93.18 ರಷ್ಟು ಮತದಾನವಾಗಿದೆ. ಇದರಲ್ಲಿ 6 ವ್ಯಕ್ತಿಗಳು ಮೃತರಾಗಿದ್ದಾರೆ.25 ಜನ ಮತದಾರರು ಗೈರು ಉಳಿದುಕೊಂಡಿದ್ದಾರೆ. ಗೈರು ಇದ್ದ ಮತದಾರರ ಮನೆಗೆ ನಮ್ಮ ಅಧಕಾರಿಗಳ ತಂಡ ಎರಡು ಸಲ ಭೇಟಿ ನೀಡಿದರೂ ಅವರು ಲಭ್ಯವಾಗಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

