ಬಸವನಬಾಗೇವಾಡಿ: ಅಕ್ಕಮಹಾದೇವಿಯವರು ಇಡೀ ಜಗತ್ತಿನ ಮಹಿಳಾ ಕುಲಕ್ಕೆ ಧೈರ್ಯ ನೀಡಿದ ಸ್ವಾಭಿಮಾನವನ್ನು ಬಿತ್ತಿದ ಮೊದಲ ಕವಯತ್ರಿ ಹಾಗೂ ವೀರವೀರಾಗಣಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ತಾಳಿಕೋಟಿಯ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮಂಗಲಾ ಕೋಳೂರ ಹೇಳಿದರು.
ಪಟ್ಟಣದ ಕೇಶವ ನಗರದ ಈರಕಾರ ಮುತ್ಯಾನ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಹಾಗೂ ಯುವ ಘಟಕ ಸಹಯೋಗದಲ್ಲಿ ಅಕ್ಕಮಹಾದೇವಿ ಜಯಂತಿ, ಕಾಯಕ ದಿನ ಹಾಗೂ ದತ್ತಿ ಉಪನ್ಯಾಸಗಳ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ಮಹಿಳೆಯರಿಗೆ ಸ್ವತಂತ್ರವನ್ನು ನೀಡಿದ ಮಹಾ ಮಾನವತವಾದಿ ಅಣ್ಣ ಬಸವಣ್ಣನವರು. ಅನೇಕ ಹಿಂದುಳಿದ ಶರಣೆಯರನ್ನು ಮುಖ್ಯವಾಹಿನಿಗೆ ತಂದ ಕಾರಣಕ್ಕಾಗಿ ನಮಗೆಲ್ಲ ಅಣ್ಣನಾಗಿ ನಿಲ್ಲುತ್ತಾರೆ. ಶರಣರ ಬದುಕು ನಮಗೆಲ್ಲ ಆದರ್ಶಮಯವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಕೀಲ ಬಿ. ಆರ್. ಅಡ್ಡೋಡಗಿ ಅವರು ಮಾತನಾಡಿ, ಸಮಾಜದ ಹಲವಾರು ಜ್ವಲಂತ ಸಮಸ್ಯೆಗಳಿಗೆ 12ನೇ ಶತಮಾನದ ಶರಣರು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗುತ್ತಾರೆ. ಈ ಜಗತ್ತಿನಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶರಣರು ಮಾಡಿದ ಕ್ರಾಂತಿ ನಮಗೆ ಎಂದಿಗೂ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.
ಮಹಿಳೆಯರಿಗೆ ಜಗತ್ತಿನಲ್ಲಿ ಧ್ವನಿ ನೀಡಿದವರು, ಬಿದ್ದವರನ್ನು ಮೇಲೆ ಎತ್ತಿದ ಕೀರ್ತಿ 12ನೇ ಶತಮಾನದ ಶರಣರಿಗೆ ಸಲ್ಲುತ್ತದೆ. ಶರಣರ ವಚನಗಳನ್ನು ನಮ್ಮ ಯುವ ಜನಾಂಗಕ್ಕೆ ಮುಟ್ಟಿಸುವ ಕೆಲಸ ಇಂದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿದರು.
ವೇದಿಕೆ ಮೇಲೆ ಕದಳಿ ವೇದಿಕೆ ಅಧ್ಯಕ್ಷ ಸಾವಿತ್ರಿ ಕಲ್ಯಾಣಶೆಟ್ಟಿ, ನಿವೃತ್ತ ತಹಸಿಲ್ದಾರ ಬಸವರಾಜ ಕಲ್ಯಾಣಶೆಟ್ಟಿ, ಎಸ್. ಎಸ್ .ಝಳಕಿ, ಶರಣಪ್ಪ ಮುಳವಾಡ ,ಡಾ. ಬಸವರಾಜ ಹಡಪದ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದತ್ತಿದಾನ ನೀಡಿದ ದ್ರಾಕ್ಷಾಯಿಣಿ ಬಸವರಾಜ ತೊಂತನಾಳ, ಡಾಕ್ಟರೇಟ್ ಪದವಿ ಪಡೆದ ಬಸವರಾಜ ಹಡಪದ ಹಾಗೂ ಪೌರಕಾರ್ಮಿಕರಾದ ಕೃಷ್ಣ ಮ್ಯಾಗೇರಿ, ರುಕ್ಮವ್ವ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಡಾ. ಯುವರಾಜ್ ಮಾದನಶೆಟ್ಟಿ ಪ್ರಾಸ್ತವಿಕ ಮಾತನಾಡಿದರು. ಆರ್. ಜಿ. ಅಳ್ಳಗಿ ಸ್ವಾಗತಿಸಿದರು. ಎಸ್. ಐ. ಮನಗೂಳಿ ನಿರೂಪಿಸಿದರು. ವಿವೇಕಾನಂದ ಕಲ್ಯಾಣಶೆಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
ಮಹಿಳಾ ಕುಲಕ್ಕೆ ಸ್ವಾಭಿಮಾನ ಬಿತ್ತಿದ ಮೊದಲ ಕವಯಿತ್ರಿ ಅಕ್ಕಮಹಾದೇವಿ
Related Posts
Add A Comment

