ಬಸವನಬಾಗೇವಾಡಿ: ದೈವಿ ಪುರುಷ ನರೇಂದ್ರ ಮೋದಿ ಅಂತಹ ಪ್ರಧಾನಿ ದೇಶಕ್ಕೆ ಸಿಕ್ಕಿರುವದು ನಮ್ಮೆಲ್ಲರ ಪುಣ್ಯ. ಹಿಂದು ಸನಾತನ ಧರ್ಮ ಉಳಿಯಲು ಮತ್ತೊಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲು ಲೋಕಸಭೆಯಲ್ಲಿ ನಾನು ಅವರ ಪರ ಕೈ ಎತ್ತಲು ನನಗೆ ಜಿಲ್ಲೆಯ ಮತಬಾಂಧವರು ಆಶೀರ್ವಾದ ಮಾಡಿ ಆಯ್ಕೆ ಮಾಡಬೇಕೆಂದು ಸಂಸದ, ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತಿಯ ಜನತಾ ಪಕ್ಷದ ಬಸವನಬಾಗೇವಾಡಿ ಮತಕ್ಷೇತ್ರದ ಮುತ್ತಗಿ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಭಗವಂತ ಆನೆಯಂತಹ ಶಕ್ತಿ ಕೊಟ್ಟಿದ್ದಾನೆ. ಈಗಾಗಲೇ ನನಗೆ ಮತದಾರರು ರಾಜ್ಯ-ಕೇಂದ್ರ ಸರ್ಕಾರಕ್ಕೆ ೧೨ ಸಲ ಆಯ್ಕೆ ಮಾಡಿದ್ದಾರೆ. ಕೇಂದ್ರ-ರಾಜ್ಯ ಎರಡು ಸರ್ಕಾರದಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ. ಇದು ನನ್ನ ಕೊನೆಯ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ನಾನು ಆಯ್ಕೆಯಾದರೆ ಯಾವುದೇ ಮಂತ್ರಿ ಸ್ಥಾನ ಬಯಸುವುದಿಲ್ಲ. ನಾನು ಮೋದಿ ಪ್ರಧಾನಿಯಾಗಲು ಅವರ ಪರ ಕೈ ಎತ್ತುವ ಆಸೆ ಹೊಂದಿದ್ದೇನೆ. ನನ್ನ ಆಸೆಯನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಂಡ ಅವರು, ದೇಶದಲ್ಲಿ ನರೇಂದ್ರ ಮೋದಿ ಅವರು ಇರುವವರೆಗೂ ಕಾಂಗ್ರೆಸ್ ಪಕ್ಷವು ನಾಶವಾಗಿ ಹೋಗಲಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಉಳಿಯುವುದಿಲ್ಲ. ಈಗಾಗಲೇ ಉತ್ತರ ಪ್ರದೇಶ ಸಿಎಂ ಯೋಗಿಜೀ ಅವರು ನರೇಂದ್ರ ಮೋದಿ ಅವರ ನಂತರ ನಮ್ಮ ಪಕ್ಷದಲ್ಲಿ ತಯಾರಿಯಾಗಿದ್ದಾರೆ ಎಂದರು.
ನಾನು ಜಿಲ್ಲೆಯಲ್ಲಿ ೧ ಲಕ್ಷ ಕೋಟಿ ಹಣ ತರುವ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಚಿಕ್ಕೋಡಿಯಲ್ಲಿ ಮೂರು ಸಲ, ವಿಜಯಪುರದಿಂದ ಮೂರು ಸಲ ಮತದಾರರು ನನ್ನ ಅಭಿವೃದ್ಧಿ ಕೆಲಸಗಳಿಂದ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ನಾನು ದಲಿತ ನಾಯಕನಿದ್ದರೂ ಸಹ ಎಲ್ಲ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಯಾವುದೇ ಸಂಘರ್ಷ ಇಲ್ಲದೇ ಕರೆದುಕೊಂಡು ಹೋಗುತ್ತಿದ್ದೇನೆ. ನಾನು ಜಿಲ್ಲೆಗೆ ಬೇಕಾದ ಅನುದಾನ ತರಲು ಸಾಕಷ್ಟು ಶ್ರಮಿಸುವ ಕಡೆಗೆ ಗಮನ ಕೊಟ್ಟಿದ್ದರಿಂದಾಗಿ ನಾನು ಜಿಲ್ಲೆಯ ಹಳ್ಳಿಗಳಿಗೆ ಹೋಗಿಲ್ಲ ನಿಜ. ವಿಮಾನ ನಿಲ್ದಾಣಕ್ಕೆ ೨೦೦-೩೦೦ ಕೋಟಿ ಅನುದಾನ ತಂದು ವಿಮಾನ ನಿಲ್ದಾಣ ಕಾಮಗಾರಿ ಮಾಡಿ ಅದು ಉದ್ಘಾಟನೆಗೆ ಸಿದ್ದಗೊಂಡಿದೆ. ಮುಂದಿನ ದಿನಗಳಲ್ಲಿ ಅದನ್ನು ಉದ್ಘಾಟಿಸಲಾಗುವುದು. ಜಿಲ್ಲೆಯಲ್ಲಿ ಹೆದ್ದಾರಿ, ಆಂತರಿಕ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ. ಮತದಾರರು ಈ ಸಲವೂ ನನ್ನನ್ನು ಬಹುಮತದೊಂದಿಗೆ ಆಯ್ಕೆ ಮಾಡುವ ವಿಶ್ವಾಸವಿದೆ ಎಂದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿದರು.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಶಿವಾನಂದ ಪಾಟೀಲರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತಾವು ಮಾಡಿರುವುದಾಗಿ ಹೇಳುತ್ತಾರೆ. ನಾನು ಎಂದಿಗೂ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಿದ್ದಾಗ ೧೭ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಮುಳವಾಡ ಏತನೀರಾವರಿ ಯೋಜನೆ ಜಾರಿಗೆ ಬಂದಿದ್ದರಿಂದ ಈಗ ಸಾಕಷ್ಟು ಜಮೀನು ನೀರಾವರಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಶಂಕರಗೌಡ ಪಾಟೀಲ, ಶಾಂತಾ ಬೀಳಗಿ, ದಾನಮ್ಮ ಕಮತಗಿ, ಟಿ.ಸಿ.ಯಳಮೇಲಿ, ಹಣಮಂತ್ರಾಯ ಗುಡದಿನ್ನಿ, ರಾಮಣ್ಣ ಗೋಡಿಹಾಳ, ಮಹಾಂತಪ್ಪಗೌಡ ಪಾಟೀಲ, ಬಸವರಾಜ ಬಿಜಾಪುರ, ಸುರೇಶಗೌಡ ಬಿರಾದಾರ, ಕಲ್ಲು ಸೊನ್ನದ, ಪ್ರಶಾಂತ ಪವಾರ, ಶಿವಾನಂದ ಅವಟಿ, ಮಲ್ಲನಗೌಡ ರಾಯಗೊಂಡ, ಸೋಮು ಹೊಸಮನಿ, ಸುರೇಶಗೌಡ ರಾಯಗೊಂಡ, ರೇವಣಸಿದ್ದ ಹಿರೇಮಠ, ಶಿವಶಂಕರಗೌಡ ಬಿರಾದಾರ, ಮಂಜು ಪತ್ತಾರ, ಮಂಜು ಮಾಳಜಿ, ಪರಶುರಾಮ ಮನಗೂಳಿ ಇತರರು ಇದ್ದರು. ಗಿರಿಧರ ಬಿರಾದಾರ ಸ್ವಾಗತಿಸಿದರು. ಶ್ರೀಶೈಲ ಮಾಳಜಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

