ಗೋಲಗೇರಿ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಬಿಜೆಪಿ ವಿರುದ್ದ ವಾಗ್ದಾಳಿ
ಬ್ರಹ್ಮದೆವನಮಡು: ರಾಹುಲ್ ಗಾಂಧಿ ಅವರು ೨೫ ಗ್ಶಾರಂಟಿಗಳನ್ನು ನೀಡುವ ಯೋಜನೆ ಮಾಡಿದ್ದಾರೆ. ರೈತರ ಸಾಲ ಸಂಪೂಣ೯ ಮನ್ನಾ, ಪ್ರತಿ ಕುಟುಂಬಕ್ಕೆ ವಷ೯ಕ್ಕೆ ೧ ಲಕ್ಷ ರೂಪಾಯಿ ಸೇರಿ ಅನೇಕ ಯೋಜನೆ ರೂಪಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಹುಲ್ ಗಾಂಧಿ ಮತ್ತು ಮಲ್ಲಿಕಾಜು೯ನ ಖಗೆ೯ ಜಾರಿಗೆ ತರುತ್ತಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಶಥಿ೯ ಪ್ರೊ.ರಾಜು ಆಲಗೂರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಡವರು, ದೀನದಲಿತರ ಹಾಗೂ ರೈತರ ಅಭಿವೃದ್ದಿಗಾಗಿ ಸ್ವಾತಂತ್ಶ್ರಾನಂತರ ವಿವಿಧ ಯೋಜನೆಗಳನ್ನು ಜಾರಿಗೆಗೊಳಿಸಿ, ಸಾಮಾಜಿಕ ನ್ಶಾಯ ಒದಗಿಸಿದ್ದು ಕಾಂಗ್ರೆಸ್ ಪಕ್ಷ. ದೇಶವನ್ನು ಲೂಟಿ ಮಾಡಿದ ನಂತರ ದೇಶದಲ್ಲಿ ತಾಂಡವವಾಡುತ್ತಿತ್ತು. ಆ ಸಂದಭ೯ದಲ್ಲಿ ಆಹಾರ ಭದ್ರತೆ ಕೊಟ್ಟಿದ್ದು ಕಾಂಗ್ರೆಸ್. ನೆಹರು ಅವರು ಉದ್ದಿಮೆಗಳನ್ನು ಸ್ಥಾಪಿಸಿ ಔದ್ಶೋಗಿಕ ಕ್ರಾಂತಿ ಮಾಡಿ ಯುವಕರಿಗೆ ಉದ್ಶೋಗ ನೀಡಿದರು.ಶಾಲೆ ಕಾಲೇಜು ವಿಶ್ವವಿದ್ಶಾಲಯ ಸ್ಥಾಪಿಸಿದರು. ಇಂದಿರಾ ಗಾಂಧಿ ೨೦ ಅಂಶಗಳ ಕಾಯ೯ಕ್ರಮ ಜಾರಿ ಮಾಡಿ ಬ್ಶಾಂಕುಗಳ ರಾಷ್ಟ್ರೀಕರಣ, ಬಡವರಿಗೆ ರೇಶನ್ ಕಾರ್ಡ ವಿತರಣೆ, ವೃದ್ದಾಪ್ಯ ವೇತನ, ಭೂಮಿ ಹಂಚಿಕೆ ಮಾಡಿ ಸಾಮಾಜಿಕ ನ್ಶಾಯ ಒದಗಿಸಿದರು. ಆದರೆ ಮೋದಿ ಏನು ಮಾಡಿದ್ದಾರೆ. ಬೆಲೆ ಏರಿಕೆ, ರೂಪಾಯಿ ಮೌಲ್ಶ ಕುಸಿತ,ನೋಟ್ ಬ್ಶಾನ್ ಮಾಡಿ ದೇಶವನ್ನು ಸಾಲದ ಸುಳಿಗೆ ತಳ್ಳಿದ್ದಾರೆ. ಮೋದಿ ೨೦೧೪ರಲ್ಲಿ ಹೇಳಿದಂತೆ ಅಚ್ಛೆ ದಿನ್ ಬರಲಿಲ್ಲ. ಕಪ್ಪು ಹಣ ಬರಲಿಲ್ಲ. ಉದ್ಶೋಗ ನೀಡಲಿಲ್ಲ. ಬದಲಾಗಿ ನಿರುದ್ಶೋಗ ಸೃಷ್ಟಿಸಿದ್ದಾರೆ. ದೇಶದಲ್ಲಿ ಜನರ ಭಾವನೆಗಳನ್ನು ಒಡೆದಿದ್ದಾರೆ. ಚುನಾವಣಾ ಬಾಂಡ್ ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ದೆಹಲಿ ಅಬಕಾರಿ ಹಗರಣದಲ್ಲಿ ೭೬೦೦ ಕೋಟಿ ಹಣ ವಸೂಲಿ ಮಾಡಿದ್ದಾರೆ. ಐಟಿ,ಇಡಿ ದುಬ೯ಳಕೆ ಮಾಡಿಕೊಂಡು ಹಲವರನ್ನು ಬಂದಿಸಿದ್ದಾರೆ. ವಿಜಯಪುರ ಕಾಂಗ್ರೆಸ್ ಅಭ್ಶಥಿ೯ ರಾಜು ಆಲಗೂರ ಸೌಮ್ಶ, ಸರಳ ಸಜ್ಜನಿಕೆಯ ವ್ಶಕ್ತಿತ್ವ ಹೊಂದಿದ್ದಾರೆ. ಎರಡು ಬಾರಿ ಶಾಸಕರಾಗಿ ಅಭಿವೃದ್ದಿ ಕೆಲಸ ಕಾಯ೯ಗಳನ್ನು ಮಾಡಿದ್ದಾರೆ. ಈ ಬಾರಿ ಆಲಗೂರ ಅವರಿಗೆ ಬೆಂಬಲಿಸಿ ಎಂದು ಮತಯಾಚಿಸಿ ಮನವಿ ಮಾಡಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಸಕಾ೯ರದ ಐದು ಗ್ಶಾರಂಟಿಗಳು ಜನಸಾಮಾನ್ಶರಿಗೆ ಅನುಕೂಲವಾಗಿವೆ. ರಮೇಶ ಜಿಗಜಿಣಗಿ ಅವರು ಸಂಸದರಾಗಿ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಶ. ಜಿಲ್ಲೆಯ ಸವಾ೯ಂಗೀಣ ಅಭಿವೃದ್ದಿಗೆ ಪ್ರೊ.ರಾಜು ಆಲಗೂರ ಅವರನ್ನು ಬೆಂಬಲಿಸಿ ಎಂದರು.
ಕಾಂಗ್ರೆಸ್ ಯುವ ಮುಖಂಡ ರವಿರಾಜ ದೆವವರಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಶಕ್ಷ ಸುರೇಶ ಪೂಜಾರಿ, ಜಿಪಂ ಮಾಜಿ ಸದಸ್ಶ ನರಸಿಂಗ ಪ್ರಸಾದ ತಿವಾರಿ, ವ್ಮಂತಗೌಡ ಪಾಟೀಲ, ಮಲ್ಲಣ್ಣ ಸಾಲಿ, ಮುರೆಗೆಪ್ಪಗೌಡ ರದ್ದೆವಾಡಗಿ, ಚನ್ನೂ ವಾರದ, ಎಂ.ಎ.ಖತೀಬ, ಅರವಿಂದ ಹಂಗರಗಿ, ಪ್ರವೀಣ ಕಂಟಿಗೊಂಡ,ವಿಜುಗೌಡ ಬಿರಾದಾರ ( ಕರವಿನಾಳ), ಕುಮಾರ ದೇಸಾಯಿ, ಶಿವು ಹತ್ತಿ, ಶ್ರೀಶೈಲ್ ಜಾಲವಾದಿ, ಬಸವರಾಜ ಮಾರಲಭಾವಿ, ಬಿ.ವೈ.ಅಮರಗೋಳ, ಬಾಪುಗೌಡ ಪಾಟೀಲ ಕಣ್ಣಗುಡ್ಡಿಹಾಳ, ಏ.ಡಿ ಕೋರವಾರ ಸೇರಿದಂತೆ ಮತ್ತಿತ್ತರಿದ್ದರು.
ರಮೇಶ ತಳವಾರ ಸ್ವಾಗತಿಸಿ ವಂದಿಸಿದರು.
ಈ ವೇಳೆ ಎಎಪಿ ಮುಖಂಡ ಮುರೆಗೆಪ್ಪಗೌಡ ರದ್ದೆವಾಡಗಿ ಎಎಪಿ ಪಕ್ಷವನ್ನು ತೊರೆದು ಸಚಿವ ಎಂ.ಬಿ.ಪಾಟೀಲ, ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

