ಇಂಡಿ: ಬರುವ ಮೇ ೭ ರಂದು ನಡೆಯುವ ಲೋಕಸಭೆ ಚುನಾವಣೆಯ ವೀಕ್ಷಕರಾಗಿ ಗುಜರಾತ ಡಾ|| ರತನ್ ಕುಮಾರಿ ಕನವರ್ ಮತ್ತು ಬಿಹಾರದ ಆಯ್.ಆರ್.ಎಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಅನುಪಕುಮಾರ ಇಂಡಿ ತಾಲೂಕಿಗೆ ಭೇಟಿ ನೀಡಿ ಇಲ್ಲಿಯ ಚುನಾವಣೆ ಪ್ರಕ್ರಿಯೆ ವೀಕ್ಷಿಸಿದರು.
ಸಾಮಾನ್ಯ ವೀಕ್ಷಕರಾಗಿ ಆಗಮಿಸಿದ ಡಾ|| ರತನ್ ಕುಮಾರಿ ಹಿಂಗಣಿ ಮತ್ತು ಅಗರಖೇಡ ಚೆಕ್ ಪೋಸ್ಟ ಅದಲ್ಲಿದೆ ಮತಗಟ್ಟೆ ಕೇಂದ್ರಗಳಾದ ಲಚ್ಯಾಣ, ಬರಗುಡಿ, ಭೂಯ್ಯಾರ ಶಾಲೆಗಳ ಮತಗಟ್ಟೆ ಕೇಂದ್ರಗಳಿಗೆ, ಇಂಡಿ ವಾರ್ಡ ನಂ ೧, ತಡವಲಗಾ ಶಾಲಾ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಮಸ್ಟರಿಂಗ ಮತ್ತು ಡಿ ಮಸ್ಟರಿಂದ ವ್ಯವಸ್ಥ ಪರೀಶಿಲಿಸಿದರು.
ನಂತರ ಪ್ರವಾಸಿ ಮಂದಿರದಲ್ಲಿ ಸೆಕ್ಟರ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡರು.
ಅನುಪಕುಮಾರ ಚುನಾವಣೆ ಖರ್ಚು ವೆಚ್ಚ ಪರಿಶೀಲಿಸಿದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ, ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮುಖ್ಯಾದಿಕಾರಿ ಮಹಾಂತೇಶ ಹಂಗರಗಿ, ಎಚ್.ಎಸ್.ಗುನ್ನಾಪುರ, ಹೊನ್ನುಟಗಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

