Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: “ಇದು ತೆರಿಗೆ ಮತ್ತು ಚುನಾವಣೆ ಬಜೆಟ್ ಆಗಿದೆ. ಆಲಮೇಲ ತಾಲೂಕಿಗೆ ತೋಟಗಾರಿಗೆ ಕಾಲೇಜು ನೀಡಿದ್ದು ಸ್ವಾಗತಾರ್ಹ. ಆದರೆ ಬಜೆಟ್ ಘೋಷಣೆಯಾಗಿಯೇ ಉಳಿಯಬಾರದು. ಕುಮಾರಸ್ವಾಮಿ ಅವರು ಸಿಎಂ ಇರುವಾಗ ಅವರ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಈಗಲಾದರೂ ತೋಟಗಾರಿಕೆ ಕಾಲೇಜು ಘೋಷಣೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಬೇಕು.” – ರಮೇಶ ಭೂಸನೂರಮಾಜಿ ಶಾಸಕರು
ಸಿಂದಗಿ: ಬೃಹತ್ ಆಗಿರುವ ೫ ಗ್ಯಾರಂಟಿಗಳ ಮಧ್ಯದಲ್ಲಿಯೂ ಕೃಷಿ, ಸಾಮಾಜಿಕ, ಹೈನುಗಾರಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ನೀರಾವರಿ, ಮೂಲಭೂತ ಸೌಕರ‍್ಯ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಪರಿಗಣನೆಗೆ ತಗೆದುಕೊಂಡು ಎಲ್ಲ ಕ್ಷೇತ್ರಗಳ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಬಜೆಟ್‌ದಲ್ಲಿ ಹಣ ಮೀಸಲಿರಿಸಿದ್ದಾರೆ. ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯವನ್ನು ನೀಡಿ ರಾಜ್ಯದ ಗೌರವವನ್ನು ಎತ್ತಿ ಹಿಡಿದಿದ್ದಾರೆ.” – ಅಶೋಕ ಮನಗೂಳಿಶಾಸಕರು
ವಿಜಯಪುರ: ಇದೊಂದು ನಿರಾಶದಾಯಕ, ಸುಳ್ಳಿನ ಕಂತೆ ಬಜೆಟ್ ಆಗಿದೆ. ಇದರಿಂದ ರಾಜ್ಯದ ಒಂದು ವರ್ಷದ ಭವಿಷ್ಯ ಇಲ್ಲ. ಯಾವುದೇ ಅಭಿವೃದ್ಧಿ ನಿರೀಕ್ಷೆ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರದ ಬಳಿ ಹಣವೇ ಇಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಘೋಷಿಸಿದನ್ನೆ ಮರಳಿ ಬಹುತೇಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ಯಾವುದೇ ರೀತಿಯ ಹೊಸ ಯೋಜನೆಗಳು ಈ ಬಜೆಟ್ ದಲ್ಲಿ ಇಲ್ಲ. ಕೃಷ್ಣಾ ನೀರಾವರಿಗೆ ಒಂದೂ ಪೈಸೆ ಹಣ ಇಟ್ಟಿಲ್ಲ. ವಿಜಯಪುರ ಜಿಲ್ಲೆಗೆ ಬೊಮ್ಮಾಯಿಯವರು ಘೋಷಣೆ ಮಾಡಿದ್ದ ಟೆಕ್ಸಟೈಲ್ ಪಾರ್ಕ್, ವೈನ್ ಬೋರ್ಡ್ ಗೂ ಯಾವುದೇ ಅನುದಾನ ಕೊಟ್ಟಿಲ್ಲ.ಉತ್ತರ, ದಕ್ಷಿಣ, ಕಲ್ಯಾಣ ಯಾವ ಭಾಗಕ್ಕೂ ಏನನ್ನೂ ನೀಡದೆ, ಬರೀ ಅಲ್ಪಸಂಖ್ಯಾತರ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟಿರುವ ಸಿದ್ದರಾಮಯ್ಯನವರು, ಒಂದೇ ವರ್ಗ ಹಿಡಿದುಕೊಂಡು ಹೊರಟಿದ್ದಾರೆ ಎನ್ನುವುದು ತೋರಿಸಿದೆ. ಹಿಂದುಳಿದ, ದಲಿತ, ಬಡ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಈ ವರ್ಗದ ಜನ ತಕ್ಕ ಪಾಠ…
ವಿಜಯಪುರ: ಹಣಕಾಸು ಖಾತೆ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ೨೦೨೪-೨೫ನೇ ಸಾಲಿನ ಬಜೆಟ್ ಅಭಿವೃದ್ಧಿಪರ ಬಜೆಟ್ ಇದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ರಾಜು ಆಲಗೂರ ಹೇಳಿದ್ದಾರೆ.೨೭ ಸಾವಿರ ಕೋಟಿ ರೂಪಾಯಿ ರಾಜ್ಯದ ರೈತರಿಗೆ ಸಾಲ ವಿತರಣೆಗಾಗಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಹೆಚ್ಚು ಒತ್ತು, ಪ.ಜಾ/ಪ.ಪಂ. ಜನಾಂಗದವರ ಅಭಿವೃದ್ಧಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ಅನುದಾನ ಮೀಸಲು, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ, ಗ್ಯಾರಂಟಿ ಯೋಜನೆಗಳ ಸಂಪೂರ್ಣ ಅನುಷ್ಠಾನದೊಂದಿಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ವಿಜಯಪುರಕ್ಕೆ ತೋಟಗಾರಿಕೆ ವಿದ್ಯಾಲಯ ಮಂಜೂರು ಮಾಡಿರುವುದು ಹಾಗೂ ವಿಮಾನ ನಿಲ್ದಾಣಕ್ಕೆ ೯೪ ಕೋಟಿ ರೂ. ಹೆಚ್ಚುವರಿ ಹಣ ಮಂಜೂರು ಮಾಡಿದ್ದನ್ನು ಸ್ವಾಗತಿಸುತ್ತಾ ಒಟ್ಟಾರೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್, ರಾಜ್ಯದ ಮತ್ತು ಸರ್ವಜನರ ಕಲ್ಯಾಣವನ್ನು ಒಳಗೊಂಡಿದೆ ಎಂದು ರಾಜು ಆಲಗೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಸ್ಲಿಂ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ https:sevasindhuservices.karnataka.gov.inಮೂಲಕ ನೇರವಾಗಿ ದಿನಾಂಕ : ೧೬-೦೨-೨೦೨೪ ರಿಂದ ೧೫-೦೩-೨೦೨೪ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.೭೫ರಷ್ಟು ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಶೇ.೨೫ರಷ್ಟು ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ವಸತಿ ಶಾಲೆಗಳಲ್ಲಿ ಶೇ.೫೦ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರಿಸಿದೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ, ಉಚಿತ ಸಮವಸ್ತç, ಪಠ್ಯಪುಸ್ತಕ, ನೋಟ್‌ಬುಕ್, ಲೇಖನಿ ಸಾಮಗ್ರಿಗಳು, ಸ್ಕೂಲ್ ಬ್ಯಾಗ್ ಹಾಗೂ ಊಟ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ…
ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ವಿಜಯಪುರ ನಗರ ವ್ಯಾಪ್ತಿಯ ಭೂತನಾಳ ಗ್ರಾಮದ ಹತ್ತಿರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ನಿರ್ಮಾಣವಾಗಿರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿ ಮತ್ತು ನಿರ್ಮಿತಿ ಕೇಂದ್ರದಡಿ ನಿರ್ಮಾಣದ ವಸತಿ (ಡಾರ್ಮಿಟರಿ) ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿಯನ್ನು ಸಂಪೂರ್ಣ ಪರಿಶೀಲನೆ ನಡೆಸಿ, ಈ ಕಾಮಗಾರಿ ಈಗಾಗಲೇ ವಿಳಂಬವಾಗಿದ್ದು, ಬೇಗ ಪೂರ್ಣಗೊಳಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಾಂತ್ರಿಕ ಅಧಿಕಾರಿಗಳಿಗೆ ಹಾಗೂ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ವಿಜಯಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಹೊಂಗಯ್ಯ, ಬಾಸ್ಕೆಟ್ ಬಾಲ್ ಕೋಚ್ ಮಲ್ಲನಗೌಡ ಪಾಟೀಲ, ಸೈಕ್ಲಿಂಗ್ ಕೋಚ್ ಅಲಕಾ ಫಡತರೆ, ಅನಂತ ದೇಸಾಯಿ, ಎಸ್.ಬಿ ಕಡಕಲ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯಪುರ: ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಗುರುವಾರ ಭೇಟಿ ನೀಡಿ, ಗ್ರಾಪಂ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿಡೋಣಿ ಗ್ರಾಮ ಪಂಚಾಯತಿ ಆವರಣದಲ್ಲಿ ನಿರ್ಮಾಣಗೊಂಡಿರುವ ನಕ್ಷತ್ರ ಗಾರ್ಡನ್ ಹಾಗೂ ಫೇವರ್ಸ ವೀಕ್ಷಿಸಿದರು. ಇ-ಸ್ವತ್ತು ಹಾಗೂ ತೆರಿಗೆ ಸಂಗ್ರಹಣೆಯ ಪಿ.ಓ.ಎಸ್ ಯಂತ್ರ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಕಣಮುಚನಾಳ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಅಮೃತ ಸರೋವರ ಕೆರೆಯ ವಿನ್ಯಾಸ, ಒಳಹರಿವು-ಹೊರಹರಿವು, ಕಲ್ಲು ಜೋಡಣೆ ವ್ಯವಸ್ಥೆ ವೀಕ್ಷಿಸಿದರು. ಅಮೃತ ಸರೋವರ ನಿರ್ಮಾಣದಿಂದ ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕಳೆದ ನಾಲ್ಕು ವರ್ಷಗಳಿಂದ ಹೆಚ್ಚಾಗಿದೆ ಎಂದು ಮಾಹಿತಿ ನೀಡಲಾಯಿತು. ಜಲ ಸಂರಕ್ಷಣೆಯ ಕುರಿತು ಈ ತರಹದ ಯೋಜನೆಗಳು ಮಾದರಿ ಎನಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ, ಬಿಸಿಯೂಟದ ಗುಣಮಟ್ಟ, ಮೂಲಭೂತ ಸೌಕರ್ಯಗಳ ಮಾಹಿತಿ ಪಡೆದುಕೊಂಡರು. ಶಾಲೆಗೆ…
ವಿವಿಧ ಸ್ಪರ್ಧಾತ್ಮಕ ತರಬೇತಿ ಪ್ರವೇಶ ಪರೀಕ್ಷೆವ್ಯವಸ್ಥಿತವಾಗಿ ಜರುಗಿಸಲು ರಾಜಶೇಖರ ಡಂಬಳ ಸೂಚನೆ ವಿಜಯಪುರ: ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ೬ನೇ ತರಗತಿಗೆ ಪ್ರವೇಶಾತಿಗಾಗಿ ಪ್ರವೇಶ ಪರೀಕ್ಷೆ ಹಾಗೂ ಸಮಾಜ ಕಲ್ಯಾಣ,ಹಿಂದುಳಿದ ವರ್ಗಗಳ ಇಲಾಖೆಯಿಂದ ಯುಪಿಎಸ್ ಸಿ,ಕೆ.ಎಎಸ್,ಗ್ರೂಪ್ ಸಿ,ಎಸ್ ಎಸ್ ಸಿ,ಬ್ಯಾಂಕಿಂಗ್,ಆರ್ ಆರ್ ಬಿ ಪರೀಕ್ಷೆಗಳಿಗೆ ತರಬೇತಿಗಾಗಿ ಪ್ರವೇಶ ಪರೀಕ್ಷೆಗಾಗಿ ಫೆ.೧೮ ರಂದು ವಿಜಯಪುರ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳು ವ್ಯವಸ್ಥಿತವಾಗಿ ಜರುಗುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅವರು, ಫೆ.೧೮ ರಂದು ೬ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ಜಿಲ್ಲೆಯ ಹತ್ತು ತಾಲೂಕಿನ ೩೯ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೦೧ರವರೆಗೆ ಪರೀಕ್ಷೆ ನಡೆಯಲಿದ್ದು ಒಟ್ಟು ೧೪,೦೪೮ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.ಸಮಾಜ ಕಲ್ಯಾಣ,ಹಿಂದುಳಿದ ವರ್ಗಗಳ ಇಲಾಖೆಯಿಂದ ಯುಪಿಎಸ್ಸಿ,ಕೆ.ಎಎಸ್,ಗ್ರೂಪ್ ಸಿ,ಎಸ್ ಎಸ್ಸಿ,ಬ್ಯಾಂಕಿಂಗ್,ಆರ್ ಆರ್ ಬಿ ಪರೀಕ್ಷೆಗಳಿಗೆ ತರಬೇತಿಗಾಗಿ…
ವಿಜಯಪುರ: ವಿಜಯಪುರ ೧೧೦/೧೧ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಸಿಎಲ್ ವತಿಯಿಂದ ೨೧೦ ಎಂ.ವಿ.ಎ. ಶಕ್ತಿ ಪರಿವರ್ತಕ ಬದಲು ೨೨೦ ಎಂ.ವಿ.ಎ. ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಫೆ.೧೮ರಂದು ಕೈಗೊಳ್ಳುವುದರಿಂದ ಅಂದು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಸದರಿ ವಿದ್ಯುತ್ ಕೇಂದ್ರದಿಂದ ವಿತರಿಸಲ್ಪಡುವ ೧೧ಕೆವ್ಹಿ ಬಡಿಕಮಾನ, ಮಿನಾಕ್ಷಿ ಚೌಕ ಹಾಗೂ ಪವರ್ ಹೌಸ್, ಹೊರಡುವ ೧೧ ಕೆವ್ಹಿ ಫೀಡರ್‌ಗಳ ಮೇಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇಂಡಿ: ಮಾನವ ನಿರ್ಮಿತ ಜೇನುಗುಡಗಳಲ್ಲಿ ಜೇನು ನೊಣಗಳ ಸಮೂಹಗಳನ್ನು ಅಥವಾ ಜೇನು ನೊಣಗಳ ಕುಟುಂಬಗಳನ್ನು ಪೋಷಣೆ ಕಡಿಮೆ ಖರ್ಚಿನಲ್ಲಿ ಮಾಡಿ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದು ರಾಷ್ಟ್ರೀಯ ಉತ್ತಮ ಜೇನು ಕೃಷಿ ರೈತ ಪ್ರಶಸ್ತಿ ವಿಜೇತ ಮಧುಕೇಶ್ವರ ಹೆಗಡೆ ಹೇಳಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಜೇನು ಕೃಷಿಯ ಸಾಧ್ಯತೆಗಳು ಮತ್ತು ಅವಕಾಶಗಳು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.ಇಂದು ನಾವು ಜೇನು ಬೆಳೆಸಿ ಪರಿಸರ ಉಳಿಸಬೇಕಾಗಿದೆ. ಮನೆಯಲ್ಲಿ ಹೆಣ್ಣು ಮಾತೆ, ಕೊಟ್ಟಿಗೆಯಲ್ಲಿ ಗೊ ಮಾತೆ ಮತ್ತು ಪರಿಸರದಲ್ಲಿ ಮಧು ಮಾತೆ ಇದ್ದ ಹಾಗೆ, ಪ್ರಪಂಚದಲ್ಲಿ ಜೇನುಹುಳ ಇಲ್ಲದಿದ್ದರೆ ಮನುಷ್ಯಕುಲದ ಅಂತ್ಯವಾಗಬಹುದು ಎಂದರು.ಜೇನು ನೊಣಗಳು ಬೇರೆ ಬೇರೆ ಪ್ರದೇಶಕ್ಕೆ ಹೋಗಿ ಬೇರೆ ಬೇರೆ ಹೂವಿನ ಮಕರಂದ ಹಿರಿ ಜೇನುತುಪ್ಪ ತಯ್ಯಾರು ಮಾಡುತ್ತಿದ್ದು ಅದು ನಮ್ಮ ಅನೇಕ ರೋಗ ಹೋಗಲು ಕಾರಣ ವಾಗುತ್ತದೆ ಎಂದು. ಹೇಳಿದರು.ಶಿರಶಿಯ ಕೆವಿಕೆ ಮುಖ್ಯಸ್ಥೆ ರೂಪಾ ಪಾಟೀಲ್ ಜೇನು ನೊಣಗಳ ಪ್ರಬೇಧಗಳು,ಜೇನಿನ ಕಾರ್ಯವೈಖರಿ, ಜೀವನ…
